November 23, 2024
PicsArt_02-06-09.09.27
ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಶ್ರೀ ಮಾಂಕು ಭಂಡಾರಿ ಮತ್ತು ಶ್ರೀಮತಿ ಪೂವಕ್ಕ ಭಂಡಾರಿ ದಂಪತಿಗಳ ಪುತ್ರ ಶ್ರೀ ಕೇಶವ ಭಂಡಾರಿಯವರು ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಇಲಾಖೆಯವರು ನೀಡುವ 2016-17 ನೇ ಸಾಲಿನ  ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿ ಯನ್ನು  ಗಳಿಸಿರುತ್ತಾರೆ.
ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಯುತರು ಬತ್ತದ ಬೆಳೆಯಲ್ಲಿ ಅತಿಹೆಚ್ಚು ಇಳುವರಿಯನ್ನು ತೆಗೆದು, ನರ್ಸರಿಯಲ್ಲಿ ಅಡಿಕೆ, ತೆಂಗಿನ ಸಸಿಗಳೊಂದಿಗೆ ಹಲವಾರು ಅಲಂಕಾರಿಕ ಸಸಿಗಳನ್ನು ಬೆಳೆಸಿ, ಕಂಬಳದ ಕೋಣಗಳನ್ನು ಸಾಕಿ ಸಲಹಿ ಸ್ಪರ್ಧೆಗೆ ಅಣಿಗೊಳಿಸಿ, ಐವತ್ತಕ್ಕೂ ಹೆಚ್ಚಿನ ಸ್ಪರ್ಧೆಗಳಲ್ಲಿ ಜಯಗಳಿಸಿ ಆದರ್ಶ ಕೃಷಿಕರಾಗಿ ಗಮನ ಸೆಳೆದಿದ್ದರು. ಕೃಷಿಕರಾಗಿ ಇವರ ಸಮಗ್ರ ಸಾಧನೆಯನ್ನು ಗುರುತಿಸಿ ಇವರಿಗೆ  ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಕ್ರೀಡೆಯೊಂದಿಗೆ ಕೃಷಿಯಲ್ಲಿಯೂ ನಮ್ಮ ಭಂಡಾರಿ ಸಮಾಜದ ಬಂಧುಗಳು ಅಪ್ರತಿಮ ಸಾಧನೆ ಮಾಡಿರುವುದು ನಾವೆಲ್ಲಾ ಹೆಮ್ಮೆ ಪಡುವಂತಹ ಸಂಗತಿಯಾಗಿದೆ. ಶ್ರೀ ಕೇಶವ ಭಂಡಾರಿಯವರು ಜೀವನದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ, ಅವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.                                                                                                                                                                                                                                                                                          
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *