November 25, 2024
IMG-20180117-WA0002
12:51:04       ದಿನಾಂಕ 14.01.2018 ನೇ ಆದಿತ್ಯವಾರ ಖ್ಯಾತ ಸಾಹಿತಿ ಮತ್ತು ಜ್ಯೋತಿಷ್ಯಿ ಕೆ. ಅನಂತರಾಮ ಬಂಗಾಡಿರವರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಅವರು ಬರೆದ ಕೊಲ್ಲಿ ದುರ್ಗಾ ದೇವಿಯ ಕ್ಷೇತ್ರದ ಚರಿತ್ರೆ “ಕೊಲ್ಲಿ ಕ್ಷೇತ್ರ ಚರಿತಂ” ಪುಸ್ತಕದ ಬಿಡುಗಡೆ ಸಮಾರಂಭವು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಡಾ| ಯು.ಪಿ. ಶಿವನಾಂದರು ವಹಿಸಿದ್ದರು.  ‌ಕೃತಿ ಪರಿಚಯವನ್ನು ಡಾ| ಯೋಗೀಶ್ ಕೈರೋಡಿ ಇವರು ಮಾಡುತ್ತಾ ಅನಂತರಾಮ ಬಂಗಾಡಿಯವರ ವಿಶೇಷತೆಯನ್ನು ವಿವರಿಸುತ್ತಾ  ಅನಂತರಾಮ ಬಂಗಾಡಿ ಯಕ್ಷಗಾನ  ರಂಗಕ್ಕೆ ತುಳು ಪ್ರಸಂಗ ನೀಡಿ ಯಶಸ್ವಿಯಾದವರು. ಇವರ ಪ್ರಸಂಗಗಳು ತುಳುವರ ಹೃದಯದಲ್ಲಿ ಅಚ್ಚಳಿಯದೇ ಆಖ್ಯಾನವಾಗಿ ಉಳಿದಿದೆ 35 ವರ್ಷಗಳ ಹಿಂದೆ ಇವರು ಬಂಗವಾಡಿದ ಕೊಲ್ಲಿ ದುರ್ಗೆ ಎಂಬ ಪ್ರಸಂಗ ಬರೆದ ನಂತರ 140 ಯಕ್ಷಗಾನ ಪ್ರಸಂಗ 10 ಐತಿಹಾಸಿಕ ಪುಸ್ತಿಕೆ ಹಾಗೂ ಭಕ್ತಿಗೀತೆ ಭಾವಗೀತೆ ಬರೆದ ಖ್ಯಾತ ಸಾಹಿತಿ. ಒಂದಲ್ಲ ಒಂದು ರಂಗಕ್ಕೆ ಬದಲಾವಣೆ ಹೊಂದಿರುವ ಅನಂತರಾಮ ಬಂಗಾಡಿಯವರ ಜ್ಯೋತಿಷ್ಯ ಶಾಸ್ತ್ರದಲ್ಲೂ ಅಗ್ರ ಗಣ್ಯರು ಇವರ ಕಾವ್ಯದಲ್ಲಿ  ಆಧ್ಯಾತ್ಮ ಚಿಂತನೆ ಇದೆ  ಈ ಕೃತಿಯು ಸ್ಥಳ ಪುರಾಣ ಇತಿಹಾಸ ಜಾನಪದಗಳ ಸಮ್ಮೀಲನದೊಂದಿಗೆ ಉತ್ತಮ ಮಾರ್ಗದರ್ಶನ ನೀಡುವ ಇತಿಹಾಸಕಾರರಿಗೆ ಮಾರ್ಗದರ್ಶನ ನೀಡೋ ಪುಸ್ತಕವಾಗಿದೆ ಎಂದು ಹೇಳಿದರು. ಸನ್ಮಾನ ಪತ್ರ ಸಹಿತ ಬಂಗಾಡಿಯವರನ್ನು ಸನ್ಮಾನಿಸಲಾಯಿತು. ಕೆ. ಮಂಜುನಾಥ ಕಾಮತ್, ಕೆ. ದಾಸಪ್ಪಗೌಡ ಬಂಗಾಡಿ ಅರಮನೆ ಬಿ.ಯಶೋಧರ ಬಲ್ಲಾಳ್ ಕಕ್ಕೆನಾಜೆ ವಾಸುದೇವ  ರಾವ್, ದಿಡುಪೆ ಪೂವಣಿ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಜೀರ್ಣೋಧ್ಧಾರದ ಬಗ್ಗೆ ಅನಿಸಿಕೆ ಹೇಳಿದರು.  ಬಾಲಕೃಷ್ಣ ಪೂಜಾರಿ, ಕೇಶವ ಪಡ್ಕೆ, ವಿನಯಚಂದ್ರ ನಡುಬೈಲು ಇವರು ಕಾರ್ಯಕ್ರಮ ಸಂಯೋಜಿಸಿದರು.
– ಭಂಡಾರಿ ವಾರ್ತೆ

Leave a Reply

Your email address will not be published. Required fields are marked *