ಕವಿಹೃದಯದ ನಿಸ್ವಾರ್ಥ ರಾಜಕಾರಣಿ,ಮಾನವತಾವಾದಿ, ಶ್ರೇಷ್ಠ ಚಿಂತಕ,ಉತ್ತಮ ವಾಗ್ಮಿ,ದಾರ್ಶನಿಕ,ಪತ್ರಕರ್ತ ಇವೆಲ್ಲವುಗಳಿಗಿಂತ ಹೆಚ್ಚಾಗಿ ಅಪ್ರತಿಮ ದೇಶಭಕ್ತ, ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಆತ್ಮ ಆಗಸ್ಟ್ 16 ರ ಗುರುವಾರ ಸಂಜೆ 5.05 ಕ್ಕೆ ದೇಹತ್ಯಾಗ ಮಾಡುವುದರೊಂದಿಗೆ ರಾಷ್ಟ್ರವ್ಯಾಪಿ ಒಂದು ರೀತಿಯ ಸೂತಕದ ಛಾಯೆ ಆವರಿಸಿಕೊಂಡಿದೆ.
1998 ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾದರೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಮಾಡಿದ ಪಗಡೆಯಾಟಕ್ಕೆ ಬಲಿಯಾಗಿ ಹದಿಮೂರು ತಿಂಗಳು ಮಾತ್ರ ಪ್ರಧಾನಿಯಾಗಿದ್ದು ಕೆಳಗಿಳಿದರು.ಆದರೆ 1999 ರಲ್ಲಿ ಮಾಡಿಕೊಂಡ ಎನ್.ಡಿ.ಎ ಮೈತ್ರಿಕೂಟ ಅವರ ಕೈ ಬಿಡಲಿಲ್ಲ.1999 ರಿಂದ 2004 ರ ವರೆಗೆ ಪೂರ್ಣಾವಧಿಯ ಪ್ರಧಾನಮಂತ್ರಿಯಾಗಿ ಅಧಿಕಾರ ಪೂರೈಸಿದ್ದು ಮಾತ್ರವಲ್ಲದೆ ಇಡೀ ವಿಶ್ವವೇ ತಲೆದೂಗುವಂತೆ ಆಡಳಿತ ನಡೆಸಿದರು.ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ,ಕಾರ್ಗಿಲ್ ಯುದ್ಧದ ವಿಜಯೋತ್ಸವ,ಸ್ನೇಹ ಸೌಹಾರ್ದದ ಸಂಕೇತವಾದ ಅಮೃತಸರದಿಂದ ಪಾಕಿಸ್ತಾನದ ಲಾಹೋರ್ ವರೆಗೆ ಬಸ್ ಪ್ರಯಾಣ ಆರಂಭ,ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆ,ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಇವೇ ಮೊದಲಾದ ದೂರದೃಷ್ಠಿತ್ವದ ಯೋಜನೆಗಳಿಂದಾಗಿ ಜನಪ್ರಿಯರಾದರು.
ಅಚ್ಚುಕಟ್ಟಾದ ಲೇಖನ, ಸಂಪೂರ್ಣ ಮಾಹಿತಿ ನೀಡಿ ಅಟಲ್ ಜಿ ಯವರ ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ತ್ಯಾಂಕ್ಸ್ ಭಂಡಾರಿ ವಾರ್ತೆ.