September 20, 2024

       ಬೈಕಾಡಿ ದಿವಂಗತ ಸಿದ್ದ ಭಂಡಾರಿಯವರ ಧರ್ಮಪತ್ನಿ ಸಾಲಿಕೇರಿ, ಬಿರ್ತಿಯ ಶ್ರೀಮತಿ ಲೀಲಾ ಭಂಡಾರಿಯವರು ವಯೋಸಹಜ ಅನಾರೋಗ್ಯದಿಂದ ಜನವರಿ 6 ನೇ ತಾರೀಖು ಶನಿವಾರ ಸಂಜೆ 7 ಗಂಟೆಗೆ ಕಾರ್ಕಳ, ಬೆಳ್ಮಣ್ಣುವಿನ ಅವರ ಮಗಳ ಮನೆಯಲ್ಲಿ ನಿಧನ ಹೊಂದಿದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಲೀಲಾ ಭಂಡಾರಿಯವರು ಇಬ್ಬರು ಗಂಡು ಮಕ್ಕಳಾದ ಶ್ರೀ ಸತೀಶ್ ಭಂಡಾರಿ ಮತ್ತು ಶ್ರೀ ಸುಧಾಕರ ಭಂಡಾರಿ, ಮೂವರು ಹೆಣ್ಣು ಮಕ್ಕಳಾದ ಶ್ರೀಮತಿ ಸವಿತಾ ನಾರಾಯಣ ಭಂಡಾರಿ, ಶ್ರೀಮತಿ ಯಶೋಧ ನಾಗರಾಜ ಭಂಡಾರಿ ಮತ್ತು ವತ್ಸಲ, ಸೊಸೆಯಂದಿರಾದ ಶ್ರೀಮತಿ ಸುಮನ ಸತೀಶ್ ಭಂಡಾರಿ, ಶ್ರೀಮತಿ ಮೀರಾ ಸುಧಾಕರ ಭಂಡಾರಿ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಭಗವಂತನು ಕುಟುಂಬದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ, ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.

 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *