November 22, 2024
veg-paneer-biriyani

ವೆಜ್ ಪನೀರ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು:

2 ಈರುಳ್ಳಿ ತೆಳುವಾಗಿ ಕತ್ತರಿಸಿದ್ದು
2 ಟೇಬಲ್ ಸ್ಪೂನ್ ತುಪ್ಪ
ರೈಸ್ ಗಾಗಿ:
1 ಸ್ಪೂನ್ ತುಪ್ಪ
1/2 ನಿಂಬೆ ರಸ
2  ಪುಲಾವ್ ಎಲೆಗಳು (ತೇಜ್ ಪಟ್ಟಾ)
1 ದಾಲ್ಚಿನ್ನಿ ಕಡ್ಡಿ
4 ಲವಂಗ
3 ಏಲಕ್ಕಿ
1 ಸ್ಟಾರ್ ಅನಿಸ್
2 ಕಪ್ ಬಾಸುಮತಿ ಅಕ್ಕಿ
4 ಕಪ್ ನೀರು
1 ಸ್ಪೂನ್ ಗುಲಾಬಿ ನೀರು
ಕೇಸರಿ ದಳಗಳು
ಮಸಾಲ
2-3  ಸ್ಪೂನ್ ತುಪ್ಪ
ಪನೀರ್ 100 ಗ್ರಾಂ
2 ಕಪ್ ಕತ್ತರಿಸಿದ ಮಿಶ್ರ ತರಕಾರಿಗಳು (ಕ್ಯಾರೆಟ್, ಅವರೆಕಾಳು, ಬೀನ್ಸ್)
1 ಸಣ್ಣದಾಗಿ ಕೊಚ್ಚಿದ ಟೊಮೇಟೊ
2 ಸಣ್ಣದಾಗಿ ಕತ್ತರಿಸಿದ ಈರುಳ್ಳಿ
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
2 ಟೀಸ್ಪೂನ್ ಧನಿಯಾ ಪುಡಿ
2 ಟೀಸ್ಪೂನ್ ಜೀರಿಗೆ ಪುಡಿ
2 ಟೇಬಲ್ ಸ್ಪೂನ್ ಗ ಮಸಾಲಾ ಪೌಡರ್
1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
1/4 ಟೀಸ್ಪೂನ್. ಅರಿಶಿನ ಪೌಡರ್ (ಹಲ್ಡಿ)
1/2 ನಿಂಬೆ
1/2 ಕಪ್ ಮೊಸರು
½ ಕಪ್ ಕತ್ತರಿಸಿದ ಕೊತ್ತುಂಬರಿ ಎಲೆಗಳು
1/2 ಕಪ್ ಕತ್ತರಿಸಿದ ಪುದಿನಾ
ಉಪ್ಪು, ರುಚಿಗೆ
ಅಕ್ಕಿ ತೊಳೆಯಿರಿ ಮತ್ತು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ.

ಬಿಸಿ ಪಾನ್ ನಲ್ಲಿ  ಬೆಣ್ಣೆ ಸೇರಿಸಿ  ಅದಕ್ಕೆ ಪಾನೀರ್ ಸೇರಿಸಿ ಫ್ರೈ ಮಾಡಿ ಸ್ವಲ್ಪ ಮೆಣಸಿನ ಪುಡಿ ಮತ್ತು ಗರಂ ಮಸಾಲಾ ಪುಡಿ ಹಾಕಿ 3-4 ನಿಮಿಷಗಳ ಕಾಲ ಪನೀರ್ ಕಂದು ಬಣ್ಣ ತಿರುಗುವವರೆಗೆ ಫ್ರೈ ಮಾಡಿ ಪಕ್ಕಕ್ಕೆ ಇರಿಸಿ.

ಬಿರಿಯಾನಿಗಾಗಿ ಈರುಳ್ಳಿಯನ್ನು ಫ್ರೈ ಮಾಡಲು:

ಎಣ್ಣೆ / ತುಪ್ಪವನ್ನು  ಬಾಣಲೆಯಲ್ಲಿ ಹಾಕಿ ಅದನ್ನು ಬಿಸಿ ಮಾಡಿ. ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಈರುಳ್ಳಿ ಚೆನ್ನಾಗಿ ಹುರಿದು ಮತ್ತು ಗೋಲ್ಡನ್ ಬ್ರೌನ್ ಬಣ್ಣವನ್ನು ಹೊಂದಿದಾಗ ಅವುಗಳನ್ನು ಬಾಣಲೆಯಿಂದ ತೆಗೆದು ತಟ್ಟೆಯಲ್ಲಿ ಹರಡಿ 5 ನಿಮಿಷಗಳ ಕಾಲ ಒಣಗಿಸಿ.  ಒಣಗಿದ ಈರುಳ್ಳಿ ಗರಿಗರಿಯಾಗಿ ಬಳಸಲು ತಯಾರಾಗುತ್ತದೆ. ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಟ್ಟರೆ ಇದನ್ನು ಕೆಲವು ದಿನಗಳವರೆಗೆ ಬಳಸಬಹುದು.

ಅನ್ನಕ್ಕಾಗಿ:

ಒಂದು ಪ್ಯಾನ್ ನಲ್ಲಿ, ಸ್ವಲ್ಪ ನೀರು ಬಿಸಿ ಮಾಡಿ, ಉಪ್ಪು, ಒಂದು ಚಮಚ ತುಪ್ಪ, ನಿಂಬೆ ರಸ, ಗುಲಾಬಿ ನೀರು ಸೇರಿಸಿ. ಇದು ಕುದಿಯುವ ಸಮಯದಲ್ಲಿ ಅಕ್ಕಿ ಸೇರಿಸಿ ಬೇಯಿಸಿ. ಅಕ್ಕಿ 80% ಬೆಂದ ನಂತರ ಅದನ್ನು ಬಸಿದು ಬದಿಗಿರಿಸಿ.

ಮಸಾಲಾಗೆ:

ಇನ್ನೊಂದು ಪ್ಯಾನ್ ನಲ್ಲಿ 3 ಟೀ ಚಮಚ ತುಪ್ಪ ಸೇರಿಸಿ, ಒಮ್ಮೆ ತುಪ್ಪ ಬಿಸಿಯಾದಾಗ 1  ಕಡ್ಡಿ ಚಕ್ಕೆ, 4 ಲವಂಗ, 3 ಏಲಕ್ಕಿ, 1 ಸ್ಟಾರ್ ಆಯಿಸ್, ತದನಂತರ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ. ಈರುಳ್ಳಿ ಚೆನ್ನಾಗಿ ಬೆಂದು ಬಣ್ಣವನ್ನು ಬದಲಾಯಿಸುವ ಅಂಚಿನಲ್ಲಿ  ಶುಂಠಿ ಬೆಳ್ಳುಳ್ಳಿ ಪೇಸ್ಟ್, ಧನಿಯಾ ಪುಡಿ, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಅರಿಶಿನ ಪುಡಿ ಹಾಗು ಸ್ವಲ್ಪ ನೀರು ಸೇರಿಸಿ ಫ್ರೈ ಮಾಡಿ. ಮಸಾಲಾ ಚೆನ್ನಾಗಿ ಬೆಂದ ನಂತರ ಕತ್ತರಿಸಿದ ಮಿಶ್ರ ತರಕಾರಿಗಳನ್ನು ಸೇರಿಸಿ ಮತ್ತು ಸ್ವಲ್ಪ ಉಪ್ಪು ಸೇರಿಸ ಬೇಯಿಸಿ. ಬೆಂದ ನಂತರ ಮೊಸರು ಸೇರಿಸಿ ಮತ್ತು ಮೊಸರು ಸಂಪೂರ್ಣವಾಗಿ ಗ್ರೇವಿಯಲ್ಲಿ ಮಿಕ್ಸ್ ಆಗುವವರೆಗೆ ಬೇಯಿಸಿ. ಈಗ ಕತ್ತರಿಸಿದ ಕೊತ್ತಂಬರಿ ಎಲೆಗಳು ಮತ್ತು ಪುದೀನಾ ಎಲೆಗಳನ್ನು ಹಾಕಿ ಗ್ಯಾಸ್ ಆಫ್ ಮಾಡಿ.

ಬಿರಿಯಾನಿಯ ಲೇಯರಿಂಗ್:

ಒಂದು ಮುಚ್ಚಳವನ್ನು ಹೊಂದಿರುವ ಆಳವಾದ ಭಾರವಾದ ಪಾತ್ರೆಯನ್ನು ಬಳಸಿ. ಮೊದಲು ಪ್ಯಾನ್ನ ಕೆಳಭಾಗದಲ್ಲಿ ಸ್ವಲ್ಪ ತುಪ್ಪವನ್ನು ಹರಡಿ ನಂತರ ಗ್ರೇವಿ ಪದರವನ್ನು ಹರಡಿ. ಅಕ್ಕಿಯ ಎರಡನೆಯ ಪದರ, ಮೇಲೆ ಕತ್ತರಿಸಿದ ಕೊತ್ತಂಬರಿ ಮತ್ತು ಹುರಿದ ಈರುಳ್ಳಿಗಳನ್ನು ಸ್ವಲ್ಪ ಸಿಂಪಡಿಸಿ. ಅಕ್ಕಿ ಮೇಲಿನ ಪದರವಾಗುವ ಹಾಗೆ ಪದರಗಳನ್ನು ಪುನರಾವರ್ತಿಸಿ. ಉಳಿದಿರುವ ಈರುಳ್ಳಿಗಳನ್ನು ಅಕ್ಕಿಯ ಮೇಲೆ ಹಾಕಿ.  (ಹಾಲು, ರೋಸ್ವಾಟರ್ ಮತ್ತು ಕೇಸರಿಯನ್ನು ಸಣ್ಣ ಉರಿಯಲ್ಲಿ  ಬೆಚ್ಚಗಾಗಿಸಿ.) ಹಾಲು ಮತ್ತು ಕೇಸರಿಯನ್ನು ಒಂದು ಚಮಚವನ್ನು ಬಳಸಿ ಸಮವಾಗಿ ಅಕ್ಕಿ ಯ ಮೇಲೆ ಸುರಿಯಿರಿ.  ಎಲ್ಲಾ ಪದರಗಳನ್ನು ಹೊಂದಿಸಿದ ನಂತರ, ಕರಗಿಸಿದ ತುಪ್ಪ ತೆಗೆದುಕೊಂಡು ಒಂದು ಚಮಚದೊಂದಿಗೆ ಅದನ್ನು ಪಾತ್ರೆಯ ಅಂಚಿನಲ್ಲಿ ಮತ್ತು ಸ್ವಲ್ಪಮಟ್ಟಿಗೆ ಅಕ್ಕಿ ಮೇಲೆ ಸುರಿಯಿರಿ. ಒಂದು ಫಾಯಿಲ್ ಅಥವಾ ಬಿಗಿಯಾದ ಮುಚ್ಚಳದೊಂದಿಗೆ ಸೀಲ್ ಮಾಡಿ ಕಡಿಮೆ ಜ್ವಾಲೆಯಲ್ಲಿ 10 ನಿಮಿಷ ಬೇಯಿಸಿ ಮತ್ತು ಬಿರಿಯಾನಿಯನ್ನು ಮತ್ತೊಂದು 5 ನಿಮಿಷ ಕಾಲ ಪಾತ್ರೆಯಲ್ಲಿ  ಬಿಡಿ.

ಇದನ್ನು ರೈತಾದೊಂದಿಗೆ ಬಿಸಿಯಾಗಿ ಸೇವಿಸಿ.

 
ಮೂಲ: ತೃಪ್ತಿ ಭಂಡಾರಿ ಕುವೈತ್,
ಭಂಡಾರಿ ಕಿಚನ್  
ಕನ್ನಡಕ್ಕೆ : ಶ್ರುತಿಕಾ ಭಂಡಾರಿ

 

Leave a Reply

Your email address will not be published. Required fields are marked *