September 20, 2024

ಬಾಲ್ಯದಿಂದಲೂ ಇವರಿಗೆ ಚಿತ್ರಕಲೆಯಲ್ಲಿ ಆಸಕ್ತಿ.ಮೊದಲು ಮೊದಲು ಹವ್ಯಾಸವಾಗಿ ಆರಂಭವಾದ ಕಲೆ ಈಗ ಅವರನ್ನು ಒಬ್ಬ ಪರಿಣಿತ ಕಲಾವಿದನನ್ನಾಗಿ ರೂಪಿಸಿದೆ.ಇಂಜಿನಿಯರ್ ವೃತ್ತಿಯನ್ನು ಮಾಡುತ್ತಿದ್ದರೂ ಹವ್ಯಾಸಿ ಚಿತ್ರಕಲಾವಿದರಾಗಿ ಗುರುತಿಸಿಕೊಂಡಿರುವುದು ಬೇರಾರೂ ಅಲ್ಲ. ಅವರು ನಮ್ಮ ಸಾಗರದ ನವೀನ್. ಕೆ. ಭಂಡಾರಿ.

ಶಿವಮೊಗ್ಗ ಜಿಲ್ಲೆ ಸಾಗರದ ಗಾಂಧಿನಗರ ನಿವಾಸಿಗಳಾದ ಶ್ರೀ ಕಿಟ್ಟ ಭಂಡಾರಿ ಮತ್ತು ಶ್ರೀಮತಿ ಗುಲಾಬಿ ಕಿಟ್ಟ ಭಂಡಾರಿ ದಂಪತಿಯ ಪುತ್ರರಾದ ಇವರು ಪಿಯುಸಿ ವರೆಗಿನ ವಿಧ್ಯಾಭ್ಯಾಸವನ್ನು ಸಾಗರದಲ್ಲಿ ಪೂರೈಸಿದರು.ಇಂಜಿನಿಯರಿಂಗ್ ವಿಧ್ಯಾಭ್ಯಾಸವನ್ನು ಮೈಸೂರಿನ NIEIT ಯಲ್ಲಿ ಪೂರ್ಣಗೊಳಿಸಿದ ಇವರು ಮಂಗಳೂರಿನ ಪ್ರಸನ್ನ ಟೆಕ್ನಾಲಜೀಸ್ ಪ್ರವೈಟ್ ಲಿಮಿಟೆಡ್ ನಲ್ಲಿ ಉದ್ಯೋಗದಲ್ಲಿದ್ದಾರೆ.

ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಶಾಲಾ ಕಾಲೇಜು ದಿನಗಳಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದ್ದರು.
ಇವರು ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವಾಗ ಇವರ ಕಲಾ ಪ್ರತಿಭೆಯನ್ನು ಗುರುತಿಸಿದ ಕಾಲೇಜ್ ಆಡಳಿತ ಮಂಡಳಿ ಇವರನ್ನು  ಕಾಲೇಜ್ ಮ್ಯಾಗಜಿನ್ ಡಿಸೈನ್ ಹೆಡ್ ಆಗಿ  ನೇಮಿಸಿದ್ದು ಇವರ ಚಿತ್ರಕಲಾ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಂಜಿನಿಯರಿಂಗ್ ಹಂತದಲ್ಲಿರುವಾಗ ವಿವಿಧ ಚಿತ್ರಕಲಾ ಸ್ಪರ್ಧೆಗಳಲ್ಲಿ  ಕಾಲೇಜ್ ನ್ನು ಪ್ರತಿನಿಧಿಸಿ ವಿಜೇತರಾಗಿ ಕಾಲೇಜಿಗೆ ಉತ್ತಮ ಹೆಸರನ್ನು ತಂದುಕೊಟ್ಟಿದ್ದರು.

ತಮ್ಮ ವೃತಿ ಜೀವನದ ಬಿಡುವಿನ ಸಮಯದಲ್ಲಿ ಚಿತ್ರಕಲೆಯ ವಿವಿಧ ಕಾರ್ಯಗಾರಗಳಿಗೆ ಭೇಟಿ ನೀಡುತ್ತಾ ಅಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ ಚಿತ್ರಕಲೆಯ ವೃತ್ತಿಪರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶ ವಿದೇಶಗಳ ವೃತ್ತಿಪರರೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದಿದ್ದಾರೆ.

ಇವರ ವೃತಿ ಜೀವನ ಮತ್ತು ಕಲಾ ಜೀವನ ಉತ್ತಮ ರೀತಿಯಲ್ಲಿ ಸಾಗಿ ಅವರ ಕುಟುಂಬಕ್ಕೂ ಹಾಗೂ ನಮ್ಮ ಭಂಡಾರಿ ಸಮಾಜಕ್ಕೂ ಉತ್ತಮ ಹೆಸರು ತರಲಿ,ಚಿತ್ರಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಶ್ರೀ ದೇವರು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃದಯಪೂರ್ವಕವಾಗಿ ಶುಭ ಹಾರೈಸುತ್ತದೆ.

ಮಾಹಿತಿ ಮತ್ತು ವರದಿ :

ಸುನಿಲ್ ರಾಜ್ ಭಂಡಾರಿ.
ಬಾಳೇಹೊನ್ನೂರು.

ಇವರನ್ನು ಸಂಪರ್ಕಿಸಲು ಕೆಳಗಿನ ಇನ್ಸ್ಟಗ್ರಾಮ್ ಲಿಂಕನ್ನು ಕ್ಲಿಕ್ ಮಾಡಿ
https://www.instagram.com/naveen.k.sagar

Leave a Reply

Your email address will not be published. Required fields are marked *