ಮುಂಬಯಿಯ ಚೆಂಬೂರ್ ನಲ್ಲಿ ಶ್ರೀ ಲಕ್ಷ್ಮಣ್ ಭಂಡಾರಿ ಮತ್ತು ಶ್ರೀಮತಿ ಯಶೋಧ ಲಕ್ಷ್ಮಣ್ ಭಂಡಾರಿ ದಂಪತಿಯು ತಮ್ಮ ಪುತ್ರ ಮಾಸ್ಟರ್ ಪ್ರಣೀತ್ ಲಕ್ಷ್ಮಣ್ ಭಂಡಾರಿಯ ಹದಿನಾಲ್ಕನೆಯ ವರ್ಷದ ಹುಟ್ಟು ಹಬ್ಬವನ್ನು ಮೇ 30 ರ ಬುಧವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಪ್ರಣೀತ್ ನಿಗೆ ಅವರ ತಂದೆ ತಾಯಿ, ತಮ್ಮ ಮಾಸ್ಟರ್ ವೇದಿತ್ ಭಂಡಾರಿ,ಮಾವ ಮಾಮಿ,ಚಿಕ್ಕಪ್ಪ ಚಿಕ್ಕಮ್ಮ, ಪುಟಾಣಿಗಳಾದ ಜೀವಿತ,ಕೌಶಿಕ್,ಕಶ್ವಿ,ನೇಹಾಲ್,ನೈಷಿ ತ ಮತ್ತು ಪಕ್ಷಿಕೆರೆಯ ಕುಟುಂಬಸ್ಥರು ,ಹಿತೈಷಿಗಳು ಶುಭ ಹಾರೈಸಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಪ್ರಣೀತ್ ನಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ