ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಮಾಸಿಕ ಸಭೆ ಸೆಪ್ಟೆಂಬರ್ 2 ರ ಭಾನುವಾರ ಮದ್ಯಾಹ್ನ 3.00 ಗಂಟೆಗೆ ಸರಿಯಾಗಿ ಹೊಟೇಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್.ಎ. ಇವರ ನೇತೃತ್ವದಲ್ಲಿ ನೆರವೇರಿತು.
ಸಂಘದ ಕಾರ್ಯದರ್ಶಿ ಪ್ರಸಾದ್ ಮುನಿಯಾಲ್ ಎಲ್ಲರನ್ನೂ ಸ್ವಾಗತಿಸಿದರು.ಸಭೆಯಲ್ಲಿ ಈ ವರ್ಷದಲ್ಲಿ ವಿದ್ಯಾರ್ಥಿವೇತನದ ಹಂಚುವಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು ಹಾಗೂ 2018 ರ ಡಿಸೆಂಬರ್ 25 ರಂದು ಜರಗುವ ವಾರ್ಷಿಕ ಮಹಾಸಭೆಗೆ ಮುಂಚಿತವಾಗಿ ಬೆಂಗಳೂರು ವಲಯದ ಭಂಡಾರಿ ಬಂಧುಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು .
ಪುರುಷರಿಗೆ ಕ್ರಿಕೆಟ್ ಹಾಗೂ ಮಹಿಳೆಯರಿಗೆ ಚೆಂಡು ಎಸೆಯುವ(Throw ball)ಸ್ಪರ್ಧೆ ನಡೆಸುವ ಬಗ್ಗೆ ತೀರ್ಮಾನಿಸಿ, ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಭಂಡಾರಿ ವಾರ್ತೆಯಲ್ಲಿ ಪ್ರಕಟಿಸಲಾಗುವುದು.
ಸಭೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ಅಂಗೀಕರಿಸಲಾಯಿತು.ಇನ್ನು ಮುಂದಕ್ಕೆ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಮಾಸಿಕ ಸಭೆಯನ್ನೂ ಸೇರಿಸಿ ಸಂಘದ ಎಲ್ಲಾ ಚಟುವಟಿಕೆಗಳ ಬಗ್ಗೆ ಸಂಘದ ಅಧ್ಯಕ್ಷರ ಮತ್ತು ಕಾರ್ಯಕಾರಿ ಸಮಿತಿಯ ಅಧಿಕೃತ ಪರಿಶೀಲನೆಗೊಂಡ ವರದಿಗಳನ್ನು “ಭಂಡಾರಿವಾರ್ತೆ” ಯಲ್ಲಿ ಪ್ರಕಟಿಸಲು ಸರ್ವಾನುಮತದ ಸಮ್ಮತಿ ಪಡೆದು ಅಧಿಕೃತ ಅಂಗೀಕಾರವನ್ನು ಘೋಷಿಸಲಾಯಿತು.
ಸಭೆಯಲ್ಲಿ ಸಂಘದ ಹಿರಿಯರಾದ ಮಾಧವ ಭಂಡಾರಿ ಬೆಂಗಳೂರು,ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಕರಾವಳಿ,ಪ್ರಕಾಶ್ ಭಂಡಾರಿ ಕಟ್ಲ,ಮಾಧವ ಭಂಡಾರಿ ಸಾಗರ,ಸುಧಾಕರ ಬನ್ನಂಜೆ, ಕುಶಾಲ್ ಕುಮಾರ್, ಮಾಧವ ಭಂಡಾರಿ ಅಚ್ಲಾಡಿ,ಸದಾನಂದ ಭಂಡಾರಿ, ರಾಘವೇಂದ್ರ ಭಂಡಾರಿ ,ಕರುಣಾಕರ್ ಭಂಡಾರಿ ,ಅಕ್ಷತಾ ಭಂಡಾರಿ, ರತ್ನಾಕರ್ ಭಂಡಾರಿ ಬಸ್ರೂರು,ಅರುಣ್ ಭಂಡಾರಿ, ಆದರ್ಶ್ ಭಂಡಾರಿ ಮುಂತಾದವರು ಉಪಸ್ಥಿತರಿದ್ದು ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
ಅಂತಿಮವಾಗಿ ವಂದನಾರ್ಪಣೆಯೊಂದಿಗೆ ಅಂದಿನ ಮಾಸಿಕ ಸಭೆ ಕೊನೆಗೊಂಡಿತು.
ವರದಿ-ಪ್ರದೀಪ್ ಫಲಿಮಾರು (ಸಂಘಟನಾ ಕಾರ್ಯದರ್ಶಿ).