ಬೇಕಾಗುವ ಸಾಮಾಗ್ರಿಗಳು
ಮೀನು-1/2 ಕೆ ಜಿ
ಒಣಮೆಣಸು-50ಗ್ರಾಂ
ಹುಣಸೆಹುಳಿ-ಒಂದು ನಿಂಬೆ ಗಾತ್ರದಷ್ಟು
ಶುಂಠಿ-1/2 ಇಂಚು
ಈರುಳ್ಳಿ-1
ಹಸಿಮೆಣಸು3-4
ಕೊಬ್ಬರಿ ಎಣ್ಣೆ-6-7 ಚಮಚ
ಮಾಡುವ ವಿದಾನ:
ಮೀನನ್ನು ಶುಚಿ ಮಾಡಿ ದಪ್ಪ ದಪ್ಪ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ.ಬಾಣಲೆಗೆ 3ಚಮಚ ಕೊಬ್ಬರಿ ಎಣ್ಣೆ ಹಾಕಿ ಅದಕ್ಕೆ ಒಣಮೆಣಸು ಹಾಕಿ ಸ್ವಲ್ಪ ಹುರಿಯಬೇಕು.ನಂತರ ಒಣಮೆಣಸಿನ ಜೊತೆ ಹುಳಿ,ಕಾಯಿತುರಿ ಹಾಕಿ ನುಣ್ಣಗೆ ರುಬ್ಬಬೇಕು.ರುಬ್ಬಿದ ಮಿಶ್ರಣಕ್ಕೆ ಸ್ವಲ್ಪವೇ ನೀರು ಸೇರಿಸಿ ಕುದಿಯಲು ಇಟ್ಟು ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸು,ಶುಂಟಿ,ಈರುಳ್ಳಿ ಹಾಕಿ ಕುದಿಯಲು ಶುರುವಾದಾಗ ಮೀನಿನ ತುಂಡುಗಳನ್ನು ಹಾಗೂ ಒಂದೆರಡು ಚಮಚ ಕೊಬ್ಬರಿ ಎಣ್ಣೆ ಹಾಕಿ ಗಸಿ ಹದಕ್ಕೆ ಬರುವಷ್ಟು ಕುದಿಸಿದರೆ,ಬಂಗಡೆ ಮೀನಿನ ಗಸಿ ರೆಡಿ
ಪ್ರತಿಭಾ ಭಂಡಾರಿ,
ಹರಿಹರಪುರ
ಬಂಗಡೆ ಮೀನಿನ ಗಸಿ ಬಾಯಲ್ಲಿ ನೀರು ತರಿಸಿತು.ಗಸಿ ಮಾಡುವ ವಿದಾನ ಇಷ್ಟು ಸುಲಭ ಎಂದು ಗೊತ್ತಿರಲಿಲ್ಲ.