ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ದ.ಕ.ಜಿಲ್ಲಾ ಸಮಿತಿ ಮಂಗಳೂರು ಉಪಸಮಿತಿ ಸುರತ್ಕಲ್ ಇದರ ಅಧ್ಯಕ್ಷರಾಗಿ ಮಂಗಳೂರು ತಾಲೂಕು ಕುಳಾಯಿ ಹೊನ್ನಕಟ್ಟೆ ದಿವಂಗತ ನಾರಾಯಣ ಭಂಡಾರಿ ಮತ್ತು ಸೀತಾ ನಾರಾಯಣ ಭಂಡಾರಿ ದಂಪತಿಯ ಪುತ್ರ ಹಾಗೂ ಕುಳಾಯಿ ಶ್ರೀ ನಾಗೇಶ್ವರ ಸೌಂಡ್ಸ್ ಮಾಲೀಕರಾದ
ಶ್ರೀ ಸುಕುಮಾರ್ ಕುಳಾಯಿ
ಇವರು ಆಯ್ಕೆಯಾಗಿದ್ದಾರೆ. ಸಂಘದ ನೂತನ ಅಧ್ಯಕ್ಷರ ಪದಗ್ರಹಣ ಕಾಯ೯ಕ್ರಮವು ಅಕ್ಟೋಬರ್ 1 ರಂದು ಸುರತ್ಕಲ್ ನ ಬಂಟರ ಭವನದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಪದಗ್ರಹಣ ಸಭೆಯ ಅಧ್ಯಕ್ಷತೆಯನ್ನು ಕ.ರಾ.ಅ.ಪ.ವಿ.ಗು.ಸಂಘದ ದ.ಕ.ಜಿಲ್ಲಾ ಸಮಿತಿಯ ಗೌರವ ಜಿಲ್ಲಾಧ್ಯಕ್ಷಾರದ ಶ್ರೀ ಪಿ.ಶಿವಕುಮಾರ್ ಪೈಲೂರು ವಹಿಸಿದ್ದರು.ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ॥ ಶ್ರೀ. ವೈ.ಭರತ್ ಶೆಟ್ಟಿ, ಮಾಜಿ ಶಾಸಕ ಶ್ರೀ ಬಿ.ಎ.ಮೈೂದಿನ್ ಬಾವ, ಬೆಂಗಳೂರು ಕ.ರಾ.ಅ.ಪ.ವಿ.ಗು.ಸ.ಮಾಜಿ ಉಪಾಧ್ಯಕ್ಷ ಶ್ರೀ ರಮೇಶ್ ,ಮಂಗಳೂರು ಮೆಸ್ಕಾಂ -2 ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಎನ್.ಎಸ್.ಸತೀಶ್ಚಂದ್ರ , ಸಾಮಾಜಿಕ ಮತ್ತು ಧಾರ್ಮಿಕ ಮುಖಂಡ ಶ್ರೀ ಮಹಾಬಲ ಪೂಜಾರಿ ಕಡಂಬೋಡಿ ಮತ್ತು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸುರೇಶ್ ಭಂಡಾರಿ ಕಡಂದಲೆ ಉಪಸ್ಥಿತರಿದ್ದರು.
ಸುರತ್ಕಲ್ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘವು ಕಳೆದ 27 ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದವರ ಮನೆಗಳಿಗೆ , ಅಂಗನವಾಡಿ , ಶಾಲೆ , ಸಾವ೯ಜನಿಕ ಸಂಘ ಸಂಸ್ಥೆಗಳು ಸೇರಿ ಸರಿಸುಮಾರು 146 ಉಚಿತ ವಿದ್ಯುತ್ ಸಂಪರ್ಕ ಅಳವಡಿಸಿರುವುದಲ್ಲದೇ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿ ಜನಮನ್ನಣೆ ಗಳಿಸಿದೆ .ಇಂತಹ ಸಂಸ್ಥೆಯ ಅಧ್ಯಕ್ಷರಾಗಿ ಭಂಡಾರಿ ಸಮಾಜದ ಬಂಧು ಶ್ರೀ ಸುಕುಮಾರ್ ಕುಳಾಯಿ ಅಧ್ಯಕ್ಷರಾಗಿರುವುದು ಭಂಡಾರಿ ಸಮುದಾಯದ ಹಿರಿಮೆ ಮತ್ತಷ್ಟು ಹೆಚ್ಚಿಸಿದೆ.
ಕಚ್ಚೂರು ಶ್ರೀ ನಾಗೇಶ್ವರ ದೇವರ ಅನುಗ್ರಹದಿಂದ ಕಳೆದ 25 ವರ್ಷಗಳಿಂದಲೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಉತ್ತಮ ಹೆಸರು ಗಳಿಸಿದ ನಾಗೇಶ್ವರ ಸೌಂಡ್ಸ್ ಮತ್ತು ಲೈಂಟಿಗ್ಸ್ ಸಂಸ್ಥೆಯನ್ನು ನಡೆಸುತ್ತಿರುವ ಸುಕುಮಾರ್ ಕುಳಾಯಿ.
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ, ಮಂಗಳೂರು ದಸರಾವೆಂದೇ ಹೆಸರುಗಳಿಸಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಉರ್ವ ಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನ, ಕೊಟ್ಟಾರ ಶ್ರೀ ಕೃಷ್ಣ ಭಜನಾ ಮಂದಿರ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸುರತ್ಕಲ್ ತಂಡಬೈಲ್ ಶ್ರೀ ಮಾರಿಯಮ್ಮ ದೇವಸ್ಥಾನ, ಹೊಸಬೆಟ್ಟು ಶ್ರೀ ಕೋರದ್ಧಬ್ಬು ದೈವಸ್ಥಾನ, ತೋಕುರು ಶ್ರೀ ಪಿಲಿಚಾಮುಂಡಿ ದೈವಸ್ಥಾನ ಹೀಗೆ ಹಲವಾರು ದೇವಸ್ಥಾನ ಮತ್ತು ದೈವಸ್ಥಾನಗಳ ವಾಷಿ೯ಕ ಉತ್ಸವಗಳಿಗೆ ಹಾಗೂ ಮೂರರಿಂದ ನಾಲ್ಕು ನಾಗಮಂಡಲಗಳಿಗೆ ವಾರ್ಷಿಕ ವಿದ್ಯುತ್ ದೀಪಾಲಂಕಾರವನ್ನು ಮಾಡುತ್ತಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುಕುಮಾರ್ ವಿದ್ಯೆಗೆ ಹೆಚ್ಚಿನ ಪೋತ್ಸಾಹ ನೀಡುವುದರ ಜೊತೆಗೆ ಸ್ವಂತ ಖರ್ಚಿನಲ್ಲಿ ಕೆಲವರಿಗೆ ಉಚಿತ ವಿದ್ಯುತ್ ಸಂಪರ್ಕದ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಕಲಾ ಕಂಭ ಸಾಂಸ್ಕೃತಿಕ ವೇದಿಕೆ, ಕುಳಾಯಿ ಉರ್ವ ಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನ ಉತ್ಸವ ಸಮಿತಿ ಮತ್ತು ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಕ್ಕೆ ಭಾಜನರಾಗಿದ್ದಾರೆ .
ತನ್ನ ಸಂಸ್ಥೆಯು ಈ ಮಟ್ಟಕ್ಕೆ ಬೆಳೆಯಲು ಕಚ್ಚೂರು ಶ್ರೀ ನಾಗೇಶ್ವರ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವರ ಅನುಗ್ರಹದಿಂದ ಎಂದು ಭಕ್ತಿಪೂರ್ವಕವಾಗಿ ಹೇಳಿಕೊಳ್ಳುವ ಸುಕುಮಾರ್ ಕುಳಾಯಿ ಉರ್ಬನ್ ಪಿಂಟೊ ಸುರತ್ಕಲ್ ಇವರ ಮಾರ್ಗದರ್ಶನ ಮತ್ತು ಕುಶಲ್ ಪೂಜಾರಿ ಕಿನ್ನಗೋಳಿ ಹಾಗೂ ರೋನಾಲ್ಡ್ ಪಿರೇರಾ ಸುರತ್ಕಲ್ ಇವರೆಲ್ಲರ ಪೋತ್ಸಾಹವನ್ನೂ ನೆನೆಯುತ್ತಾ ತಮ್ಮ ಸಂತಸವನ್ನು ಭಂಡಾರಿ ವಾತೆ೯ಯೊಂದಿಗೆ ಹಂಚಿಕೊಂಡರು.
ಕುಳಾಯಿ ಹೊನ್ನಕಟ್ಟೆ ಮನೆಯಲ್ಲಿ ತಾಯಿ ಶ್ರೀಮತಿ ಸೀತಾ ನಾರಾಯಣ ಭಂಡಾರಿ ಮತ್ತು ಪತ್ನಿ ಶ್ರೀಮತಿ ವಿಜಯಲಕ್ಷ್ಮೀ ಸುಕುಮಾರ್ ಹಾಗೂ ಪುತ್ರಿ ಕುಮಾರಿ ಯಶ್ವಿತಾರೊಂದಿಗೆ ಸಂತಸ ಜೀವನ ನಡೆಸುತ್ತಿರುವ ಸುಕುಮಾರ್ ಕುಳಾಯಿಯವರಿಗೆ ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ.
ಇವರ ಸಮಾಜಸೇವೆ ನಿರಂತರವಾಗಿ ಮುಂದುವರಿಯಲಿ ಹಾಗೂ ಇವರ ಉದ್ದಿಮೆ ಇನ್ನಷ್ಟು ಪ್ರಗತಿ ಪಥದಲ್ಲಿ ಸಾಗಲಿ ಎನ್ನುತ್ತಾ ಭಗವಂತನ ಸಂಪೂರ್ಣ ಅನುಗ್ರಹ ಶ್ರೀ ಸುಕುಮಾರ್ ಕುಳಾಯಿ ಮತ್ತು ಇವರ ಕುಟುಂಬವರ್ಗದವರ ಮೇಲಿರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.