September 20, 2024

ಕಾರ್ಕಳದ ದಿವಂಗತ ಲೋಕು ಭಂಡಾರಿಯವರ ಮೊಮ್ಮಗಳು, ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿಗಳಾದ ಶ್ರೀ ಸಿ.ಎಮ್.ಎನ್.ಮೂರ್ತಿ ಮತ್ತು ಶ್ರೀಮತಿ ವನಿತಾಮೂರ್ತಿ ದಂಪತಿಗಳ ಪುತ್ರಿ ಕುಮಾರಿ ಮೇಘಾಮೂರ್ತಿ ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಮೆದುಳು ಮತ್ತು ನರಮಂಡಲ ಸಂಬಂಧಿತ ರೋಗದಲ್ಲಿ ಅನುವಂಶೀಯತೆ (Genetics in Parkinson’s Disease-ಜೆನೆಟಿಕ್ಸ್ ಇನ್ ಪಾರ್ಕಿನ್ಸನ್ ಡಿಸೀಸ್) ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ಡಾಕ್ಟರ್ ಆಫ್ ಫಿಲಾಸಫಿ (PhD.) ಪಡೆದಿದ್ದಾರೆ.ಇವರಿಗೆ ಪ್ರೊಫೆಸರ್ ಡಾ||ಎನ್.ಬಿ.ರಾಮಚಂದ್ರರವರು ಮಾರ್ಗದರ್ಶನ ನೀಡಿದರು.

 

 

ಕುಮಾರಿ ಮೇಘಾಮೂರ್ತಿಯವರ ತಂದೆ ಶ್ರೀ ಸಿ.ಎಮ್.ಎನ್.ಮೂರ್ತಿಯವರು ಕೆನರಾ ಬ್ಯಾಂಕ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಕಾರಣದಿಂದ ಇವರು ಬೇರೆ ಬೇರೆ ಊರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಬೇಕಾಯಿತು. ಅದರಂತೆ ಹೊನ್ನಾವರದಲ್ಲಿ ಎಸ್.ಎಸ್.ಎಲ್.ಸಿ ಶಿಕ್ಷಣ ಪೂರೈಸಿ, ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪಿ.ಯು.ಸಿ ಮತ್ತು ಬಿ.ಎಸ್ಸಿ. ಪದವಿ ಪಡೆದು.ಎಂ.ಎಸ್ಸಿ ಪದವಿಯನ್ನು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪಡೆದುಕೊಂಡರು.ಅನುವಂಶೀಯತೆ( Genetics)ಯಲ್ಲಿ ಎಂ.ಎಸ್ಸಿ ಯನ್ನು ಬಂಗಾರದ ಪದಕ ಪಡೆಯುವುದರೊಂದಿಗೆ ಪೂರೈಸಿದ ಇವರು ಆಗಲೇ ಪಿ.ಹೆಚ್.ಡಿ ಮಾಡುವ ನಿರ್ಧಾರ ಮಾಡಿದ್ದರು.ಅದಕ್ಕೆ ಪೂರಕವಾಗಿ ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಭ್ಯಾಸ ಮಾಡಿ ತಮ್ಮ ಕನಸನ್ನು ನನಸು ಮಾಡಿಕೊಂಡರು.

 

ಶ್ರೀ ಸಿ.ಎಮ್.ಎನ್ ಮೂರ್ತಿ ಮತ್ತು ಶ್ರೀಮತಿ ವನಿತಾಮೂರ್ತಿ ದಂಪತಿಗಳು ತಮ್ಮ ಮೂವರು ಮಕ್ಕಳಿಗೂ ಉತ್ತಮವಾದ ಶಿಕ್ಷಣವನ್ನು ನೀಡಿ ಬೆಳೆಸಿದ್ದಾರೆ.ಇವರ ದ್ವಿತೀಯ ಪುತ್ರಿ ಕುಮಾರಿ ಕ್ಷಿತಿಮೂರ್ತಿ ಇಂಜಿನಿಯರಿಂಗ್ ಪದವಿ ಪಡೆದು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ.ಇವರ ಪುತ್ರ ಕುಮಾರ್ ತೇಜಸ್ವಿ ಮೂರ್ತಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದಾರೆ.


ಕುಮಾರಿ ಮೇಘಾಮೂರ್ತಿಯವರು ಡಾಕ್ಟರೇಟ್ ಮಾಡಬೇಕೆನ್ನುವ ಮಹದಾಸೆಯಿಂದ ತಮ್ಮ ಪೋಷಕರ ಮದುವೆ ಮಾಡುವ ಪ್ರಯತ್ನಗಳನ್ನೆಲ್ಲಾ ಮುಂದೂಡಿ ಗುರಿ ಸಾಧಿಸಿರುವುದು ಈಗ ಫಲಪ್ರದವಾಗಿದೆ.ಭಾರತದಲ್ಲಿ ಮಾತ್ರವಲ್ಲದೆ ವಿದೇಶದಿಂದಲೂ ಅವರಿಗೆ ಉದ್ಯೋಗವಕಾಶಗಳು ಕೈ ಬೀಸಿ ಕರೆಯುತ್ತಿವೆ.ಮಗಳ ಈ ಸಾಧನೆ ಹೆತ್ತವರಿಗೂ,ತಂಗಿ,ತಮ್ಮ ಹಾಗೂ ಕುಟುಂಬಸ್ಥರಿಗೆ ಅತ್ಯಂತ ಸಂತಸವನ್ನು, ತೃಪ್ತಿಯನ್ನು,ಹೆಮ್ಮೆಯನ್ನು ನೀಡಿದೆ ಎಂದು ಶ್ರೀಮತಿ ವನಿತಾಮೂರ್ತಿಯವರು ತಮ್ಮ ಸಂಭ್ರಮವನ್ನು ಭಂಡಾರಿವಾರ್ತೆಯೊಂದಿಗೆ ಹಂಚಿಕೊಂಡರು.

ಕುಮಾರಿ ಮೇಘಾಮೂರ್ತಿಯವರಿಗೆ ಅಭಿನಂದಿಸಲು ಅವರ ತಾಯಿ ಶ್ರೀಮತಿ ವನಿತಾಮೂರ್ತಿಯವರ ಮೊಬೈಲ್ ಸಂಖ್ಯೆ 90086 49131 ಗೆ ಕರೆ ಮಾಡಬಹುದು.

 

ನಮ್ಮ ಭಂಡಾರಿ ಸಮಾಜದ ಹೆಣ್ಣು ಮಗಳೊಬ್ಬಳು ಶೈಕ್ಷಣಿಕ ಕ್ಷೇತ್ರದಲ್ಲಿ ಈ ರೀತಿಯ ಅಮೋಘ ಸಾಧನೆ ಮಾಡಿರುವುದು ನಮ್ಮ ಸಮಾಜಕ್ಕೆ ಒಂದು ಹೆಮ್ಮೆ ಮತ್ತು ಅವರು ನಮ್ಮ ಭಂಡಾರಿ ಕುಟುಂಬದ ಮಕ್ಕಳಿಗೆ ಮಾದರಿ. ಅವರು ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ.ತನ್ಮೂಲಕ ಕುಟುಂಬಕ್ಕೆ ಮತ್ತು ಭಂಡಾರಿ ಸಮುದಾಯಕ್ಕೆ ಕೀರ್ತಿ ತಂದುಕೊಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಹಾರೈಸುತ್ತದೆ.

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *