ಬ್ರಹ್ಮಾವರ ಸಾಸ್ಥಾನದ ಗುಂಡ್ಮಿಯ ಶ್ರೀ ಪ್ರಶಾಂತ್ ಭಂಡಾರಿ ಮತ್ತು ಶ್ರೀಮತಿ ದೀಕ್ಷಾ ಪ್ರಶಾಂತ್ ಭಂಡಾರಿಯವರು ತಮ್ಮ ಮೂರನೆಯ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಜೂನ್ 8 ರ ಶುಕ್ರವಾರ ತಮ್ಮ ಮುದ್ದಿನ ಮಗ ಪ್ರಹಲ್ ನೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಪ್ರಶಾಂತ್ ಭಂಡಾರಿಯವರ ತಂದೆ ಶ್ರೀ ಬೋಜು ಭಂಡಾರಿ,ತಾಯಿ ಶ್ರೀಮತಿ ಶಾರದಾ ಬೋಜು ಭಂಡಾರಿ,ಚಿಕ್ಕಪ್ಪ ಶ್ರೀ ಶಂಕರ ಭಂಡಾರಿ,ಚಿಕ್ಕಮ್ಮ ಶ್ರೀಮತಿ ಯಶೋಧ ಶಂಕರ ಭಂಡಾರಿ.ಮಾವ ಶ್ರೀ ರಘು ಭಂಡಾರಿ ಸೊರಬ,ಅತ್ತೆ ಶ್ರೀಮತಿ ಲತಾ ರಘು ಭಂಡಾರಿ, ಶ್ರೀ ದರ್ಶನ್ ರಘು ಭಂಡಾರಿ ಮತ್ತು ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.
ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ,ಸುಖ ಶಾಂತಿ ನೆಮ್ಮದಿಯುತ ಬಾಳು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.