ಮಂಗಳೂರು ತಾಲೂಕು ಮೂಡುಶೆಡ್ಡೆ ಶ್ರೀ ಶೇಖರ ಭಂಡಾರಿ ಮತ್ತು ಶ್ರೀಮತಿ ತಿಲಾಕವತಿ ಶೇಖರ ಭಂಡಾರಿ ದಂಪತಿಗಳ ಪುತ್ರ ಹಾಗೂ ಬೆಂಗಳೂರು ಉದಯವಾಣಿ ದಿನಪತ್ರಿಕೆಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿ॥ ಸುಬ್ರಹ್ಮಣ್ಯ ಹಾಗೂ ಬಂಟ್ವಾಳ ತಾಲೂಕು ಮೈರನ್ ಪಾದೆ ಶ್ರೀ ಸುದರ್ಶನ್ (ರಾಜಾ) ಭಂಡಾರಿ ಮತ್ತು ಶ್ರೀಮತಿ ವಿಜಯ ಸುದರ್ಶನ್ ಭಂಡಾರಿ ದಂಪತಿಗಳ ಪುತ್ರಿ ಚಿ॥ಸೌ॥ ದಿವ್ಯಾಶ್ರೀ ಇವರ ವಿವಾಹವು ಫೆಬ್ರವರಿ 4 ರ ಭಾನುವಾರ ಮಂಗಳೂರಿನ ವಾಮಂಜೂರು ಚರ್ಚ್ ಸಭಾ ಭವನ ದಲ್ಲಿ ಅತೀ ವಿಜೃಂಭಣೆಯಿಂದ ನೆರವೇರಿತು.
ಈ ವಿವಾಹ ಸಮಾರಂಭದಲ್ಲಿ ಉಪಸ್ಥಿತರಿದ್ದ ಅಪಾರ ಸಂಖ್ಯೆಯ ಕುಟುಂಬವರ್ಗದವರು ,ಸಮಾಜ ಬಾಂಧವರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ನವ ವಧುವರರಿಗೆ ಹರಸಿ ಹಾರೈಸಿದರು.
ನವಜೀವನದ ಹೊಸ್ತಿಲಲ್ಲಿರುವ ನವ ಜೋಡಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯ ಭಾಗ್ಯ ನೀಡಲಿ,ಇವರ ದಾಂಪತ್ಯ ಜೀವನವು ಯಶಸ್ವಿಯಾಗಿ ಸುಖ-ಶಾಂತಿ ನೆಮ್ಮದಿಯಿಂದ ನಡೆಯಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮನಃಪೂರ್ವಕವಾಗಿ ಶುಭ ಹಾರೈಸುತ್ತದೆ.
— ಭಂಡಾರಿವಾರ್ತೆ.