September 20, 2024
Advt.
ಡುಬಿದ್ರಿಯ ನಡ್ಸಾಲು ಗ್ರಾಮದ ಭಂಡಾರಿ ಹೌಸ್ ನಲ್ಲಿ ದಿವಂಗತ ಹಂಗ್ಳೂರು ಶೀನ ಭಂಡಾರಿಯವರ ಧರ್ಮಪತ್ನಿ ಕಮಲಾ ಶೀನ ಭಂಡಾರಿ ಜೂನ್ 19 ರ ಮಂಗಳವಾರ ರಾತ್ರಿ 8 ಕ್ಕೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.ಅವರಿಗೆ ಸುಮಾರು 82 ವರ್ಷ ವಯಸ್ಸಾಗಿತ್ತು.
ಕಳೆದ ಏಪ್ರಿಲ್ ತಿಂಗಳ 12 ರಂದು ತಮ್ಮ ಪತಿಯನ್ನು ಕಳೆದುಕೊಂಡಿದ್ದ ಕಮಲಮ್ಮನವರು ಮೂವರು ಗಂಡು ಮಕ್ಕಳು,ಮೂವರು ಹೆಣ್ಣು ಮಕ್ಕಳು,ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಕಮಲಾ ಶೀನ ಭಂಡಾರಿಯವರ ಆತ್ಮ ಸಧ್ಗತಿಗಾಗಿ ಉತ್ತರಕ್ರಿಯಾ ಕಾರ್ಯಕ್ರಮ ಜುಲೈ 2 ರ ಸೋಮವಾರ “ಮನೆ.ನಂ.2-53.ಬೀಡುವಿನ ಬಳಿ, ನಡ್ಸಾಲು ಗ್ರಾಮ.ಪಡುಬಿದ್ರಿ” ಇಲ್ಲಿ ನೆರವೇರಿಸಲಾಗುವುದೆಂದು ಕುಟುಂಬಸ್ಥರು ಪ್ರಕಟಿಸಿದ್ದಾರೆ.
advt.
ಪಡುಬಿದ್ರಿ ಭಂಡಾರಿ ಕುಟುಂಬದ ಹಿರಿಯರಾದ ಕಮಲಾ ಶೀನ ಭಂಡಾರಿಯವರ ನಿಧನದಿಂದ ದುಃಖತಪ್ತ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ, ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.
Advt.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *