November 24, 2024
linkadhaar

ಸರ್ಕಾರದ ನಿಯಮದಂತೆ ಆಧಾರ್ ನಂಬರ್ ಜೋಡನೆ ಕಡ್ಡಾಯವಾಗಿದ್ದು ಮೊಬೈಲ್ ಸಿಮ್ ಗೆ ಆಧಾರ್ ಸಂಖ್ಯೆ ಜೋಡಿಸಿ  ಮರು ದೃಢೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮೊಬೈಲ್ ಗ್ರಾಹಕರಿಗೆ ಆಧಾರ್ ಜೋಡನೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದೊಂದಿಗೆ ಸುಲಭವಾಗಿ ಮೊಬೈಲ್ ಕರೆ (IVR) ಮಾಡುವ ಮೂಲಕ  ಯಾವುದೇ ಅಡಚಣೆಯಿಲ್ಲದೆ  ಆಧಾರ್ ಸಂಖ್ಯೆಯೊಂದಿಗೆ ದೃಢೀಕರಿಸಬಹುದು. ಹಿಂದೆ ಮೊಬೈಲ್ ಸಿಮ್ ಕಚೇರಿ ಅಥವಾ ಮೊಬೈಲ್ ಸಿಮ್ ಅಂಗಡಿಗಳಲ್ಲಿ ಮಾತ್ರ ಆಧಾರ್ ಸಂಖ್ಯೆ ಜೋಡನೆ ಮತ್ತು ಮೊಬೈಲ್ ಸಂಖ್ಯೆ ದೃಢೀಕರಣಕ್ಕೆ ಅವಕಾಶವಿತ್ತು. ಈಗ ಹೊಸ ವಿಧಾನ ಜಾರಿಗೆ ಬಂದಿರುವುದರಿಂದ ಗ್ರಾಹಕರು ನಿರಾಳರಾಗಬಹುದು. ಈ ಪ್ರಕ್ರಿಯೆ ಪೆಬ್ರವರಿ 6 ರವರೆಗೆ ಚಾಲ್ತಿಯಲ್ಲಿರುತ್ತದೆ.

ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಯೊಂದಿಗೆ ಜೋಡಿಸುವುದು ಹೇಗೆ? 

ನೀವು ಆಧಾರ್ ಸಂಖ್ಯೆ ಜೋಡಿಸಿ ಮೊಬೈಲ್ ನಂಬರ್ ಮರು ದೃಢೀಕರಣ ಮಾಡುವ ವಿಧಾನ ಬಹಳ ಸರಳವಾಗಿದೆ. ನಿಮ್ಮ ಹತ್ತಿರ ಆಧಾರ್ ನಂಬರ್ ಇದ್ದರೆ ಸಾಕು. ನೀವು Airtel, Idea, Jio, Vodafone ಅಥವಾ ಇತರ ಯಾವುದೇ ಸಂಸ್ಥೆಯ ಮೊಬೈಲ್ ಗ್ರಾಹಕರಾಗಿದ್ದರೂ 14546 ಈ ಟೋಲ್ ಪ್ರೀ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಈ ಕೆಳಗಿನಂತೆ IVR ಸೂಚನೆಯಂತೆ  ಆಧಾರ್ ನಂಬರ್ ಜೋಡಿಸಿ ನಿಮ್ಮ ಸಿಮ್ ನಂಬರನ್ನು ಮರು ದೃಢೀಕರಿಸಬಹುದು.

1.  14546  ಈ ಸಂಖ್ಯೆಗೆ ನೀವು ಕರೆಮಾಡಿದಾಗ ಮೊದಲು Indian National or  NRI ಎಂಬ ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಿ.
2. ನಂತರ ಆಧಾರ್ ಜೋಡನೆಯನ್ನು ದೃಢೀಕರಿಸಲು  1 ನ್ನು ಒತ್ತಬೇಕು.
3. ಇದಾದ ನಂತರ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಒತ್ತಿ ಮತ್ತೆ 1 ನ್ನು ಒತ್ತಬೇಕು.
4. ನಂತರ ನೀವು ಜೋಡಿಸಬೇಕಾದ ಮೊಬೈಲ್ ಗೆ OTP ಜನರೇಟ್ ಮಾಡುವ ಪ್ರಕ್ರಿಯೆ
5. OTP ಪಡೆಯಲು ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ.
6. ಈಗ ಮೊಬೈಲ್ ಸೇವೆ ನೀಡುವವನಿಗೆ ನಿಮ್ಮ ವಿವರಗಳನ್ನು ನೀಡಲು ಆಧಾರ್ ಪ್ರಾಧಿಕಾರ ನಿಮ್ಮ ಒಪ್ಪಿಗೆಯನ್ನು ಪಡೆಯುತ್ತದೆ.
7. ಈಗ IVR ನಿಮ್ಮ ಮೊಬೈಲ್ ನಂಬರಿನ ಕೊನೆಯ ನಾಲ್ಕು ಸಂಖ್ಯೆಯನ್ನು ಹೇಳಿ ನೀವು ನಮೂದಿಸಿದ ನಂಬರ್ ಸರಿಯಾಗಿದೆಯೇ ಎಂಬುದನ್ನು ದೃಢೀಕರಿಸಲು ಅವಕಾಶ ನೀಡುತ್ತದೆ.
8. ಈ ನಮೂದಿಸಿದ ನಂಬರ್ ಸರಿಯಾಗಿದ್ದರೆ OTP ನಿಮ್ಮ ನಂಬರಿಗೆ SMS ರೂಪದಲ್ಲಿ ಬರುತ್ತದೆ.
9. ನೀವು ಆಧಾರ್ ಜೋಡನೆ ಮತ್ತು ಮೊಬೈಲ್ ಸಂಖ್ಯೆಯ ಮರು ದೃಢೀಕರಣ ಪೂರ್ಣಗೊಳಿಸಲು 1 ನ್ನು ಒತ್ತಿ.
10. ನೀವು ಒಂದು ವೇಳೆ ಅದೇ ಆಧಾರ್ ನಂಬರನ್ನು ಇನ್ನೊಂದು ಸಿಮ್ ಗೆ ಜೋಡಿಸಬೇಕಾಗಿದ್ದಲ್ಲಿ 2 ನ್ನು ಒತ್ತುವ ಮೂಲಕ ಮೇಲಿನ ವಿಧಾನದಂತೆ ಜೋಡಿಸಬಹುದು.

OTP ಬರಬೇಕಾದ ಮೊಬೈಲ್ ನಿಮ್ಮ ಬಳಿಯೇ ಇರಬೇಕಾಗುವುದು. OTP 30 ನಿಮಿಷಗಳವರೆಗೆ ಮರುದೃಢೀಕರಣಕ್ಕೆ ಯೋಗ್ಯವಾಗಿರುತ್ತದೆ. ಒಂದು ವೇಳೆ ದೂರವಾಣಿ ನೆಟ್ ವರ್ಕ್ ಸಮಸ್ಯೆಯಿಂದ ಕರೆ ಸ್ಥಗಿತವಾದರೂ ಅದೇ OTP ಬಳಸಿ ಪ್ರಕ್ರಿಯೆ ಮುಂದುವರೆಸಬಹುದು. ಕಾರ್ಪೋರೇಟ್ ಗ್ರಾಹಕರು ಆಧಾರ್ ಜೋಡನೆ ಮಾಡುವ ಅವಶ್ಯಕತೆ ಇಲ್ಲ ಎಂಬುದನ್ನು ಟೆಲಿಕಾಂ ಸಂಸ್ಥೆಗಳು ಹೇಳಿವೆ.

Note: To use the IVR verification option, your mobile number has to be registered with the UIDAI database and your Aadhaar card and mobile number should be from the same state. For mobile users who haven’t registered their mobile numbers with the UIDAI database, can only complete the process by visiting the service provider’s store.

— ಭಂಡಾರಿವಾರ್ತೆ

2 thoughts on “ನಿಮ್ಮ ಮೊಬೈಲ್ ನಲ್ಲೆ , ಮೊಬೈಲ್ ನಂಬರಿಗೆ ಆಧಾರ್ ನಂಬರ್ ಗೆ ಜೋಡಿಸುವುದು ಹೇಗೆ ಗೊತ್ತೆ?

Leave a Reply

Your email address will not be published. Required fields are marked *