ಭಂಡಾರಿವಾರ್ತೆಯ ಓದುಗರಿಗೆ “ಜಿಡ್ಡು ಪ್ರವಚನ” ದ ಮೂಲಕ ಚಿರಪರಿಚಿತರಾಗಿರುವ ಕುಂದಾಪುರದ ಶ್ರೀ ವೆಂಕಟೇಶ್ ಭಂಡಾರಿಯವರಿಗೆ ಸೆಪ್ಟೆಂಬರ್ 13 ರ ಗುರುವಾರ ಹುಟ್ಟು ಹಬ್ಬದ ಸಂಭ್ರಮ.
ಕುಂದಾಪುರದ ಶ್ರೀ ಮಹಾಬಲ ಭಂಡಾರಿ ಮತ್ತು ಶ್ರೀಮತಿ ಬೇಬಿ ಮಹಾಬಲ ಭಂಡಾರಿ ದಂಪತಿಯ ಪುತ್ರರಾದ ಇವರು
“ಕಣಬ್ರಹ್ಮವೆಂಕಿ” ಎಂಬ ಅಂಕಿತನಾಮದಿಂದ ಜನಪ್ರಿಯರಾದವರು. ಹವ್ಯಾಸಿ ಬರಹಗಾರರಾದ ಇವರು ತಮ್ಮ ಲೇಖನಗಳಲ್ಲಿ ಮಾನವನ ಸಾಮಾಜಿಕ ನೆಲಗಟ್ಟು, ಮಾನವೀಯ ಮೌಲ್ಯಗಳ ಮೊನಚು ಬರಹಗಳಿಂದ ಓದುಗರನ್ನು ಚಿಂತನೆಗೆ ದೂಡುವುದರಲ್ಲಿ ಸಿದ್ಧಹಸ್ತರು.
ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ಪತ್ನಿ ಶ್ರೀಮತಿ ತುಳಸಿ ವೆಂಕಟೇಶ್ ಭಂಡಾರಿ, ಮಗಳು ಶ್ರೀಬ್ರಾಹ್ಮಿ, ಅವರ ಬಂಧುಗಳು, ಆತ್ಮೀಯರು, ಸ್ನೇಹಿತರು ಅವರಿಗೆ ಶುಭ ಹಾರೈಸುತ್ತಿದ್ದಾರೆ.