ತುಳುನಾಡುಪುರಾಣಕಾಲದ ನಾಗಲೋಕವೆಂದೂ, ಇಲ್ಲಿ ಇರುವ ನಾಗಗಳೇಮನುಷ್ಯರಾಗಿ ಪರಿವರ್ತನೆಗೊಂಡರೆಂಬುದು ಪುರಾಣದ ಉಲ್ಲೇಖ. ಈನಾಡು ತಲಸಿರಿಯ ಮಕ್ಕಳಾದ ನಲವತ್ತುಜನ ನಾಗಕನ್ಯೆಯರ ಅಧಿಕಾರದಲ್ಲಿತ್ತೆಂದು ಜಾನಪದ ಇತಿಹಾಸದಲ್ಲಿದೆ. ಮಲಸಿರಿಯಮಕ್ಕಳು 60 ಜನ ನಾಗಕನ್ಯೆಯರು ಮಲಯಾಳರಾಜ್ಯವನ್ನು ಆಳುತ್ತಿದ್ದರೆಂದೂ, ತುಳುನಾಡು ಮತ್ತು ಮಲಯಾಳದಲ್ಲಿ ನಾಗಮೂಲಕಟ್ಟಾದ ಅಳಿಯಕಟ್ಟಿನವರು ಇದ್ದೂ, ಅವರು ನಾಗಾರಾಧಕರಾಗಿಇರುವುದನ್ನು ಕಾಣುತ್ತಿದ್ದೇವೆ. ಇಲ್ಲಿ ಹೆಣ್ಣು ಮೂಲಕಟ್ಟಿಗೆವಾಸುಕಿಯೇ ಕಾರಣ, ತನ್ನ ಸೊಸೆಯಂದಿರಿಗೆಈ ನಾಡಿನ ಆಳ್ವಿಕೆಬಿಟ್ಟು ಕೊಟ್ಟಿದ್ದು, ತುಳುವರು ನಾಗವಂಶಜರೆಂದೆ ಐತಿಹ್ಯ. ಇಲ್ಲಿ ನಾಗರ ಆರಾಧನೆ ವಿಶೇಷವಾಗಿಇದೆ. ಈ ಆರಾಧನೆಯಲ್ಲಿ ರಾಹುವಿಗೆಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ಗ್ರಂಥಗಳಲ್ಲಿರಾಹುವಿನಿಂದ ನಾಗದೋಷಗಳನ್ನು ತಿಳಿಯುವುದು ಸುಲಭ. ಶನಿ–ಕುಜರು ಕೂಡಾನಾಗಕಾರಕರೆ ಆದರೂ, ನಾಗನ ಬಗ್ಗೆಹೆಚ್ಚಿನ ವಿಚಾರ ರಾಹುವಿನಿಂದಲೇ ತಿಳಿಯುವರು. ನಾಗರ ಆರಾಧನೆ ಒಂದು ಪ್ರಕೃತಿಪೂಜೆ. ತಮ್ಮ ಗದ್ದೆಗಳ ಮೂಲೆಯಲ್ಲಿ ನಾಗಬನಗಳನ್ನುಬೆಳೆಸಿ, ಉಳಿಸಿ ನಾಗರ ಕಲ್ಲನ್ನುಮರದ ಬುಡದಲ್ಲಿ ಪ್ರತಿಷ್ಠೆ ಮಾಡಿ, ಆ ಬನದಮರಗಳನ್ನು ರಕ್ಷಿಸಿ ಖಗ, ಮಿಗ, ಉರಗಗಳಿಗೆ ಒಂದು ನೆಲೆಮಾಡಿಕೊಟ್ಟು ತಮ್ಮಔದಾರ್ಯವನ್ನು ತುಳುವರು ಮೆರೆದಿದ್ದಾರೆ.
ಆಟಿತಿಂಗಳಲ್ಲಿ ಬರುವ ನಾಗರಪಂಚಮಿಯಂದು ನಾಗರಕಲ್ಲಿಗೆಹಾಲನ್ನು ಎರೆಯುವುದು, ತಂಬಿಲ ಬಡಿಸುವುದು, ತುಳುವರಪ್ರಕೃತಿಪೂಜೆಯ ಕ್ರಮ. ನಾಗಬನದ ಸ್ಥಾಪನೆಮಾಡಿದ ಕುಟುಂಬಕ್ಕೆ ಎಲ್ಲಿ ಆ ನಾಗರಸ್ಥಾಪನೆ ಮಾಡಿರುವುದೋ ಅಲ್ಲೇ ಮೂಲಸ್ಥಾನವೆಂದೂ, ಆಬನದಲ್ಲಿ ವಾರ್ಷಿಕ ತಂಬಿಲ, ಹಾಲೆರೆಯುವಕಾರ್ಯಕ್ರಮ ಈಗಲೂ ಮಾಡುತ್ತಿದ್ದಾರೆ. ಪಂಚಾಮೃತ, ಸರ್ಪಸೂಕ್ತ ಹೋಮ, ಆಶ್ಲೇಷಬಲಿ ಇತ್ಯಾದಿನಾಗಾರಾಧನೆಯು ಈಗಲೂ ನಡೆಯುತ್ತಿದೆ. ಆದರೆ, ಹಿಂದೆ ಹಿಂದುಳಿದ ವರ್ಗದ ವೈದ್ಯರು ಢಕ್ಕೆಬಡಿದು ಭಜನೆಯ ಮೂಲಕ ಕುಣಿದುನಾಗನನ್ನು ಮೆಚ್ಚಿಸುವಂತ ಕ್ರಮ ಇತ್ತು. ಈಗಲೂಖಡ್ಗೇಶ್ವರಿ ಎಂಬ ನಾಗಕನ್ನಿಕೆಯ ಪ್ರೀತ್ಯಾರ್ಥಢಕ್ಕೆ ಬಲಿ ನಡೆಯುತ್ತಿದೆ. ಮೇರಜನಾಂಗದವರಕಾಡ್ಯನಾಟ್ಯದ ಮೂಲದಲ್ಲಿ ವಿಶೇಷವಿದೆ. ಅದನ್ನು ಕಂಡು ನಾಗಮಂಡಲವೆಂದೂ, ಅರ್ಧನಾರಿ ಮತ್ತು ದರ್ಶನಪಾತ್ರಿಗಳ ಒಂದುವಿಶೇಷ ಆರಾಧನೆ ನಡೆಯುತ್ತಿದ್ದು, ಇದುನಾಗಾರಾಧನೆಯ ಮೂಲಸ್ವರೂಪ ಖಂಡಿತಾ ಅಲ್ಲ. ನಾಗಮನುಷ್ಯನ ಮೈಮೇಲೆ ಆಕರ್ಷಣೆಯಾಗುವುದಿಲ್ಲ. ಹಣಗಳಿಸಲುಒಂದು ವರ್ಗ ಕಂಡುಕೊಂಡ ದಾರಿಇದು. ನಾಗಪಾತ್ರಿಗೆ ದರ್ಶನ ಬಂದು, ಬನದಮರಗಳನ್ನು ಕಡಿಸಿ, ನಾಗರ ಕಟ್ಟೆ, ಗುಡಿ ಕಟ್ಟಿಸಲು ಮಾರ್ಗದರ್ಶನ ನೀಡುವುದನ್ನು ನೋಡಿದರೆ ಪ್ರಕೃತಿನಾಶಕ್ಕೆ ಈಪಾತ್ರಿಯೆ ಕಾರಣನಾಗಿರುವುದು ಸತ್ಯ. ಬೂತ ನಾಗರನಡುವೆ ಜನರನ್ನು ವಂಚಿಸುವ ನಾಟಕಕ್ಕೆಇವರೇ ಕಾರಣವೆಂಬುದನ್ನು ಎಲ್ಲರೂ ತಿಳಿಯಲೇಬೇಕು.
ನಾಗನನ್ನು ಹಿಂಸಿಸುವುದು ತಪ್ಪು. ನಾಗ ಸತ್ತರೆಸಂಸ್ಕಾರ ಮಾಡಿಸುವ ಕ್ರಮ, ಆಶ್ಲೇಷಬಲಿಮಾಡಿಸುವ ಕ್ರಮ ಹಿಂದಿನಿಂದಲೂ ಕಾಣುತ್ತಿದ್ದೇವೆ. ಸರ್ಪಗಳು ಸುರಸೆಯ ಮಕ್ಕಳು, ಆಸರ್ಪಗಳನ್ನು ಈಗಲೂ ಕಾಣುತ್ತಿದ್ದೇವೆ. ಕದ್ರುವಿನಮಕ್ಕಳಾದ ನಾಗಗಳು ಕಾಣಿಸುವುದಿಲ್ಲ. ನಾವುನಾಗರ ಆರಾಧನೆಯನ್ನು ಕಲ್ಲಿಗೆ ಹಾಲೆರೆದು, ತಂಬಿಲಹಾಕಿ ಮಾಡುತ್ತಿದ್ದು, ಕೆಲವೆಡೆ ಜೀವಂತ ಸರ್ಪಗಳನ್ನುಕೂಡಾ ಪೂಜಿಸುವುದಿದೆ. ಒಟ್ಟಿನಲ್ಲಿ ನಾಗಾರಾಧನೆ ಒಂದು ವಿಶೇಷ ಪ್ರಕೃತಿಪೂಜೆ. ಮನುಷ್ಯನ ಪ್ರಾರಬ್ಧ ದೋಷಗಳನ್ನುನಿವಾರಿಸುವ ಈ ಆರಾಧನೆಗೆ ವಿಶೇಷಮಹತ್ವವಿದೆ.
ದಿನಾಂಕ 27/07/2017 ರಂದು ನಾಗಾರಾಧನೆಯ ವಿಶಿಷ್ಟನಾಗರಪಂಚಮಿ ಇದ್ದು, ನಾಡಿನ ಜನನಾಗಾರಾಧನೆಯನ್ನು ಸಂಭ್ರಮ ದಿಂದ ಆಚರಿಸುತ್ತಾರೆ. ಮನುಷ್ಯನ ಪಿಟ್ಯೂಟರಿ ಗ್ರಂಥಿಗೂ, ನಾಗಹೆಡೆಗೂ ಒಂದು ವೈಜ್ಞಾನಿಕ ಸಂಬಂಧವಿದೆ. ಆದ್ದರಿಂದ ನಾಗನನ್ನುಕಂಡರೆ ನಮಗೆ ಹೆದರಿಕೆಯಾಗುತ್ತದೆ. ನಾಗಪರೋಪಕಾರಿ ಜೀವಿ. ಜನವರಿ ತಿಂಗಳಿನಿಂದಜೂನ್ ತಿಂಗಳವರೆಗೆ ಸರ್ಪಗಳ ಮಿಲನವಾಗುತ್ತದೆ. ನಲವತ್ತುದಿನಗಳು ಮಿಲನದಿಂದ, ವಿಶೇಷಆಮ್ಲಜನಕ ಗಾಳಿಯೊಡನೆ ಸೇರಿ, ನಮ್ಮ ನರಮಂಡಲಕ್ಕೆಪುಷ್ಠಿ ಕೊಡುತ್ತದೆ ಎಂಬುದು ವಿಜ್ಞಾನಿಗಳ ಅಂಬೋಣ. ಅಂತೂ ಸರ್ಪ ಸಂಬಂಧ ನಮಗಿದೆ. ನಾಗಮಂಡಲ, ನಾಗದರ್ಶನದ ನಾಟಕಗಳನ್ನು ಬಿಟ್ಟರೆ, ಉಳಿದ ಆರಾಧನೆಗೆ ಪುರಾತನಇತಿಹಾಸವಿದೆ ಎಂಬುದು ಸತ್ಯ.
✍🏻 : ಕೆ. ಅನಂತರಾಮ ಬಂಗಾಡಿ
ಸೂಪರ್ ಸರ್,ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಮಾಹಿತಿಗಳ ನಿರೀಕ್ಷೆ ನಮಗಿದೆ.
ಸೂಪರ್ ಸರ್,ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಮಾಹಿತಿಗಳ ನಿರೀಕ್ಷೆ ನಮಗಿದೆ.
ಸೂಪರ್..
Very nice
Very nice
Very nice
Very nice
ನಾಗಾರಾಧನೆ ಎಂಬುದು ಒಂದು ಪ್ರಕೃತಿ ಪೂಜೆ.ಹಿಂದುಗಳಲ್ಲಿ ನಾಗಾರಾಧನೆಗೆ ವಿಶೇಷ ಸ್ಥಾನಮಾನವಿದೆ ಎಂಬುದನ್ನು ತಿಳಿಸಿಕೊಟ್ಟ ಲೇಖನ. ಚೆನ್ನಾಗಿತ್ತು.