September 20, 2024

ಕಾರ್ಕಳ ಕಲಂಬಾಡಿ ಪದವಿನ ಶ್ರೀ ಸಂತೋಷ್ ಭಂಡಾರಿ ಮತ್ತು ಶ್ರೀಮತಿ ರೇಖಾ ಸಂತೋಷ್ ಭಂಡಾರಿ ದಂಪತಿಗಳ ಮುದ್ದಿನ ಮಗನಾದ ಸ್ವಸ್ತಿಕ್ ಭಂಡಾರಿ ತನ್ನ 13ನೇ ವರ್ಷದ ಹುಟ್ಟುಹಬ್ಬ ಮತ್ತು ಅಜೆಕಾರಿನ ಶ್ರೀ ಸಂದೇಶ್ ಭಂಡಾರಿ ಮತ್ತು ಶ್ರೀಮತಿ ಶಾಲಿನಿ ಸಂದೇಶ್ ಭಂಡಾರಿಯವರ ಮುದ್ದಿನ ಮಗಳು ಬೇಬಿ. ಧನ್ವಿ, ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ದಿನಾಂಕ 05-08-2018 ರಂದು ಸಂಭ್ರಮ ಸಡಗರದೊಂದಿಗೆ ಕಲಂಬಾಡಿ ಪದವಿನ ತಮ್ಮ ನಿವಾಸ ‘ಚಾಮುಂಡೇಶ್ವರಿ’ಯಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ವಿಜೃಂಭಣೆಯೊಂದಿಗೆ ಆಚರಿಸಿಕೊಂಡರು.

ಸಹೋದರ ಸಹೋದರಿಯರು, ಕುಟುಂಬಸ್ಥರು, ಅಜ್ಜ ಅಜ್ಜಿಯಂದಿರು, ಬಂಧು ಮಿತ್ರರು ಸಮಾರಂಭಕ್ಕೆ ಆಗಮಿಸಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಸ್ವಸ್ತಿಕ್ ಭಂಡಾರಿ ಮತ್ತು ಬೇಬಿ ಧನ್ವಿಯವರಿಗೆ ಶ್ರೀ ದೇವರು ಆಯುರಾರೋಗ್ಯ, ಐಶ್ವರ್ಯ ನೀಡಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಆಶಿಸುತ್ತದೆ.

 

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *