ಪುತ್ತೂರು ತಾಲೂಕು ಬೆಳ್ಳಿಪ್ಪಾಡಿ ಕೈಪ ಶ್ರೀ ಕೇಶವ ಭಂಡಾರಿ ಮತ್ತು ಶ್ರೀಮತಿ ಉಮಾವತಿ ಕೇಶವ ಭಂಡಾರಿ ದಂಪತಿಯ ಪುತ್ರ ಹಾಗೂ ಮಂಗಳೂರು ತಾಲೂಕು ಕಾವೂರು ಶ್ರೀಮತಿ ಸುಜಾತ ಹರೀಶ್ ಮತ್ತು ಶ್ರೀ ಹರೀಶ್ ಭಂಡಾರಿಯವರ ಅಳಿಯ
ಚಿ॥ ದಿವ್ಯರಾಜ್.
ಮತ್ತು
ಕುಂದಾಪುರದ ಶ್ರೀಮತಿ ಸುಜಾತ ಉದಯ ಭಂಡಾರಿ ಮತ್ತು ದಿವಂಗತ ಉದಯ ಭಂಡಾರಿ ದಂಪತಿಯ ಪುತ್ರಿ ಹಾಗೂ ಶೃಂಗೇರಿಯ ಶ್ರೀಮತಿ ವಸಂತಿ ನರಸಿಂಹ ಭಂಡಾರಿ ಮತ್ತು ಶ್ರೀ ನರಸಿಂಹ ಭಂಡಾರಿಯವರ ಸೊಸೆ
ಚಿ॥ಸೌ॥ ಆಶಿಕಾ.
ಇವರ ವಿವಾಹವು ಮೇ 2 ರ ಬುಧವಾರ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಗುರು ಹಿರಿಯರು, ಬಂದು ಬಳಗದವರು, ಹಿತೈಷಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಪುರೋಹಿತರ ಶುಭ ಸಂದೇಶದ ಮಂತ್ರ ಉಚ್ಚಾರಣೆಯೊಂದಿಗೆ ಅತೀ ವಿಜೃಂಭಣೆಯಿಂದ ನೆರವೇರಿತು.
ಇವರ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿಯಿಂದ ತುಂಬಿರಲಿ, ಆಯುರಾರೋಗ್ಯ ಐಶ್ವರ್ಯವನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ,ಮದುವೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ.