ದಿವಂಗತ ಕುಟ್ಟಿಭಂಡಾರಿ ಪಡುಬಿದ್ರಿಯವರ ಧರ್ಮಪತ್ನಿ ಶ್ರೀಮತಿ ರಮಣಿ.ಕೆ.ಭಂಡಾರಿಯವರು ಮುಂಬಯಿಯ ಕಲ್ಯಾಣ್ ನಲ್ಲಿ ಡಿಸೆಂಬರ್ 9 ರ ಶನಿವಾರ ಬೆಳಗಿನ ಜಾವ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮುಂಬಯಿಯ ಖ್ಯಾತ ನ್ಯಾಯವಾದಿಗಳು, ಮುಂಬಯಿ ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷರೂ ಆಗಿರುವ ಶ್ರೀ ಶೇಖರ್.ಎಸ್.ಭಂಡಾರಿ ಮತ್ತು ಮುಂಬಯಿಯ ಶ್ರೀ ವೆಂಕಟೇಶ್ ಭಂಡಾರಿ ಚೆಂಬೂರು ಇವರುಗಳ ಅತ್ತೆಯಾದ ಇವರು ಮೂವರು ಹೆಣ್ಣು ಮಕ್ಕಳು,ಇಬ್ಬರು ಗಂಡು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ದುಃಖತಪ್ತ ಕುಟುಂಬದವರಿಗೆ, ಅವರ ಬಂಧು ಬಳಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ. ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
— ಭಂಡಾರಿವಾರ್ತೆ