September 20, 2024

ಭಂಡಾರಿ ಕುಟುಂಬದ ಮಹಿಳೆಯೊಬ್ಬರು ಶೈಕ್ಷಣಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯೊಂದನ್ನು ಮಾಡಿದ್ದಾರೆ.ಸಾಧಿಸುವ ಛಲವೊಂದಿದ್ದರೆ ಮದುವೆ,ಸಂಸಾರ ಯಾವುದೂ ಅಡ್ಡಗಾಲಲ್ಲ ಎಂಬುದನ್ನು ಸಾಧಿಸಿ ತೋರಿಸಿದವರೇ ನಮ್ಮ ಶ್ರೀಮತಿ ಶ್ರೀಷಾ ನವೀನ್ ಚಂದ್ರ. ಮಹಾರಾಷ್ಟ್ರದ ನಾಸಿಕ್ ನ ಸಂದೀಪ್ ವಿಶ್ವವಿದ್ಯಾಲಯದಲ್ಲಿ(Sandip University.) ಎಂ.ಎಸ್ಸಿ ವ್ಯಾಸಂಗ ಮಾಡಿದ ಇವರು ಎಂ.ಎಸ್ಸಿ ಜೈವಿಕ ರಸಾಯನ ಶಾಸ್ತ್ರ(Organic Chemistry) ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಮತ್ತು 2016-17 ನೇ ಸಾಲಿನ ವಿಶ್ವವಿದ್ಯಾಲಯದ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಯೊಂದಿಗೆ ಎಂ.ಎಸ್ಸಿ ಪದವಿ ಪೂರ್ಣಗೊಳಿಸಿಕೊಂಡಿದ್ದಾರೆ.

ಸಧ್ಯದಲ್ಲಿಯೇ ಥೈವಾನ್ ನ ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಯಲ್ಲಿ ಇಂಟರ್ ನ್ಯಾಷನಲ್ ಇಂಟರ್ ಷಿಪ್ ಗಾಗಿ ತೆರಳಲಿದ್ದಾರೆ.

ಮೂಡುಬಿದಿರೆ ಪುತ್ತಿಗೆಯ ಶ್ರೀ ಶೈಲೇಂದ್ರ ರಾಜ್ ಮತ್ತು ಶ್ರೀಮತಿ ಉಷಾ ಶೈಲೇಂದ್ರ ರಾಜ್ ದಂಪತಿಗಳ ಸುಪುತ್ರಿಯಾದ ಶ್ರೀಷಾ ,ಅಲಂಗಾರು ಬನ್ನಡ್ಕದ ಶ್ರೀ ನವೀನ್ ಚಂದ್ರ.ಕೆ.ಎಸ್. ಇವರ ಧರ್ಮಪತ್ನಿ.ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಪತ್ನಿಯ ಓದುವ ಹಂಬಲಕ್ಕೆ ಒತ್ತಾಸೆಯಾಗಿ ನಿಂತಿರುವುದು ಶ್ರೀಷಾ ಶೈಕ್ಷಣಿಕವಾಗಿ ಸಾಧನೆ ಮಾಡಲು ಕಾರಣವಾಯಿತು.

ಶ್ರೀಮತಿ ಶ್ರೀಷಾ ನವೀನ್ ಚಂದ್ರರವರು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ತನ್ಮೂಲಕ ಭಂಡಾರಿ ಕುಟುಂಬಕ್ಕೆ ಹೆಚ್ಚಿನ ಗೌರವ ತಂದುಕೊಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಕೋರುತ್ತದೆ.

 

ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Academic excellence by Smt. Shrisha Naveenchandra.

Smt Shrisha Naveenchandra has completed M. Sc. In Organic Chemistry from Sandip University Nasik Maharashtra, with distinction and topper. She’s awarded Best Student of the year 2016-17.

She’s pursuing her higher studies International Internship in National Central University Taiwan.

Smt Shrisha Naveenchandra is the daughter of Shri Shailendraraj- Smt Usha Bhandary, Puthige, Moodabidre 
Her husband Shri Naveenchandra K. S. Bannadka, Alangar, who’s serving in Indian Army supported her academic interest to achieve this success even after marriage.

Leave a Reply

Your email address will not be published. Required fields are marked *