ಬೆಂಗಳೂರು ಭಂಡಾರಿ ಸಮಾಜ ಸಂಘದ ಮಾಜೀ ಅಧ್ಯಕ್ಷರೂ, ನಮ್ಮ ಭಂಡಾರಿ ಸಮಾಜದ ಹಿರಿಯರೂ,ಮಾರ್ಗದರ್ಶಕರೂ ಆಗಿರುವ ಶ್ರೀ ಲಕ್ಷ್ಮಣ ಕರಾವಳಿಯವರು ಮತ್ತು ಶ್ರೀಮತಿ ಸುಮತಿ ಲಕ್ಷ್ಮಣ ಕರಾವಳಿಯವರ ದ್ವಿತೀಯ ಪುತ್ರ ಶ್ರೀ ಆದಿತ್ಯ ಲಕ್ಷ್ಮಣ ಭಂಡಾರಿಯವರಿಗೆ ಆಗಸ್ಟ್ 28 ರ ಮಂಗಳವಾರ ಹದಿನಾರನೇ ಹುಟ್ಟು ಹಬ್ಬದ ಸಂಭ್ರಮ.
ಇವರ ತಾಯಿ ಶ್ರೀಮತಿ ಸುಮತಿ ಲಕ್ಷ್ಮಣ ಕರಾವಳಿಯವರು ಸರ್ಕಾರಿ ವೈದ್ಯಾಧಿಕಾರಿ.ಅವರು ಪ್ರಸ್ತುತ ವೈಟ್ ಫೀಲ್ಡ್ ಸಿದ್ದಾಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಅಣ್ಣ ಶ್ರೀ ಹರ್ಷಿತ್ ಲಕ್ಷ್ಮಣ ಭಂಡಾರಿ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ MBBS ಅಭ್ಯಸಿಸುತ್ತಿದ್ದಾರೆ.
ಈ ಸುಸಂದರ್ಭದಲ್ಲಿ ಆದಿತ್ಯ ರಿಗೆ ಅವರ ತಂದೆ, ತಾಯಿ, ಅಣ್ಣ,ಕುಟುಂಬ ವರ್ಗದವರು, ಸ್ನೇಹಿತರು, ಸಹಪಾಠಿಗಳೆಲ್ಲರೂ ಹುಟ್ಟು ಹಬ್ಬದ ಶುಭಾಶಯಗಳುನ್ನು ಕೋರುತ್ತಿದ್ದಾರೆ.
ಶ್ರೀ ಆದಿತ್ಯ ಲಕ್ಷ್ಮಣ ಭಂಡಾರಿಯವರು ಹದಿನಾರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಶ್ರೀ ದೇವರು ಅವರಿಗೆ ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ,ಶ್ರೀ ಶಾರದೆಯು ಅವರಿಗೆ ಉಜ್ವಲ ಭವಿಷ್ಯವನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯು ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.