November 10, 2024
bhandary paakashale

ಬೇಕಾಗುವ ಸಾಮಾಗ್ರಿಗಳು:

1. 10 ನಿಂಬೆ ಹಣ್ಣು
2. 8 ಹಸಿಮೆಣಸಿನಕಾಯಿ
3. 1 ಚಮಚ ಮೆಂತ್ಯ
4. 1 ಚಮಚ ಸಾಸಿವೆ
5. 1 ಚಮಚ ಜೀರಿಗೆ
6. 1 ಚಮಚ ಓಂಕಾಳು
7. ಅರ್ದ ಚಮಚ ಇಂಗು
8. 5 ಚಮಚ ಎಣ್ಣೆ
9. ಉಪ್ಪು

ಮಾಡುವ ವಿಧಾನ:

ಮೊದಲು ನಿಂಬೆಹಣ್ಣನ್ನು ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿ ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ. ಹೋಳುಗಳಿಗೆ ಉಪ್ಪನ್ನು ಹಾಕಿ 10 ದಿನಗಳ ಕಾಲ ಒಂದು ಪಾತ್ರೆಯಲ್ಲಿ ಹಾಕಿ (ನೀರನ್ನು ತಾಗಿಸದೆ ಇಟ್ಟುಕೊಳ್ಳಿ.) ಆಮೇಲೆ ಹಸಿಮೆಣಸಿನಕಾಯಿಯನ್ನು ಬಾಣಲೆಗೆ ಹಾಕಿ ಹುರಿದುಕೊಂಡು ಮಿಕ್ಸಿಯಲ್ಲಿ ರುಬ್ಬಿ ನಿಂಬೆಹಣ್ಣಿನ ಹೋಳುಗಳಿಗೆ ಹಾಕಿ. ಬಳಿಕ ಮೆಂತ್ಯ, ಜೀರಿಗೆ, ಓಂಕಾಳನ್ನು ಬಾಣಲೆಯಲ್ಲಿ ಹುರಿದು ಪುಡಿ ಮಾಡಿ ನಿಂಬೆಹಣ್ಣಿನ ಹೋಳುಗಳಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆನಂತರ ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ಬಳಿಕ ಇಂಗು, ಸಾಸಿವೆಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಸೌಟಿನಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ನಿಂಬೆ ಹಣ್ಣಿನ ಉಪ್ಪಿನಕಾಯಿ ಸಿಧ್ಧ

ಪ್ರತಿಭಾ ಭಂಡಾರಿ ಹರಿಹರಪುರ

 

ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ 

 

Leave a Reply

Your email address will not be published. Required fields are marked *