ನಿಶ್ಚಿತ್ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡ ಕನ್ನಡ ಚಲನಚಿತ್ರ “ರಣರಣಕ” ದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಬೆಂಗಳೂರು ರಾಜಗೋಪಾಲ್ ನಗರದ ಬಿಬಿಎಂಪಿ ಮೈದಾನದಲ್ಲಿ ಜುಲೈ 29 ರ ಭಾನುವಾರ ಸಂಜೆ ಜಯನಗರದ ನೂತನ ಶಾಸಕಿ “ಶ್ರೀಮತಿ ಸುಶ್ಮಾ ರೆಡ್ಡಿ”ಯವರ ಅಧ್ಯಕ್ಷತೆಯಲ್ಲಿ ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಖ್ಯಾತ ಸಾಹಸ ನಿರ್ದೇಶಕ ಟಗರು ಖ್ಯಾತಿಯ ಜಾಲಿ ಸೆಬಾಸ್ಟಿಯನ್ ಧ್ವನಿಸುರುಳಿ ಬಿಡುಗಡೆ ಮಾಡಿದರು.ಚಿತ್ರ ನಟರಾದ ಟೆನಿಸ್ ಕೃಷ್ಣ,ಬಿರಾದಾರ್,ಹೊನ್ನವಳ್ಳಿ ಕೃಷ್ಣ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಾಸಕರಾದ ಎಂ.ಮುನಿರತ್ನ, ಮಂಜುನಾಥ ಗೌಡ,ಗೋಪಾಲಯ್ಯ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಸ್ಥಳೀಯ ಕಾರ್ಪೊರೇಟರ್ ಮಂಜುನಾಥ್ ,ಅಶ್ವಿನಿ ಗ್ರೂಪ್ಸ್ ನ ಯುವರಾಜ್,ವೆಂಕಟೇಶ್, ಸಂಕಲನಕಾರ ಗಿರೀಶ್ ಕುಮಾರ್,ನಾಯಕ ಶಶಿರಾಜ್,ನಾಯಕಿ ಸಂಭ್ರಮ ಗೌಡ,ಕಲಾವಿದರಾದ ಮಾಸ್ಟರ್ ಪ್ರೇರಣ್,ಮಾಸ್ಟರ್ ದೀಪಕ್,ಶೈಲೇಶ್, ರಾಘವೇಂದ್ರ,ಸಾಮಂತ,ಬೆಸ್ಟ್ ಕ್ಲಬ್ ಜಯರಾಂ,ಸುದೇಶ್, ನಿರ್ದೇಶನ ತಂಡದ ಪ್ರಶಾಂತ್ ಎಳ್ಳಂಪಳ್ಳಿ,ಪ್ರಾರ್ಥನ್ ವೇದಿಕೆಯಲ್ಲಿ ಇದ್ದರು,ಚಿತ್ರ ನಿರ್ದೇಶಕರಾದ ಶ್ರೀ ಸುಧಾಕರ್ ಬನ್ನಂಜೆಯವರು ಮಾತನಾಡಿ ಚಿತ್ರೀಕರಣದ ಕೆಲವು ಸ್ವಾರಸ್ಯಕರ ಘಟನೆಗಳನ್ನು ನೆನಪಿಸಿ,ಎಲ್ಲರ ಸಹಕಾರ ಕೋರಿದರು.ನಿರ್ಮಾಪಕರಾದ ಶ್ರೀ ದಿವಾಕರ್ “ಚಿತ್ರವನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿರುವುದಾಗಿ,ಚಿತ್ರ ಮಂದಿರಗಳು ಸಕಾಲದಲ್ಲಿ ದೊರೆಯುವಂತಾಗಬೇಕು” ಎಂದರು.
ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ವಂದಿಸಿದರು.ಡಾ|| ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.ಸಂಗೀತ ರಸಮಂಜರಿ ಕಾರ್ಯಕ್ರಮ,ಆಕರ್ಷಕ ನೃತ್ಯ ಪ್ರದರ್ಶನ ನೆರೆದಿದ್ದವರ ಮನ ತಣಿಸಿತು.
ನಮ್ಮ ಭಂಡಾರಿ ಸಮಾಜದ ಹಿರಿಯ ನಿರ್ದೇಶಕರಾದ ಶ್ರೀ ಸುಧಾಕರ ಬನ್ನಂಜೆಯವರು ನಿರ್ದೇಶನ ಮಾಡಿದ “ರಣರಣಕ” ಚಿತ್ರದ ಹಾಡುಗಳು ಅತ್ಯಂತ ಜನಪ್ರಿಯಗೊಂಡು ಜನಮನ ಸೂರೆಗೊಳ್ಳಲಿ.ಚಿತ್ರ ಆದಷ್ಟು ಬೇಗ ತೆರೆ ಕಂಡು ಚಿತ್ರಪ್ರೇಮಿಗಳ ಮನತಣಿಸಲಿ.ಬನ್ನಂಜೆಯವರು ಇನ್ನಷ್ಟು ಹೆಚ್ಚಿನ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಲು ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನದುಂಬಿ ಹಾರೈಸುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.