September 20, 2024

ಸೆಲ್ಫೀ ಅಂದಾಕ್ಷಣ ಮುಖವನ್ನೆಲ್ಲಾ ಸೊಟ್ಟಗೆ ಮಾಡಿ ಪೋಸ್ ಕೊಡೋ ಜನರೇ ಕಣ್ಣ ಮುಂದೆ ಬರ್ತಾರೆ… ಫೋನ್ ಯಾವುದೇ ಇರಲಿ ಸೆಲ್ಫೀ ಕ್ಲಿಕ್ಕಿಸದ ಫೋನ್ ಇದ್ದೂ ಏನ್ ಪ್ರಯೋಜನ ಅನ್ನೋವಷ್ಟರ ಮಟ್ಟಿಗೆ ಇಂದಿನ ಸೆಲ್ಫೀ ಕ್ರೇಜ್ ಹುಟ್ಟಿಸಿದೆ. ಆದರೆ ಕಳೆದ ಒಂದೆರಡು ವರ್ಷದಿಂದ ಯುವ ಜನತೆಯಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದ್ದ ಸೆಲ್ಫೀ ಕ್ರೇಜ್ ಡಿಎಸ್ ಎಲ್ ಆರ್ ಮಹಿಮೆಯಿಂದ ಕೊಂಚ ಕಡಿಮೆಯಾಗಿರೋದು ಸುಳ್ಳಲ್ಲ. ಫೇಸ್ ಬುಕ್, ವಾಟ್ಸಾಪ್ ಪ್ರೊಫೈಲ್ ಫೋಟೋಗಳನ್ನು ಆವರಿಸಿದ್ದ ಸೆಲ್ಫೀ ಜಾಗವನ್ನು ಈಗ ಡಿಎಸ್ಎಲ್ ಆರ್ ನಿಂದ ತೆಗೆದ ಫೋಟೋಗಳು ಆವರಿಸಿಬಿಟ್ಟಿದೆ. ಹಾಗಂತ ಸೆಲ್ಫೀ ಹವಾ ಏನೂ ಕಡಿಮೆಯಾಗಿಲ್ಲ. ಸ್ನೇಹಿತರೊಂದಿಗೆ, ಕುಟುಂಬಸ್ಥರೊಂದಿಗೆ ಕಳೆಯುವ ಅದ್ಭುತ ಕ್ಷಣಗಳನ್ನು ಈಗಲೂ ಸುಂದರವಾಗಿ ಸೆರೆಹಿಡಿಯೋದು ಸೆಲ್ಫೀಯೇ. 

ಸೆಲ್ಫೀಯಲ್ಲಿ ಒಂದಲ್ಲ, ಎರಡಲ್ಲ ನಾನಾ ಶೈಲಿಯಿದೆ. ಅದು ಸಿಂಗಲ್ ಫೋಟೋ ಆಗಿರಲಿ ಅಥವಾ ಗ್ರೂಪ್ ಸೆಲ್ಫೀನೆ ಆಗಿರಲಿ ಡಿಫರೆಂಟ್ ಆಗಿದ್ರೆನೇ ಚೆನ್ನ. ಅದಕ್ಕೂ ಅದರದ್ದೇ ಆದ ಆಂಗಲ್ಸ್, ಅದರದ್ದೇ ಆದ ಶೈಲಿ ಇದೆ. ಈಗಿನ ಮೊಬೈಲ್ ನಲ್ಲಿ ಫೋಟೋ ಎಡಿಟಿಂಗ್ ಜೊತೆಗೆ ಬೇರೆ ಬೇರೆ ತರದ ಆಪ್ ಗಳು ಬಿಡುಗಡೆಯಾಗಿದ್ದು ಅದನ್ನೂ ಬಳಸಿಯೂ ನಿಮ್ಮ ಫೋಟೋವನ್ನು ಇನ್ನೂ ಚಂದವಾಗಿ ಕಾಣುವಂತೆ ಮಾಡಬಹುದು. ಅದನ್ನು ತಿಳಿದುಕೊಂಡು ಫೋಟೋ ಕ್ಲಿಕ್ಕಿಸಿದರೆ ನಿಮ್ಮ ಸೆಲ್ಫೀ ಇನ್ನಷ್ಟು ಸುಂದರವಾಗಿ ಮೂಡಿಬರೋದ್ರಲ್ಲಿ ಸಂಶಯವೇ ಇಲ್ಲ. ಸೆಲ್ಫೀ ತೆಗೆಯೋದಕ್ಕೆ ಒಳ್ಳೆ ಕ್ಯಾಮರಾದ ಜೊತೆಗೆ ಒಳ್ಳೆ ಹ್ಯಾಂಡ್ ಸೆಟ್ ಕೂಡಾ ಮುಖ್ಯ. ಅದರ ಜೊತೆಗೆ ಬೆಳಕು, ಆಂಗಲ್ ಕೂಡಾ ಬಹಳನೇ ಅವಶ್ಯಕ. ಈಗ ಗುಣಮಟ್ಟದ ಸೆಲ್ಫೀಗಾಗಿಯೇ ತರ ತರದ ಮೊಬೈಲ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಜೊತೆಗೆ ಹಿಂದಿನಂತೆ ಮೆಮೊರಿ ಕಾರ್ಡ್ ಬಳಸದೇನೆ ಕೇವಲ ಫೋನ್ ನಲ್ಲೇ ಬೇಕಾದಷ್ಟು ಫೋಟೋಗಳನ್ನು ಸಂಗ್ರಹಿಸಿಡಲು ಅವಕಾಶವಿದೆ. ಹೀಗಾಗಿ ನಿಮಗೆ ಬೇಕಾದ ರೀತಿಯಲ್ಲಿ ಬೇಕಾದಷ್ಟು ಸೆಲ್ಫೀನ ಕ್ಲಿಕ್ಕಿಸಬಹುದು. 
ಸೆಲ್ಫೀ ಕ್ರೇಜ್ ಜಗತ್ತಿನಾದ್ಯಂತ ಎಷ್ಟು ಕ್ರೇಜ್ ಹುಟ್ಟಿಸಿದೆಯೋ ಅಷ್ಟೇ ಜೀವಗಳನ್ನೂ ಬಲಿತೆಗೆದುಕೊಂಡಿದೆ. ಹೀಗಾಗಿ ಸುಂದರವಾಗಿ ಬರಬೇಕೆನ್ನುವ ಕಾರಣಕ್ಕೋ, ಸುತ್ತ ಮುತ್ತಲಿರುವ ಬ್ಯಾಕ್ ಗ್ರೌಂಡ್ ಚೆಂದವಾಗಿ ಕಾಣಬೇಕೆನ್ನುವ ಕಾರಣಕ್ಕೋ ಅಪಾಯಕಾರಿ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುವ ಬದಲು, ಸೆಲ್ಫೀ ಸ್ಟಿಕ್ ಬಳಸಿಯೋ ಅಥವಾ ಮೊಬೈಲ್ ನಲ್ಲಿರುವ ಹೊಸ ಹೊಸ ಆಪ್ ಗಳನ್ನು ಬಳಸಿಯೋ ಫೋಟೋ ತೆಗೆದರೆ ಬಹಳಷ್ಟು ಉತ್ತಮ. ಇನ್ನು ಸದಾ ಹೊಸತನಗಳನ್ನು ಬಯಸುವ ಜನತೆ  ಡಿಎಸ್ ಎಲ್ ಆರ್ ಕ್ಯಾಮರಾದಲ್ಲಿ ವೈಡ್ ಲೈನ್ಸ್ ಬಳಸಿ, ಕ್ಯಾಮರಾ ತಿರುಗಿಸಿ ಸೆಲ್ಫೀ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ರೂ ಆಶ್ಚರ್ಯ ಏನಿಲ್ಲ. 
                                                                                                                                                                                                                     
ದೀಕ್ಷಿತ್ ಭಂಡಾರಿ
ಹವ್ಯಾಸಿ ಛಾಯಾಗ್ರಾಹಕ  

Leave a Reply

Your email address will not be published. Required fields are marked *