ಬಂಟ್ವಾಳ ಕಬ್ಬಿನಹಿತ್ಲು ಸಂತೋಷ್ ಭಂಡಾರಿಯವರ ಹೆಂಡತಿ, ನಾಗರಕಟ್ಟೆ ಚಂದ್ರಶೇಖರ ಭಂಡಾರಿ ಮತ್ತು ಜಯಂತಿ ಚಂದ್ರಶೇಖರ ಭಂಡಾರಿಯವರ ಮಗಳು ಶ್ರೀಮತಿ ನಾಗಶ್ರೀ ಭಂಡಾರಿಯವರ ಸೀಮಂತ ಕಾರ್ಯಕ್ರಮವು ಫೆ.25ರಂದು ಕಬ್ಬಿನಹಿತ್ಲು ಕೃಷ್ಣಭಂಡಾರಿಯವರ ಮನೆಯಲ್ಲಿ ಸಾಂಪ್ರದಾಯಿಕವಾಗಿ ನೆರವೇರಿತು.
ವಿಶೇಷವೆಂದರೆ ಶ್ರೀಮತಿ ನಾಗಶ್ರೀ ಅವರ ಕವಯಿತ್ರಿ ಯಾಗಿದ್ದು, ತಮ್ಮ ಕವನಗಳ ಮೂಲಕ ಸಾಹಿತ್ಯ ಪ್ರೇಮಿಗಳ ಮನಗೆದ್ದವರು. ಹೀಗಾಗಿ ಭಂಡಾರಿವಾರ್ತೆಯು ಅವರಿಗೆ ಕೆಳಗಿನ ಕವನದ ಮೂಲಕ ಶುಭಕೋರುತ್ತಿದೆ.
ಶ್ರೀಮತಿ ನಾಗಶ್ರೀ ಭಂಡಾರಿ ಅವರ ಸೀಮಂತ….ಸೀಮಂತದ ಶ್ರೀಮತಿಗೆ ಕವನದ ಶುಭಾಶಯ
ತಾಯಿಯಾಗೋ ಸಂಭ್ರಮ…
‘ಮಗುವಾಗಿದ್ದಳವಳು ತನ್ನ ಹೆತ್ತ ತಾಯಿಗೆ, ಇಂದವಳು ಕೂಡಾ ತಾಯಿಯಾಗೋ ಸಂಭ್ರಮದ ದಿನ…ಹೆಣ್ಣಿಗೆ ಮಾತ್ರ ನೀಡಿರುವನು ಆ ದೇವನು ತಾಯಿಯಾಗಿ ಭಾಗ್ಯವ, ನವಮಾಸದಿ ತಾಯ್ತನವ ಅನುಭವಿಸುವ ಸುಖವ..ಮನೆಯವರೆಲ್ಲರೂ ಸೇರಿ ಒಂದಾಗಿ,ಪುಟ್ಟ ಮಗುವಿನ ಆಗಮನಕ್ಕೆ ಕಾಯುವ ಮುನ್ನ ನಡೆಸುವ ಸೀಮಂತದ ದಿನ..ಬಂಧುಬಳಗದವರು ಸೇರಿ ಹರಸಿ,ಹಿರಿಯರು ಮಾಡಿದ ಸಂಪ್ರದಾಯವ ಪಾಲಿಸಿ, ಗರ್ಭಿಣಿಗೆ ಮಾಡುವಂಥ ಶಾಸ್ರ್ತ…’
ಸೀಮಂತವೆನ್ನುವುದು ತಾಯಿಯಾದವಳ ಬಯಕೆಯ ಈಡೇರಿಸೋ ಶಾಸ್ತ್ರ,ಆಸೆಗಳ ನೆರವೆರಿಸೋ ಶಾಸ್ತ್ರ,ಹೆಣ್ಣಿಗದುವೇ ಸಂತಸದ ಶಾಸ್ರ್ತ..
ಈ ಕವನದಂತೆಯೇ ಶ್ರೀಮತಿ ನಾಗಶ್ರೀ ಅವರ ಹೆರಿಗೆ ಕಾರ್ಯ ಸುಸೂತ್ರವಾಗಿ ನೆರವೇರಲಿ ಎಂದು ಭಂಡಾರಿವಾರ್ತೆ ಶುಭಹಾರೈಸುತ್ತಿದೆ.
-ಭಂಡಾರಿವಾರ್ತೆ