ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ,ವರ್ಸಟೈಲ್ ಯೂತ್ ಷೊಟೋಕಾನ್ ಕರಾಟೆ ಫೌಂಡೇಷನ್ ಜಂಟಿಯಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಸಂಗಾಕು ಟಿ.ವಿ ಯವರ ಸಹಭಾಗಿತ್ವದಲ್ಲಿ ಮುಂಬಯಿ ದಹೀಸರ್ ಈಸ್ಟ್ ನಲ್ಲಿರುವ ದಹೀಸರ್ ಸ್ಪೋರ್ಟ್ಸ್ ಫೌಂಡೇಷನ್ ನ “ಸಮಾಜ ಕಲ್ಯಾಣ ಕೇಂದ್ರ ಹಾಲ್” ನಲ್ಲಿ ಆಗಸ್ಟ್ 19 ರ ಭಾನುವಾರ ನಡೆದ ಮಾಸ್ಟರ್ಸ್ ರಾಯಲ್ ಕಪ್ ನ್ಯಾಷನಲ್ ಕರಾಟೆ ಚಾಂಪಿಯನ್ ಷಿಪ್-2018 ರಲ್ಲಿ ಆದಿ ಯಶವಂತ್ ಭಂಡಾರಿ ಹನ್ನೆರಡು ವರ್ಷದೊಳಗಿನ ಬಾಲಕರ ಕಾಟಾ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಮಹಾರಾಷ್ಟ್ರ ದ ನಲ್ಲಸೋಪರ ಈಸ್ಟ್ ಸಂತ ಅಲೋಶಿಯಸ್ ಪ್ರೌಢಶಾಲೆ(ಸಂತ ಕ್ಸೇವಿಯರ್ಸ್ ಗ್ರೂಪ್ ಅಫ್ ಸ್ಕೂಲ್) ಯಲ್ಲಿ ಆರನೇ ತರಗತಿ ವಿದ್ಯಾರ್ಥಿಯಾಗಿರುವ ಆದಿ ಯಶವಂತ್ ಭಂಡಾರಿ ಅವರು ಮೂಲತಃ ಮುಲ್ಕಿಯವರಾದ, ಪ್ರಸ್ತುತ ನಲ್ಲಸೋಪರ ಈಸ್ಟ್ ನಲ್ಲಿ ನೆಲೆಸಿರುವ ಯಶವಂತ ಎಂ.ಭಂಡಾರಿ ಹಾಗು ಚಿತ್ರಕಲಾ ವೈ.ಭಂಡಾರಿ ದಂಪತಿಯ ಪುತ್ರ.
ಆದಿ ತನ್ನ ಏಳನೇ ವಯಸ್ಸಿನಲ್ಲೇ ಕರಾಟೆ ಕಲಿಯಲಾರಂಭಿಸಿ ಈಗಾಗಲೇ ಕರಾಟೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾನೆ.
ಆದಿ ಯಶವಂತ್ ಭಂಡಾರಿ ಕರಾಟೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ.ಆ ಮೂಲಕ ತನ್ನ ಹೆತ್ತವರಿಗೆ ಮತ್ತು ಭಂಡಾರಿ ಸಮಾಜಕ್ಕೆ ಗೌರವ, ಹೆಮ್ಮೆ ತಂದುಕೊಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಹಾರ್ದಿಕವಾಗಿ ಶುಭ ಹಾರೈಸುತ್ತದೆ.
— ಭಂಡಾರಿವಾರ್ತೆ.