ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಶ್ರೀ ವಿಪಿನ್ ಪ್ರಕಾಶ್ ಭಂಡಾರಿ ಮತ್ತು ಶ್ರೀಮತಿ ಅರುಣಾ ವಿಪಿನ್ ಭಂಡಾರಿ ದಂಪತಿಗಳ ಮುದ್ದಿನ ಮಗಳು ಬೇಬಿ ಭಾವಿನಿ ತನ್ನ ಎಂಟನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾಳೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬೇಬಿ ಭಾವಿನಿಗೆ ತಂದೆ, ತಾಯಿ, ತಾತ ಶ್ರೀ ಪ್ರಕಾಶ್ ಭಂಡಾರಿ ಕಟ್ಲ, ಅಜ್ಜಿ ಶ್ರೀಮತಿ ವಿದ್ಯಾ ಪ್ರಕಾಶ್ ಭಂಡಾರಿ, ಚಿಕ್ಕಪ್ಪ ಶ್ರೀ ವಿಖ್ಯಾತ್ ಪ್ರಕಾಶ್ ಭಂಡಾರಿ ಹಾಗೂ ದೇವಮಾತಾ ಸ್ಕೂಲ್ ನ ಆಕೆಯ ಸಹಪಾಠಿಗಳು, ಅಪಾರ ಬಂಧು ಬಳಗದವರು ಶುಭ ಹಾರೈಸಿದರು.
ಬೆಂಗಳೂರಿನ ವಿದ್ಯಾರಣ್ಯಪುರದ ದೇವಮಾತಾ ಸ್ಕೂಲ್ ನಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬೇಬಿ ಭಾವಿನಿಗೆ ಈ ಹುಟ್ಟು ಹಬ್ಬ ಎಂದೆಂದೂ ಅವಿಸ್ಮರಣೀಯವಾಗಿರಲಿ. ಭಗವಂತನು ಭಾವಿನಿಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ, ಶ್ರೀ ಶಾರದೆಯು ವಿದ್ಯೆ- ಬುದ್ದಿ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ ತಂಡ.