ಕರ್ನಾಟಕ ರಾಜ್ಯದ ಮಾಧ್ಯಮ ಅಕಾಡೆಮಿ ಪ್ರಶಸ್ತಿ-2017ನೇ ಸಾಲಿನ ಮಾಧ್ಯಮ ವಾರ್ಷಿಕ ಪ್ರಶಸ್ತಿ ಈ ಬಾರಿ ನಮ್ಮ ಭಂಡಾರಿ ಸಮಾಜದ ಬಂಧು ಶ್ರೀ ರವಿಬಿದನೂರು ಅವರಿಗೆ ಒಲಿದು ಬಂದಿರುವುದು ನಾವೆಲ್ಲ ಹೆಮ್ಮೆ ಪಡುವ ಸಂಗತಿಯಾಗಿದೆ. ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಯನ್ನು ಪರಿಗಣಿಸಿ ಎಂ.ಸಿದ್ದರಾಜುರವರ ಅಧ್ಯಕ್ಷತೆಯಲ್ಲಿ ನವೆಂಬರ್ 27 ರಂದು ನೆಡೆದ ಸರ್ವ ಸದಸ್ಯರ ಸಭೆಯಲ್ಲಿ ಶ್ರೀ ರವಿ ಬಿದನೂರು ಅವರ ಹೆಸರನ್ನು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಪರಿಗಣಿಸಲಾಯಿತು.
ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದವರು. ನಗರದ ಐತಿಹಾಸಿಕ ಹೆಸರು “ಬಿದನೂರು” ಆಗಿರುವುದರಿಂದ, ತಮ್ಮ ಹೆಸರಿನೊಂದಿಗೆ ಬಿದನೂರು ಸೇರಿಸಿಕೊಂಡು ರವಿಬಿದನೂರು ಎಂದೇ ಹೆಸರಾದರು. ಪೆರ್ಡೂರು ಭೋಜಭಂಡಾರಿ ಮತ್ತು ಸೀತಮ್ಮ ದಂಪತಿಗಳ ಮಗನಾದ ಇವರ ಪತ್ನಿ ಶ್ರೀಮತಿ ಕುಮುದಾ ಬನ್ನಂಜೆಯವರು. ಕುಮಾರಿ ಸಮೃದ್ಧಿ ಬಿದನೂರು ಇವರ ಮುದ್ದಿನ ಮಗಳು.
ಕಾಲೇಜು ದಿನಗಳಲ್ಲಿ ಹವ್ಯಾಸಿ ಬರಹಗಾರರಾಗಿ ಪ್ರಜಾವಾಣಿ, ಉದಯವಾಣಿ,ತರಂಗ,ಸುಧಾ ಹೀಗೆ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾ ಮಾಧ್ಯಮ ಲೋಕಕ್ಕೆ ಪ್ರವೇಶಿಸಿದ ಇವರು ನಂತರ ಜನವಾಹಿನಿ ಪತ್ರಿಕೆಗೆ ಹೊಸನಗರ ತಾಲೂಕಿನ ವರದಿಗಾರರಾಗಿ, ನಮ್ಮ ನಾಡು,ನಾವಿಕ,ಕರುನಾಡು ಸಂಜೆ ಪತ್ರಿಕೆಗಳಿಗೆ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದರು.ರಾಜ್ಯ ಮಟ್ಟದ ಪತ್ರಿಕೆ ಕನ್ನಡ ಫ್ರಭ ದಲ್ಲಿ ಹತ್ತು ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದರು.ಬಳಿಕ ಉಡುಪಿಯ ಸ್ಪಂದನ ಚಾನಲ್ ನಲ್ಲಿ ಕೆಲಕಾಲ ತೊಡಗಿಸಿಕೊಂಡಿದ್ದವರು, ಕಳೆದೆರಡು ವರ್ಷಗಳಿಂದ ಪ್ರತಿಷ್ಠಿತ ಸಮಯ ನ್ಯೂಸ್ ಚಾನಲ್ ನಲ್ಲಿ ಸಕ್ರಿಯರಾಗಿದ್ದಾರೆ.
ಹಲವಾರು ಸಂಘ ಸಂಸ್ಥೆಗಳು, ಲಯನ್ಸ್ ಕ್ಲಬ್ ಗಳು ಇವರನ್ನು ಗುರುತಿಸಿ ಸನ್ಮಾನಿಸಿವೆ.ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.2011ರಲ್ಲಿ ನವದೆಹಲಿಯ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರಿಗೊಲಿದಿತ್ತು.ರಾಜ್ಯ ಸರಕಾರ ಮಾಧ್ಯಮ ಮಿತ್ರರಿಗೆ ನೀಡುವ ಅತೀ ಶ್ರೇಷ್ಠ ಪ್ರಶಸ್ತಿಯಾದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದಿರುವ ಅವರನ್ನು ಅಭಿನಂದಿಸಲು ಕರೆಮಾಡಿದ ಭಂಡಾರಿವಾರ್ತೆ ಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು. ಇನ್ನೂ ಹತ್ತು ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರಲಿ,ಮಾಧ್ಯಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ,ಅವರ ಅಕ್ಷರಸೇವೆ ನಿರಂತರವಾಗಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶ್ರೀ ರವಿಬಿದನೂರು ಅವರಿಗೆ ಶುಭ ಹಾರೈಸುತ್ತದೆ.
ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
Dear Brother,
# Karnataka Media Award – 2017 is an another feather added to your success cap
# This is nothing but the result of your dedication, honesty, hard work and sincere effort in the media field.
# It’s my duty to thank God for providing us the excellent time to wish.
Tnk u ಶ್ರೀ brother.. for your wishes, concern & support.
ಅಕಾಡೆಮಿ ಪ್ರಶಸ್ತಿ ಕುರಿತು ಅಭಿನಂದಿಸಿ ಸುದ್ದಿ ಪ್ರಕಟಿಸಿದ ಭಾಸ್ಕರ್ ಭಂಡಾರಿ ಶಿರಾಳಕೊಪ್ಪ ಮತ್ತು CEO ಕಟ್ಲಾಜೀ ಮತ್ತು ಭಂಡಾರಿವಾರ್ತೆ ಟೀಂಗೆ ಅಂತರಾಳದ ಕೃತಜ್ಞತೆಗಳು.