ಕಾಕ೯ಳ ತಾಲೂಕು ಭಂಡಾರಿ ಸಮಾಜ ಸಂಘ ಹಾಗೂ ಸವಿತ ಸ್ವಸಹಾಯ ಮಹಿಳಾ ಸಂಘ ಇವರ ಜಂಟಿ ಆಶ್ರಯದಲ್ಲಿ ಅಗಸ್ಟ್ 7 ಮಂಗಳವಾರದಂದು ಕಾಕ೯ಳ ಕಾಬೆಟ್ಟು ಕಟ್ಟೆಮಾರು ಗದ್ದೆಯಲ್ಲಿ ಭಂಡಾರಿ ಬಂದುಗಳ ಕೆಸರುಡ್ ಒಂಜಿ ದಿನ ಆಟಿ ಕೂಟ ಕಾಯ೯ಕ್ರಮ ನಡೆಯಿತು.
ಕಾರ್ಕಳ ಇ.ಎಸ್ .ಐ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ॥ ದಿಶಾ ಕಿಶನ್ ಭಂಡಾರಿ ಇವರು ದೀಪ ಬೆಳಗಿಸಿ ಕಾಯ೯ಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಕ೯ಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು , ಸವಿತ ಸ್ವಸಹಾಯ ಮಹಿಳಾ ಸಂಘದ ಅಧ್ಯಕ್ಷೆ ಅನಿತಾ ಸದಾನಂದ ಭಂಡಾರಿ , ರತನ್ ಭಂಡಾರಿ ಹೆಬ್ರಿ , ಸದಾನಂದ ಭಂಡಾರಿ ನಲ್ಲೂರು , ಶಶಿಧರ ಭಂಡಾರಿ ಕಾಕ೯ಳ , ಜಯಂತ್ ಭಂಡಾರಿ , ಶೇಖರ್ ಹೆಚ್ .ಕಾಕ೯ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಸದಸ್ಯರು ತಮ್ಮ ತಮ್ಮ ಮನೆಗಳಿಂದ ಸುಮಾರು 30 ಬಗ್ಗೆಯ ಆಟಿದ ಖಾದ್ಯಗಳನ್ನು ತಯಾರಿಸಿ ತಂದಿದ್ದನ್ನು ಸ್ವೀಕರಿಸಿ ಸಹ ಭೋಜನ ನಡೆಸಲಾಯಿತು ಹಾಗೂ ಕ್ರೀಡಾ ಕಾರ್ಯದರ್ಶಿ ಹೆಬ್ರಿ ಸುರೇಶ್ ಭಂಡಾರಿ ಯವರ ನೇತೃತ್ವದಲ್ಲಿ ಕೆಸರು ಗದ್ದೆಯಲ್ಲಿ ವಿವಿಧ ರೀತಿಯ ಆಟೋಟ ಸ್ಪರ್ಧೆ ನಡೆಸಲಾಯಿತು.
ಅಂದು ಸಾಯಂಕಾಲ ಜರಗಿದ ಸಮಾರೋಪ ಸಮಾರಂಭವು ಕಾರ್ಕಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ವಿಶ್ವನಾಥ್ ಭಂಡಾರಿ ನಿಂಜೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕಾರ್ಕಳ ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ , ಉಡುಪಿ ಜಿಲ್ಲಾ ಸವಿತಾ ಸಮಾಜದ ಮಾಜಿ ಅಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ , ವಸಂತಿ ನಕ್ರೆ , ಸಂಘದ ಕಾರ್ಯದರ್ಶಿ ಸುಂದರ್ ಭಂಡಾರಿ ಕಾಬೆಟ್ಟು , ಕೋಶಾಧಿಕಾರಿ ಲೀಲಾಧರ ಭಂಡಾರಿ ಜೋಡು ರಸ್ತೆ ಉಪಸ್ಥಿತರಿದ್ದು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಹಾಗೂ ಕಾರ್ಯಕ್ರಮಕ್ಕೆ ಉಡುಪಿ ಪಡುಬಿದ್ರೆ ಮಂಗಳೂರು ಭಂಡಾರಿ ಸಮಾಜ ಸಂಘಗಳ ಮತ್ತು ಭಂಡಾರಿ ಯುವ ವೇದಿಕೆಯ ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕ್ರೀಡಾಪುಟದಲ್ಲಿ ಭಾಗವಹಿಸಿದ ವಿಜೇತರಿಗೆ ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ಬಹುಮಾನ ವಿತರಿಸಿದರು ಕಾರ್ಕಳ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು. ಸುಮನಾ ಕೃಷ್ಣ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸುಂದರ ಭಂಡಾರಿ ಕಟ್ಟಿಮಾರು ಸ್ವಾಗತ ಕೋರಿದರು. ವಸುದೀಶ ಪಲ್ಲಿಯವರು ಧನ್ಯವಾದ ಸಮರ್ಪಿಸಿದರು.
– ಭಂಡಾರಿ ವಾರ್ತೆ
Super