ಮುಂಬಯಿ ಥಾಣೆಯ ಪಾರ್ಸಿಕ್ ನಗರದಲ್ಲಿ ಶ್ರೀ ವಿನಯ್ ಕುಮಾರ್ ಭಂಡಾರಿ ಮತ್ತು ಶ್ರೀಮತಿ ಅನುಷ್ಕಾ ವಿನಯ್ ಕುಮಾರ್ ದಂಪತಿಗಳು ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಫೆಬ್ರವರಿ 21 ರ ಬುಧವಾರ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಸಡಗರ ಸಂಭ್ರಮದಿಂದ ನೆರವೇರಿಸಿದರು. ಅದೇ ದಿನ ದಂಪತಿಗಳು ತಮ್ಮ ವೈವಾಹಿಕ ಜೀವನದ ಹತ್ತನೆಯ ವರ್ಷದ ವಾರ್ಷಿಕೋತ್ಸವವನ್ನು ನೆರೆದಿದ್ದ ಕುಟುಂಬವರ್ಗದವರ, ಬಂಧುಗಳ, ಸ್ನೇಹಿತರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಿಕೊಂಡರು.
ಈ ಶುಭ ಸಂದರ್ಭದಲ್ಲಿ ತಂದೆ ಮುಂಬಯಿಯ ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಮಾಧವ ರಂಗ ಭಂಡಾರಿ, ತಾಯಿ ಶ್ರೀಮತಿ ಶಾರದ .ಎಂ. ಆರ್. ಭಂಡಾರಿ, ಕುಟುಂಬಸ್ಥರು, ಬಂಧುಮಿತ್ರರು ಶುಭ ಕೋರಿದರು.
ಶ್ರೀ ವಿನಯ್ ಕುಮಾರ್ ಭಂಡಾರಿ ಮತ್ತು ಶ್ರೀಮತಿ ಅನುಷ್ಕಾ ವಿನಯ್ ಕುಮಾರ್ ದಂಪತಿಗಳಿಗೆ ಹೊಸ ಮನೆಯು ಅದೃಷ್ಟದ ಮನೆಯಾಗಲಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರಲಿ ಮತ್ತು ಅವರ ವೈವಾಹಿಕ ಜೀವನ ಹತ್ತು ವರ್ಷಗಳನ್ನು ಪೂರೈಸಿ ಹನ್ನೊಂದಕ್ಕೆ ಕಾಲಿಟ್ಟ ಈ ಶುಭ ಗಳಿಗೆಯಲ್ಲಿ ಭಗವಂತನು ಅವರಿಗೆ ಆಯುರಾರೋಗ್ಯ ಐಶ್ವರ್ಯಗಳನ್ನು ದಯಪಾಲಿಸಿ, ನೆಮ್ಮದಿಯುತ ಸಂತೃಪ್ತ ಜೀವನ ನಡೆಸುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
House warming ceremony and tenth wedding anniversary celebrations.
Shri Vinay Kumar Bhandary (S/o Shri Madhava Ranga Bhandary ex President of Bhandary Seva Samiti Mumbai and Smt.Sharada Madhava) and Smt Anushka Vinay Kumar celebrated Tenth wedding anniversary and performed Shri Sathyanarana pooja on the occasion of Gruhaprevesha on 21st February 2018.
Family friends relatives blessed the couple on this auspicious occasion.
-BV