September 20, 2024

ದಿನಾಂಕ 19-02-2018 ಸೋಮವಾರ ಜನಸೇವೆಯೇ  ಜನಾರ್ದನ ಸೇವೆ ಎಂಬ ಮಾತಿನಲ್ಲಿ ಸತ್ಯವನ್ನು ಕಂಡುಕೊಂಡ ಕುಂದಾಪುರದ ಭಂಡಾರಿ ಸಂಘ, ಆ ನಿಟ್ಟಿನಲ್ಲಿ ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯವನ್ನು ಆಯೋಜಿಸುವ ಮತ್ತು ಅದರಿಂದ ಭವಿಷ್ಯದಲ್ಲಿ ಭಂಡಾರಿ ಸಮಾಜಕ್ಕೆ ಅರ್ಥಿಕವಾಗಿ ಸ್ಥೈರ್ಯ ತುಂಬುವ ಕೆಲಸವನ್ನು ಹಮ್ಮಿಕೊಂಡು  ಯಶಸ್ವಿ ಆಗಿದೆ.

ಆರ್ಥಿಕವಾಗಿ ಹಿಂದುಳಿದಿರುವ ಕುಂದಾಪುರ ಭಂಡಾರಿಗಳ ಮಕ್ಕಳ ಭವಿಷ್ಯದ ಬಗ್ಗೆ  ಚಿಂತಿಸಿದ ಯುವ ತಂಡ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿವರ್ಷ ಸಣ್ಣದೊಂದು ಅಳಿಲು ಸೇವೆ ಸಲ್ಲಿಸುವ ಪ್ರಯತ್ನವಾಗಿ, ಒಂದಿಷ್ಟು ಹಣವನ್ನು ಸಂಗ್ರಹಿಸಿ ಅದರಿಂದ ಬರುವ ಬಡ್ಡಿರೂಪದ ಹಣದಲ್ಲಿ ಮಕ್ಕಳಿಗೆ ಪ್ರತಿವರ್ಷವೂ ವಿದ್ಯಾರ್ಥಿವೇತನ ನೀಡುವ ಕನಸು ಕಟ್ಟಿಕೊಂಡು, ಎಲ್ಲರ  ಅಭಿಪ್ರಾಯದ ಮೇರೆಗೆ ಯಕ್ಷಗಾನ (ಆಟ) ವನ್ನು ಪ್ರದರ್ಶಿಸಿ ಅದರಿಂದ ಹಣ ಸಂಗ್ರಹಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಅಧ್ಯಕ್ಷ ಸುಭಾಷ್ ಭಂಡಾರಿ ನೇತೃತ್ವದಲ್ಲಿ ಅನಿಲ್ ಕೊಣಿ, ಮಧುಕರ್ ಭಂಡಾರಿ ಕೊಟೇಶ್ವರ, ಆಶೋಕ್ ಭಂಡಾರಿ, ಗಣೇಶ್ ಭಂಡಾರಿ ಸಹೋದರರು ಬಸ್ರೂರು,  ಹಾಗು ಎಲ್ಲಾ ಐದು ಭಂಡಾರಿ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ಸಹಕಾರ ಪ್ರಯತ್ನದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.


ಸಾರ್ವಜನಿಕರಿಂದ ಪ್ರಶಂಸೆಯನ್ನು ಪಡೆದ ಯಕ್ಷಗಾನ:
ನಿರ್ಧರಿಸಿದಂತೆ ಶ್ರೀ ಅನಂತಪದ್ಮಾನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಮೇಳ ಇವರಿಂದ ಶಿವರಂಜಿನಿ ಎಂಬ ಮೌಲ್ಯಾಧಾರಿತ ಸಾಂಸಾರಿಕ ಕಥೆಯನ್ನು ಪ್ರದರ್ಶನ ನೀಡಲಾಯಿತು.
ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ,ಇವರಿಂದ ಶಿವರಂಜಿನಿ ಗಾನ ರಸಧಾರೆ ಹಾಗೂ ಸುರೇಶ ಶೆಟ್ಟರಿಂದ ನಾಗರ ಪಂಚಮಿ ಹಬ್ಬದ ಸಂಭ್ರಮದ ಹಾಡು, ಕಪ್ಪು-ಬಿಳುಪು ವರ್ಣ ಸಂಯೋಜನೆ ಹಿನ್ನಲೆ ,ಹೊಸ ಪ್ರಸಂಗಗಳಲ್ಲೇ ಹೊಸತೆನಿಸುವ ಕೊಬ್ಬಿದ ಗೂಳಿಯೊಂದರ ಪಾತ್ರ ವಿಶೇಷವಾಗಿ ಮೂಡಿಬಂದಿತು.


ರಂಗದಲ್ಲಿ ರಂಜಿಸಿದ ಕಲಾವಿದರು:
ಶ್ರೀ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ,ಶ್ರೀ ಸಂಜೀವ ಶೆಟ್ಟಿ ಹೆನ್ನಾಬೈಲು,ಶ್ರೀ ವಿಜಯ ಗಾಣಿಗ ಬೀಜಮಕ್ಕಿ,ಶ್ರೀ ಉಮೇಶ ಶಂಕರನಾರಾಯಣ, ಶ್ರೀ ರಮೇಶ್ ಭಂಡಾರಿ ಮೂರೂರು , ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ , ಶ್ರೀ ಪುರಂದರ ಮೂಡ್ಕಣಿ, ಶ್ರೀ ಥಂಡಿಮನೆ ಶ್ರೀಪಾದ ಭಟ್ , ಶ್ರೀ ಪ್ರಕಾಶ ಮೊಗವೀರ ಕಿರಾಡಿ, ಶ್ರೀ ಪ್ರಣವ ಭಟ್ ಸಿದ್ದಾಪುರ, ಶ್ರೀ ಆದಿತ್ಯ ಹೆಗಡೆ , ಶ್ರೀ ಉದಯ ಹೆಗಡೆ ಕಡಬಾಳು , ಶ್ರೀ ಅಣ್ಣಪ್ಪ ಗೌಡ ಮಾಗೋಡು ,ಶ್ರೀ ವಿಜಯ ಮುದ್ದುಮನೆ , ಶ್ರೀ ದ್ವಿತೇಶ್ ಹಿರಿಯಡಕ , ಶ್ರೀ ವಿಶ್ವನಾಥ ಆಚಾರ್ಯ ತೊಂಭಟ್ಟು , ಶ್ರೀ ಆನಂದ ಭಟ್ ಕೆಕ್ಕಾರು , ಶ್ರೀ ರಮೇಶ ಸೀತೂರು , ಶ್ರೀ ಕೃಷ್ಣ ಗಾಂವ್ಕರ್ ಇವರುಗಳು ರಂಗದಲ್ಲಿ ರಂಜಿಸಿದರು. ವಿಶೇಷವಾಗಿ ರಮೇಶ್ ಭಂಡಾರಿ ಮುರೂರು ಮತ್ತು ರವೀಂದ್ರ ದೇವಾಡಿಗ ಕಮಲಶಿಲೆ ಇವರ ಹಾಸ್ಯ ಪ್ರೇಕ್ಷಕರನ್ನು ಮುಂಜಾನೆಯವರೆಗೂ  ಹಿಡಿದಿಟ್ಟು ಪ್ರಶಂಸೆಗೆ ಪಾತ್ರರಾದರು .


ಮಕ್ಕಳ ವಿದ್ಯಾರ್ಥಿವೇತನದ ಅಂಗವಾಗಿ ನೆರವೇರಿದ ಕಾರ್ಯಕ್ರಮಕ್ಕೆ ಸ್ಪಂದಿಸಿ ತನು ಮನ ಧನ ಸಹಾಯವನ್ನು ನೀಡಿ ಸಹಕರಿಸಿದ ಭಂಡಾರಿ ಬಂಧುಗಳಿಗೂ  ಮತ್ತು ಸಹೋದರ ಸಮಾಜದ ಎಲ್ಲಾ ಬಂಧುಗಳಿಗೂ  ಭಂಡಾರಿ ಸಮಾಜ ಕುಂದಾಪುರದ ಪರವಾಗಿ ಧನ್ಯವಾದಗಳನ್ನು ಈ ಮುಖೇನ ತಿಳಿಸುತ್ತಿದ್ದೇವೆ.
ಶುಭ ಹಾರೈಸಿದ ಸಮಸ್ತರಿಗೂ  ಧನ್ಯವಾದಗಳು

ಮಾಹಿತಿ ವರದಿ: ವೆಂಕಟೇಶ ಭಂಡಾರಿ ಕುಂದಾಪುರ

Leave a Reply

Your email address will not be published. Required fields are marked *