January 18, 2025
55

ಧ್ಯಾನ -21  

    ಶೋಕ ಎಂದರೇನು.? ಅದು ನಿಮ್ಮಿಂದ ಬೇರೆಯಾಗಿ, ಪ್ರತ್ಯೇಕವಾಗಿ ಇದೆಯೇ? ಅದು ಅಂತರಂಗದಲ್ಲೇ ಆಗಲಿ, ಪ್ರತ್ಯೇಕವಾಗಿದ್ದು ನೀವಿ ಅದನ್ನು ಅನುಭವಿಸುತ್ತಾ ಗಮನಿಸುತ್ತಾ ಇದ್ದೀರಾ? ಆಗುತ್ತೀರುವ ಅನುಭವವನ್ನು ನೀವು ಸುಮ್ಮನೆ ನೋಡುತ್ತಿರುವ ವೀಕ್ಷಕರು ಮಾತ್ರವಾಗಿದ್ದೀರಾ? ಅಥವಾ ಶೋಕವೆಂಬುದು ಬೇರೆಯದೇ ಹೌದೆ? ನಿಜವಾಗಿಯೂ ಇದು ಮುಖ್ಯವಾದ ಸಂಗತಿಯಲ್ಲವೇ? ನಾನು ವೇದನೆಪಡುತ್ತಿದ್ದೇನೆ ಎಂದಾಗ ಆ ಮಾತಿನ ಅರ್ಥವೇನು? ನಾನು ವೇದನೆಯಿಂದ ಬೇರೆ ಆಗಿದ್ದೇನೆ ಎಂದೇ? ಇದೇ ಪ್ರಶ್ನೆ ಅಲ್ಲವೇ? ಪರಿಶೀಲಿಸೋಣ.

        ನನ್ನನ್ನು ಯಾರು ಪ್ರೀತಿಸುತ್ತಿಲ್ಲ, ಮಗ ಸತ್ತುಹೋದ, ಇತ್ಯಾದಿ ಇತ್ಯಾದಿ ದುಃಖ ಇದೆ. ನನ್ನ ಒಂದು ಭಾಗ ಯಾಕೆ ಹೀಗೆ, ಯಾಕೆ ನನಗೆ ದುಃಖವಾಗುತ್ತಿದೆ. ಎಂದು ವಿವರಣೆಯನ್ನು ಕೋರುತ್ತಾ, ಕಾರಣಗಳನ್ನು ತಿಳಿಯಬಯಸುತ್ತದೆ. ನನ್ನ ಇನ್ನೊಂದು ಭಾಗ ಬೇರೆ ಬೇರೆ ಕಾರಣಗಳಿಗೆ ನೋವು ತಿನ್ನುತ್ತಾ ವೇದನೆಪಡುತ್ತಾ ಇರುತ್ತದೆ. ಈ ಎಲ್ಲ ವೇದನೆಯಿಂದ, ದುಃಖದಿಂದ ಬಿಡುಗಡೆಯನ್ನು ಬಯಸುವ, ದುಃಖವನ್ನು ಮೀರಲು ಬಯಸುವ ಮತ್ತಿನ್ನೊಂದು ಭಾಗವು ಇರುತ್ತದೆ. ಇವೆಲ್ಲ ಭಾಗಗಳೂ ಸೇರಿ ನಾವು ನಾವಾಗಿರುತ್ತೇವೆ, ಅಲ್ಲವೇ? ನನ್ನದೇ ಒಂದು ಭಾಗ ದುಃಖವನ್ನು ನಿರಾಕರಿಸುತ್ತಾ, ಪ್ರತಿರೋಧಿಸುತ್ತಾ, ಇನ್ನೊಂದು ಭಾಗ ಸಿದ್ದಾಂತಗಳಲ್ಲಿ, ಥಿಯರಿಗಳಲ್ಲಿ ಸಿಕ್ಕಿಹಾಕಿಕೊಂಡು ವಿವರಣೆಗಳನ್ನು ಬಯಸುತ್ತಾ, ಮತ್ತಿನ್ನೊಂದು ಭಾಗ ದುಃಖದಿಂದ ಪಲಾಯನಮಾಡಲು ಬಯಸುತ್ತಾ ಇರುವಾಗ ನಾನು ಹೇಗೆ ತಾನೇ ದುಃಖವನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಿ? ಅಖಂಡವಾಗಿ ಅರ್ಥಮಾಡಿಕೊಳ್ಳುವುದು ಸಾಮರ್ಥ್ಯ ನನ್ನಲ್ಲಿದ್ದಾಗ ಮಾತ್ರ ದುಃಖದಿಂದ ಬಿಡುಗಡೆಯನ್ನು ಪಡೆಯುವ ಸಾಧ್ಯತೆ ಇರುತ್ತದೆ. ಆದರೆ ನಾನು ಬೇರೆ ಬೇರೆ ದಿಕ್ಕುಗಳಲ್ಲಿ ಹರಿದು ಹಂಚಿಹೋಗಿದ್ದಾಗ ದುಃಖದ ಸತ್ಯವನ್ನು ಕಾಣಲಾರದವನಾಗುತ್ತೇನೆ.

      ದಯವಿಟ್ಟು ಎಚ್ಚರವಾಗಿ ನೋಡಿಕೊಳ್ಳಿ. ನಾನು ಬೇರೆ, ನಾನು ಅನುಭವಿಸುತ್ತಿರುವ ದುಃಖ ಬೇರೆ ಎಂಬ ವಿಭಜನೆ ಇಲ್ಲದೆ ಇದ್ದರೆ ಮಾತ್ರ ಇರುವ ಸತ್ಯ, ವಾಸ್ತವ ಅರ್ಥವಾಗುತ್ತದೆ. ಇದೇ ಸತ್ಯ.

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ವೆಂಕಟೇಶ ಭಂಡಾರಿ ಕುಂದಾಪುರ, ಭಂಡಾರಿವಾರ್ತೆ

2 thoughts on “ಜಿಡ್ಡು ಪ್ರವಚನ – ಅಖಂಡವಾದ ಅರ್ಥ ಅರಿವು

  1. 😊Happiness or 😕Sorrow whatever it may be,
    👍EXPERIENCE and ⏰TIME shape our valuable life.
    One should be REALLISTIC.
    Do you agree?

Leave a Reply

Your email address will not be published. Required fields are marked *