November 22, 2024
IMG-20171121-WA0033

ಶ್ರೀ ರಾಮಭಂಡಾರಿಯವರು ನಿನ್ನೆ ಸಂಜೆ 5 ಗಂಟೆಗೆ ಉಡುಪಿಯ ಮೂಡನಿಡಂಬೂರಿನ ತಮ್ಮ ಸ್ವಗೃಹ ಪ್ರಿಯಾನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು.ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಶ್ರೀಮತಿ ಪಾರ್ವತಿ ರಾಮಭಂಡಾರಿ, ಪುತ್ರಿ ,ನಾಲ್ವರು ಪುತ್ರರು,ಅಳಿಯ,ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

 

ಇವರು ಸುಮಾರು ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಮುಂಬಯಿಯಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದು ನಂತರ ಊರಿಗೆ ಬಂದು ಸಲೂನ್ ಮತ್ತು ಸ್ವಂತ ಬೇಸಾಯ ವೃತ್ತಿಯನ್ನು ನಡೆಸುತ್ತಿದ್ದರು. ಅವರ ಕುಟುಂಬದವರಿಗೆ, ಅವರ ಬಂಧುಬಳಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *