ಮರೆಯಲಾಗದ ನೆನಪು……
ಬದುಕು ಎಂಬ ಏರುಪೇರಿನ ಪಯಣ ಬಹಳ ವಿಚಿತ್ರವಾದುದು. ಒಮ್ಮೆ ಕಳೆದು ಹೋದ ಕ್ಷಣ ಇನ್ನೊಮ್ಮೆ ಸಿಗಲಾರದು. ಹುಟ್ಟು ಸಾವಿನ ನಡುವಿನ ಹಾದಿಯಲ್ಲಿ ಮನುಷ್ಯನಿಗೆ ಬುದ್ಧಿ ಬೆಳೆಯುತ್ತಾ ಹೋದಂತೆ ಜೀವನದ ಹಾದಿಯೇ ಬದಲಾಗುತ್ತಾ ಹೋಗುತ್ತದೆ. ಆದರೆ ಈ ಅವಧಿಯಲ್ಲಿ ಅತಿ ಹೆಚ್ಚು ಮಧುರವಾದ ಕ್ಷಣಗಳನ್ನು ನೀಡುವ ಘಟ್ಟ ಒಂದಿದ್ದರೆ ಅದು ಬಾಲ್ಯ ಮಾತ್ರ.
ಬಾಲ್ಯದ ದಿನಗಳೆಂದರೆ ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು ಅದೆಷ್ಟೋ ಮರೆಯಾಲಾಗದ ಸವಿನೆನಪುಗಳನ್ನು ನೀಡುವ ಘಟ್ಟವೆಂದೇ ಹೇಳಬಹುದು. ನೆನಪುಗಳು ಹೇಗೆಂದರೆ ನಾವು ಬೇಡ ಬೇಡ ಎಂದರೂ ಸಮಯ ಸಾಧಿಸಿಕೊಂಡು ಮನಸ್ಸಿಗೆ ದಾಳಿ ಇಡುತ್ತಲೇ ಇರುತ್ತವೆ. ನೆನಪುಗಳು ಅಮರ-ಮಧುರ ಮನದಲ್ಲಿ ಉಳಿಯುವ ಪಳೆಯುಳಿಕೆಯ ಸಿಹಿನೆನಪುಗಳು.
ಆಧುನಿಕ ಯುಗದಲ್ಲಿ ನಾವೆಲ್ಲರೂ ಬ್ಯುಸಿಮನುಷ್ಯರು. ಎಷ್ಟು ಬ್ಯುಸಿ ಎಂದರೆ ಒಂದೆರಡು ನಿಮಿಷ ಮಾತಾನಾಡದಷ್ಟು. ಗಡಿಬಿಡಿಯ ಈ ಜಂಜಾಟದ ಜೀವನದಲ್ಲೂ ಬಾಲ್ಯ ನೆನಪುಗಳು ನೆಮ್ಮದಿ ತರುತ್ತವೆ ಎಂದರೆ ತಪ್ಪಗಾಲಾರದು.ಶುಕ್ರವಾರ ಬಂದಾಕ್ಷಣ ಸಂಜೆಯಾಗುವುದನ್ನೇ ಕಾಯುತ್ತ ಶನಿವಾರ, ಭಾನುವಾರ ರಜೆ ಕಳೆಯುವ ಭರಾಟೆ, ಮರುದಿನ ಕ್ಲಾಸಿನಲ್ಲಿ ಗೆಳೆಯರೊಂದಿಗೆ ರಜೆಯ ಸೊಗಸಿನ ಬಗ್ಗೆ ಹರಟೆ, ಪರೀಕ್ಷೆಗಳನ್ನು ಮುಗಿಸಿ ಅಜ್ಜಿಮನೆಗೆ ಓಡುವ ಸರ್ಕಸ್ಸು ಹೀಗೆ ಹೇಳುತ್ತಾ ಹೋದರೆ ಸಾಕಾಗಾಲಾರದು ಪದಗಳು. ಈ ಎಲ್ಲ ನೆನಪುಗಳು ಕಣ್ಣಂಚಿನಲ್ಲಿ ನೀರು ಬರುವಂತೆ ಮಾಡುವುದರಲ್ಲಿ ಅಚ್ಚರಿ ಇಲ್ಲ.
ಹೌದು ಗೆಳೆಯರೇ ಕಂಪ್ಯೂಟರ್ ಯುಗದಲ್ಲಿ ಕೆಲಸದ ಮಧ್ಯದಲ್ಲಿ ಒಂದು ಕ್ಷಣ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ನೋಡಿದಾಗ ಮನಸ್ಸು ರಿಲ್ಯಾಕ್ಸ್ ಆದ ಅನುಭವ ದೊರೆಯುತ್ತದೆ.ಬದುಕು ಎಂದರೆ ಅಂತ್ಯವಿಲ್ಲದ ಪಯಣ ಮನಸ್ಸಿಗೆ ತಟ್ಟಿದ ನೆನಪುಗಳು ಮಾತ್ರ ಉಳಿಯುವುದು…
ಗ್ರೀಷ್ಮಾ ಭಂಡಾರಿ
ವಿ.ವಿ ಕಾಲೇಜು ಮಂಗಳೂರು
Sprb that’s true😍😍😍