November 22, 2024
udyoga copy

ಭಂಡಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆರಂಭಗೊಂಡ ಭಂಡಾರಿ ಸಮುದಾಯದ ಮನೆ ಮನದ ಮಾತು ಭಂಡಾರಿವಾರ್ತೆ ಇಂದು ತನ್ನ ಉದ್ಧೇಶ ಈಡೇರಿಕೆಯಲ್ಲಿ ಯಶಸ್ವಿ ಹೆಜ್ಜೆಯನ್ನಿಡುತ್ತಿದೆ. ಇದೀಗ ಭಂಡಾರಿವಾರ್ತೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿ ನಿಂತಿದೆ…!

ನಿರುದ್ಯೋಗಿ ಭಂಡಾರಿ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಭಂಡಾರಿವಾರ್ತೆಯಲ್ಲಿ ಆರಂಭಿಸಲಾದ ಭಂಡಾರಿ ಉದ್ಯೋಗ ಅಂಕಣ ಹಲವಾರು ನಿರುದ್ಯೋಗಿ ಯುವಕರಿಗೆ ಆಶಾಕಿರಣವಾಗಿದೆ. ಈ ಅಂಕಣವು ನಮ್ಮ ಸಮಾಜದ ಉದ್ಯೋಗಾಕಾಂಕ್ಷಿಗಳಿಗೆ ಕೈಪಿಡಿಯಂತಾಗಿದೆ. ಭಂಡಾರಿವಾರ್ತೆ ಮತ್ತು ಭಂಡಾರಿ ಉದ್ಯೋಗದ ಸಹಭಾಗಿತ್ವದಲ್ಲಿ, E K Kanoo Toyota,Lex us Bahrain Agents ನ ಸೀನಿಯರ್ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್ ಆಗಿರುವ ಶ್ರೀ ರಮೇಶ್ ಮಂಜೇಶ್ವರ ಇವರ ಸಹಕಾರದೊಂದಿಗೆ ಬಹ್ರೇನ್ ನಲ್ಲಿ ಸರ್ವೀಸ್ ಅಸಿಸ್ಟೆಂಟ್ ಹುದ್ದೆಗಳಿಗಾಗಿ ಅರ್ಜಿಯನ್ನು ಅಹ್ವಾನಿಸಲಾಗಿತ್ತು. ಅರ್ಜಿ ಹಾಕಿದ ಹದಿನೇಳು ಅಭ್ಯರ್ಥಿಗಳಲ್ಲಿ ಸೂಕ್ತ ದಾಖಲೆ ಒದಗಿಸಿದ ಹನ್ನೊಂದು ಜನರನ್ನು ಭಂಡಾರಿವಾರ್ತೆಯ CEO ಶ್ರೀ ಪ್ರಕಾಶ್ ಭಂಡಾರಿ ಕಟ್ಲಾರವರು ಮತ್ತು ಶ್ರೀ ರಮೇಶ್ ಮಂಜೇಶ್ವರ್ ಇವರುಗಳು ಮಂಗಳೂರಿನಲ್ಲಿ ಸಂದರ್ಶನ ಮಾಡಿ ಐದು ಜನರನ್ನು ಆಯ್ಕೆ ಮಾಡಿದ್ದಾರೆ.ಆಯ್ಕೆಯಾದ ಐದೂ ಜನ ಯುವಕರು ನಮ್ಮ ಭಂಡಾರಿ ಸಮಾಜದವರೆಂದು ತಿಳಿಸಲು ನಮಗೆ ಹೆಮ್ಮೆಯೆನಿಸುತ್ತದೆ.ಆ ಐದು ಜನರಲ್ಲಿ ಕೊನೆಯದಾಗಿ ಮೂವರನ್ನು ಅಂತಿಮಗೊಳಿಸಲಾಗುತ್ತದೆ. ಅಂತಿಮಹಂತದಲ್ಲಿ ಆಯ್ಕೆಯಾದ ಮೂವರು ಅಭ್ಯರ್ಥಿಗಳು ಸಧ್ಯದಲ್ಲಿಯೇ ವೈದ್ಯಕೀಯ ಪ್ರಮಾಣಪತ್ರ ಪಡೆದು ಬಹ್ರೇನ್ ನಲ್ಲಿ ಸರ್ವೀಸ್ ಅಸಿಸ್ಟೆಂಟ್ ಹುದ್ದೆಯ ಸೇವೆಗೆ ಸೇರಲಿದ್ದಾರೆ.

 

ಇನ್ನು ಮುಂದೆಯೂ ಭಂಡಾರಿವಾರ್ತೆಯಿಂದ ಭಂಡಾರಿ ಕುಟುಂಬಗಳನ್ನು ಸದೃಢಗೊಳಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ.ಭಂಡಾರಿ ಸಮುದಾಯದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಭಂಡಾರಿ ಯುವಕರಿಗೆ ಯೋಗ್ಯ ಉದ್ಯೋಗ ದೊರಕಬೇಕು,ಸೂಕ್ತ ಆದಾಯ ಲಭಿಸಬೇಕು.ಹಾಗಾದಾಗ ಮಾತ್ರ ಅವರ ಜೀವನಮಟ್ಟದಲ್ಲಿ ಸುಧಾರಣೆ ಸಾಧ್ಯ ಎಂಬುದನ್ನು ಮನಗಂಡು ಕಾರ್ಯ ನಿರ್ವಹಿಸುತ್ತಿರುವ ಭಂಡಾರಿವಾರ್ತೆಯ ಮುಖ್ಯ ಕಾರ್ಯ ನಿರ್ವಾಹಕ ಶ್ರೀ ಪ್ರಕಾಶ್ ಭಂಡಾರಿ ಕಟ್ಲಾ ಮತ್ತು ಇವರೊಂದಿಗೆ ಕೈ ಜೋಡಿಸಿರುವ ಶ್ರೀ ರಮೇಶ್ ಮಂಜೇಶ್ವರ ಅವರ ನೆರವನ್ನು ಸಮಸ್ತ ಭಂಡಾರಿ ಸಮುದಾಯ ಸ್ಮರಿಸಲೇ ಬೇಕು. ಪ್ರಸ್ತುತ ಉದ್ಯೋಗ ಪಡೆದಿರುವ ಸಮುದಾಯದ ಯುವಕರನ್ನು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃದಯಪೂರ್ವಕವಾಗಿ ಅಭಿನಂದಿಸುತ್ತಾ ಅವರ ಭವಿಷ್ಯತ್ತಿಗೆ ಶುಭಹಾರೈಸುತ್ತದೆ.

ವರದಿ :ಭಾಸ್ಕರ್ ಭಂಡಾರಿ ಶಿರಾಳಕೊಪ್ಪ

1 thought on “‘ಭಂಡಾರಿ ವಾರ್ತೆ’ ಮತ್ತೊಂದು ಮೈಲುಗಲ್ಲು ಸಮುದಾಯದ ಯುವಕರಿಗೆ ಉದ್ಯೋಗದ ಅವಕಾಶ

  1. ಉದ್ಯೋಗ ವ್ಯಕ್ತಿಯನ್ನು ಆರ್ಥಿಕವಾಗಿ ಸಬಲ ಗೊಳಿಸಿ ವ್ಯಕ್ತಿಯ ಅವಲಂಬಿತರಲ್ಲೂ ಸಹ ನೆಮ್ಮದಿ ಯನ್ನು ಉಂಟುಮಾಡುತ್ತದೆ. ಹೆಚ್ಚು ಹೆಚ್ಚು ಇಂತಹ ಕಾರ್ಯಗಳು ನಡೆಯುತ್ತಿರಲಿ.

Leave a Reply

Your email address will not be published. Required fields are marked *