ಬಾಲನಟ ಮಾಸ್ಟರ್| ಪ್ರೇರಣ್
ಪ್ರೇರಣೆ ಸಿನಿಮಾದ ಬಾಲ ನಾಯಕ ನಟ. ಪ್ರೇರಣ್ ನಾಲ್ಕು ವರ್ಷದವನಾಗಿರುವಾಗ ಸುಧಾಕರ್ ಬನ್ನಂಜೆ ನಿರ್ದೇಶನದ ದೇವೆರ್ ಎಂಬ ತುಳು ಚಿತ್ರದಲ್ಲಿ ಬಾಲನಟನಾಗಿ ಬಣ್ಣ ಹಚ್ಚಿ ದ್ವಿಪಾತ್ರದಲ್ಲಿ ಇವನ ಅಭಿನಯ ಎಲ್ಲರ ಮೆಚ್ಚುಗೆ ಗಳಿಸಿತ್ತು. ಸುಧಾಕರ್ ಬನ್ನಂಜೆ ನಿರ್ಮಾಣ ನಿರ್ದೇಶನದ ನಾನು ಹೇಮಂತ್ ಅವಳು ಸೇವಂತಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಅನಂತರ ಮಕ್ಕಳ ಚಿತ್ರ ಪ್ರೇರಣೆ ಎಂಬ ಚಿತ್ತದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾನೆ. ಈ ಚಿತ್ರ ಈಗಾಗಲೇ ನಿರ್ಮಾಣವಾಗಿದ್ದು ಶಾಲೆಗಳಲ್ಲಿ ಮತ್ತು ಥೀಯೇಟರ್ ಗಳಲ್ಲಿ ಬಿಡುಗಡೆ ಆಗಲಿದೆ. ಸುಧಾಕರ್ ಬನ್ನಂಜೆ ನಿರ್ದೇಶನದ ಈ ಚಿತ್ರಕ್ಕೆ ಗಂಗಾಧರ ಬಿರ್ತಿ, ಉದಯ್ ಗೌಡ, ಶಂಕರ್, ಅಮೃತ್ ಶೆಣೈ ಮಮತಾ ಬನ್ನಂಜೆ ನಿರ್ಮಾಪಕರಾಗಿದ್ದಾರೆ. ಈ ಚಿತ್ರದಲ್ಲಿ ಪ್ರೇರಣ್ ಒಂದು ಹಾಡು ಹಾಡಿ ಗಾಯಕನಾಗಿ ಹೊರ ಹೊಮ್ಮಿದ್ದಾನೆ. ಸುಧಾಕರ್ ಬನ್ನಂಜೆ ರಚಿಸಿ ವಿ ಮನೋಹರ್ ಸಂಗೀತ ನೀಡಿರುವ ಜಾತಿ ಮತ ಧರ್ಮ ಕ್ಕಿಂತ ನಮ್ಮ ದೇಶ ಮೊದಲು ಎಂಬ ಈ ದೇಶ ಭಕ್ತಿ ಗೀತೆ ಯೂಟ್ಯುಬ್ ನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದೆ.
ಸುಧಾಕರ್ ಬನ್ನಂಜೆ ನಿರ್ದೇಶನದ ತುಳು ಚಿತ್ರ ಗಂಟ್ ಕಲ್ವೆರ್ ತುಳು ಚಿತ್ರದಲ್ಲಿ ಸಹ ಪ್ರೇರಣ್ ನಟಿಸಿದ್ದಾನೆ ಆ ಚಿತ್ರ ನಿರ್ಮಾಣ ಹಂತದಲ್ಲಿದ್ದು, ಇನ್ನಷ್ಟೇ ಬಿಡುಗಡೆ ಆಗ ಬೇಕಿದೆ. ರಿಚರ್ಡ್ ಕ್ಯಾಸ್ಟಲಿನೋ ಅವರ ಶಾಲೆ ಮಕ್ಕಳಿಗಾಗಿ ನಿರ್ಮಿಸಿದ ಚಿತ್ರ ದಲ್ಲಿ ನಟಿಸಿದ್ದಾನೆ. ಪ್ರಸ್ತುತ ಸುಧಾಕರ ಬನ್ನಂಜೆ ನಿರ್ದೇಶನದ ರಣರಣಕ ಕನ್ನಡ ಚಿತ್ರ ದಲ್ಲೂ ನಟಿಸಿದ್ದಾನೆ. ಇದಲ್ಲದೆ ಕಿರುತೆರೆಯಲ್ಲೂ ನಟಿಸಿರುವ ಪ್ರೇರಣ್ ಸುಧಾಕರ್ ಬನ್ನಂಜೆ ನಿರ್ದೇಶನದ ಕಂಜೂಸ್ ಕಮಂಗಿರಾಯ ಎಂಬ ಹಾಸ್ಯ ಧಾರಾವಾಹಿ ಯ ಸುಮಾರು 40 ಕಂತುಗಳಲ್ಲಿ ನಟಿಸಿದ್ದಾರೆ. ಇದು ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಓದಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಹಲವಾರು ಅವಕಾಶ ಕೈ ಬಿಟ್ಟು ತಂದೆಯ ಸಿನಿಮಾ ಮಾತ್ರ ಒಪ್ಪಿಗೆ ಸೂಚಿಸುತ್ತಾನೆ. ಮುಂದಕ್ಕೆ ಓದಿ ಇಂಜಿನಿಯರ್ ಆಗುವ ಕನಸು ಹೊಂದಿರುವ ಪ್ರೇರಣ್ ಓದಿಗೆ ಮೊದಲ ಆದ್ಯತೆ ಸಿನಿಮಾ ಆಮೇಲೆ, ಸಿನಿಮಾದಲ್ಲಿ ನನಗೆ ನನ್ನ ತಂದೆಯೇ ಗುರು ಎನ್ನುತ್ತಾರೆ. ಒಂದು ವೇಳೆ ಸಿನಿಮಾರಂಗದಲ್ಲೆ ಮುಂದುವರಿಯುವುದಾದರೂ ಇಂಜಿನಿಯರಿಂಗ್ ಓದಿದ ಮೇಲೆ ಎಂಬುದು ಪ್ರೇರಣ್ ಅಭಿಲಾಷೆ.
ಮಾಸ್ಟರ್. ಪ್ರೇರಣ್ ಸುಧಾಕರ ಬನ್ನಂಜೆ ಮತ್ತು ಮಮತಾ ಬನ್ನಂಜೆ ದಂಪತಿಗಳ ದ್ವಿತೀಯ ಪುತ್ರ, ಅಣ್ಣ ಪ್ರಾರ್ಥನ್ ಬನ್ನಂಜೆ. ಪ್ರೇರಣ್ ಬೆಂಗಳೂರು ಮಲ್ಲೇಶ್ವರಂನ ಕಿಶೋರ ಕೇಂದ್ರದ ಎಂಟನೇ ತರಗತಿಯ ವಿದ್ಯಾರ್ಥಿ.
ಬಾಲನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ಪ್ರೇರಣ್ ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳು ಒದಗಿ ಬರಲಿ ಚಿತ್ರರಂಗದಲ್ಲಿ ಇನ್ನಷ್ಟು ಮಿಂಚಲಿ ಎಂದು ಭಂಡಾರಿ ವಾರ್ತೆ ಆಶಿಸುತ್ತದೆ.
–BV