ಪ್ರತಿನಿತ್ಯ ದುಡಿಮೆ ಒಂದೇ ಉಸಿರಾಗಿದೆ. ಜೊತೆಗೆ ಬಿಡುವಿಲ್ಲದ ದುಡಿಮೆಯಿಂದ, ಶರೀರವು ಮಾನಸಿಕ ಮತ್ತು ದೈಹಿಕವಾಗಿ ಬಳಲಿ ಹೋಗಿರುವುದು. ಒಂದು ಸಣ್ಣ ಪ್ರವಾಸ ಎಲ್ಲವನ್ನೂ ಮರೆಮಾಚಿ ಹೊಸ ನವೋಲ್ಲಾಸವನ್ನು, ಮನಸನ್ನು ತಣಿಸಿ, ಕಣ್ಣುಗಳಲ್ಲಿ ಹೊಸ ಹೊಳಪನು ತುಂಬಿ, ಎಲ್ಲ ನೋವನ್ನು ದೂರಗೊಳಿಸಿ ಸಂತಸವೆಂಬ ಸಾಗರವೇ ಮೈ ಮನಕೆ ಮುತ್ತಿಕ್ಕಿಕೊಂಡತಾಯಿತು.
ಪ್ರವಾಸ ಪ್ರಾಥಮಿಕ ಶಾಲಾ ಶಿಕ್ಷಣದೊಂದಿಗೆ ಆರಂಭವಾಗುತ್ತದೆ. ಪ್ರತಿ ವರುಷ ಒಂದಲ್ಲ ಒಂದು ಪರಿಸರ, ವೈವಿಧ್ಯಮಯಗಳು, ದೇವಾಲಯ, ಇತಿಹಾಸ ಪ್ರಸಿದ್ದ ಐತಿಹಾಸಿಕ ಸ್ಥಳ, ಕಡಲ ಕಿನಾರೆಗಳು ಇತ್ಯಾದಿಗಳನ್ನು ನೋಡುತ್ತಿದ್ದೇವು. ಆ ವಯಸ್ಸಿನಲ್ಲಿ ಯಾಕೆ ಹೋಗುತ್ತೇವೆಂದು ಅರಿವಿರೋದಿಲ್ಲ.
ಅದರೆ ಪ್ರೌಡರಾದ ಮೇಲೆ – ಕಾಲೇಜು ಜೀವನದಲಿ ಹೋದ ಪ್ರವಾಸಗಳು ನೆನಪಿನಲ್ಲಿ ಉಳಿಯುತ್ತವೆ. ಉದ್ಯೋಗದಲ್ಲಿ ಸೇರಿಕೊಂಡಾಗಲೇ ಪ್ರವಾಸದ ಮಹತ್ವವನ್ನು ಪಡೆದುಕೊಳ್ಳೋದು. ಬಿಡುವು ಕಡಿಮೆ ಇರುತ್ತದೆ, ಒತ್ತಡಗಳು ಮನದಲ್ಲಿ ಮನೆ ಮಾಡಿರುತ್ತದೆ. ಸಮಯದ ಜೊತೆ ಸರಸ , ಬಿಡುವಿದ್ದರೆ ಮನೆ ಕೆಲಸದಲಿ ನಿರತ. ಎರಡು ಮೂರು ರಜೆ ಜೊತೆಯಾಗಿ ಬಂದರೆ ಉದ್ಯೋಗಿಗಳಾಗಿದ್ದರೆ, ಮೋಜಿನ ಅಕಷ೯ಣಿಯ ಊರುಗಳಿಗೆ ಪ್ರವಾಸ ಹೋಗಲು ತಯಾರಿ ನಡೆಸುವರು. ವಿವಾಹಿತರಾದರೆ ತನ್ನ ಕುಟುಂಬ ಸದಸ್ಯರ ಮೆಚ್ಚಿನ ಪ್ರದೇಶಗಳಿಗೆ ಪ್ರವಾಸ ಹೊರಟು ಬಿಡುವರು.
ಪ್ರವಾಸಕ್ಕೆ ಹೋಗಲೇ ಬೇಕೆ..?
ಹೋಗಬೇಕು, ನಮಗೆ ಎಷ್ಟೋ ಕಷ್ಟಗಳು ಬಂದಿರಬಹುದು, ಅವುಗಳನ್ನು ಮರೆಯೋಕೆ ಸಾಧ್ಯವಿರುದಿಲ್ಲ. ಆದರೆ ಇಂತಹ ಪ್ರವಾಸಗಳು ಮರೆಸುತ್ತದೆ. ನಾವು ದುಡಿಮೆಯಲ್ಲಿ ಮೈ ಮನವನು ಧಣಿಸಿರುತ್ತೇವೆ, ಒಳ್ಳೆಯ ದ್ರಶ್ಯ, ಸನ್ನೀವೇಶ, ಪರಿಸರ ಬದಲಾವಣೆ ಮನುಷ್ಯನ ಒಳ್ಳೆಯ ಚಿಂತನೆಗೆ ದಾರಿ ಮಾಡಿಕೊಡಬಹುದಲ್ಲವೇ. ಮನುಷ್ಯ ಈ ಕಾಲದಲ್ಲಿ ಬಯಸುವ ಮುಖ್ಯ ಸಂಗತಿ ನೆಮ್ಮದಿ, ಪ್ರವಾಸದಲ್ಲಿ ಇದನ್ನು ಪಡೆಯಬಹುದು.
ವರುಷಕ್ಕೊಂದು ಒಳ್ಳೆಯ ವಿಸ್ಮಯ ಅಕಷ೯ಕ ಪ್ರದೇಶಗಳಿಗೆ ಬೇಟಿ ನೀಡಿ ಮಾಹಿತಿ ಜೊತೆ ಮನಕೆ ಆನಂದವನೂ ತುಂಬಿಕೊಂಡರೆ. ಪ್ರವಾಸ ಎಲ್ಲರಿಗೂ ಅಚ್ಚು ಮೆಚ್ಚಿನ ಅನುಬಂಧವಾಗುವುದು. ಪ್ರವಾಸವೂ ನಮ್ಮದು, ನೆಮ್ಮದಿಯೂ ನಮ್ಮದು.