ತುಲು ಭಾಷೆಯಲ್ಲಿ ” ತಾಲಿಯೆ” ಎಂಬ ಒಂದು ಶಭ್ದ ಇದೆ. ಈ ಪದಕ್ಕೆ ಮೂರು ಅರ್ಥಗಳು ಇದೆ. ಸಾಮಾನ್ಯವಾಗಿ ಎಲ್ಲಾ ತುಲುವರು ಈ ಪದಗಳನ್ನು ಬಳಸುತ್ತಾರೆ. ತಾಲಿಯೆ ಎಂದರೆ ಕನ್ನಡದಲ್ಲಿ ಜೇಡ. ತುಲುವರು ಮೇಲಿಂದ ಕೆಳಗೆ ಕುಸಿದು, ಜಾರಿ, ಆಯತಪ್ಪಿ, ಉದುರಿ ಬಿದ್ದರೆ,”ಆಯೆ ತಾಲಿಯೆ” ಎನ್ನುವರು. ಇನ್ನು ತುಲು ಭಾಷೆಯಲ್ಲಿ ಕರೆಯುವ “ತಾಲಿಯೆ ತಪ್ಪು” ಅಥವಾ“ತಾಲಿಯೆ ಸೊಪ್ಪು”.
ಜೇಡನು ಕೀಟನೂ ಅಲ್ಲ. ಪ್ರಾಣಿಯೂ ಅಲ್ಲ.ಅದೊಂದು ಜೀವ ದಂತು. ಇದಕ್ಕೆ ಎಂಟು ಕಾಲುಗಳಿವೆ. ಎರಡು ಬೇಟೆ ಆಡುವ ದವಡೆ ಅಥವಾ ಸೊಂಡಿಲು ಇದೆ. ಆರೆಂಟು ಕಣ್ಣುಗಳಿವೆ. ಜೇಡನು ಗಿಡಮರಗಳಿಂದ ಕೆಳಗೆ ಉದುರುತ್ತದೆ. ನಮ್ಮ ಕಣ್ಣಿಗೆ ಅದು ಇಳಿದು ಬಂದಂತೆ ಕಂಡರೂ ಅದು ಮಾತ್ರ ತನ್ನ ನೂಲಿನಿಂದ ನೆಲವನ್ನು ಸೇರುತ್ತದೆ. ಹೊಳೆಗಳ ಎರಡೂ ದಡಗಳಿಗೆ ತನ್ನ ನೆಟ್ ರಚಿಸಿ ದಾಟುತ್ತದೆ.ತನ್ನ ಶರೀರದ ಹಿಂಭಾಗದಿಂದ ಒಡಲ ನೂಲನ್ನು ಸ್ರವಿಸಿ ಹಿಂಭಾಗದ ಕಾಲುಗಳಲ್ಲಿ ಕೆಲವೇ ನಿಮಿಷಗಳಲ್ಲಿ ಆಕರ್ಷ ವಾದ ಬಲೆಯನ್ನು ನೇಯುತ್ತವೆ. ಇಳಿದು ನೂಲಿನಲ್ಲಿ ಜಾರುತ್ತಾ ನೆಲವನ್ನು ಸೇರುತ್ತವೆ. ಆದರೆ ಮನುಷ್ಯ ಹಾಗಲ್ಲ.
“ಕುಕ್ಕು ತಾಲಿ ಲೆಕೊ”(ಮಾವಿನ ಕಾಯಿ ಉದುರಿದಂತೆ)ತಾಲಿಯೆ ಎನ್ನುವರು. ಅಂದಿನ ತುಲುವರು ಈ ಬೀಳುವಿಕೆಯನ್ನು ಜೇಡನ ಬೀಳುವಿಕೆಗೆ ಹೋಲಿಸಿದ್ದಾರೆ. ಇಲ್ಲಿ ತಾಲಿಯೆ ಎಂದರೆ ಎತ್ತರದಿಂದ ಬೀಳುವುದು.
ಔಷಧೀಯ ಗುಣ ಉಳ್ಳ ತಾಲಿಯೆ ಸೊಪ್ಪಿನ ರಸವನ್ನು ಹಿಂಡಿ ನಡು ನೆತ್ತಿಗೆ ಹಾಕುವರು ತುಲುನಾಡ್ ಜನರು. ಇದಕ್ಕೆ“ತಿಪಲೆ ಪಾಡುನು”ಎನ್ನುವರು. ಇದು ದೇಹಕ್ಕೆ ತಂಪು. ಶೀತ ಆಗದೆ ತಲೆನೋವು ಬರುವ ವ್ಯಕ್ತಿಗಳಿಗೆ ತಿಪಲೆ ಮದ್ದು ದಿವ್ಯ ಔಷಧಿ ಆಗಿದೆ. ತಿಪಲೆ ಹಾಕಿ ಒಂದೆರಡು ಗಂಟೆಯ ಬಳಿಕ ತಪಲೆಯಲ್ಲಿ ನೀರು ಹೊಯ್ದರೆ ತಲೆನೋವು ನಿಂತು ಮೂಗಿನಲ್ಲಿ ಶೀತ ಹರಿದು ಹೋಗುವುದು. ಕಣ್ಣುಗಳಿಗೂ ಇದು ಉತ್ತಮ ಆಗಿದೆ. ತಾಲಿಯೆ ಸೊಪ್ಪಿನ ಜ್ಯೂಸ್ ಕುಡಿಯಲು ಬರುತ್ತದೆ. ಈ ತಿಪಲೆಯು ನಮ್ಮ ಕಪ್ಪ ರುಟ್ಟಿ,ಉದ್ದಿನ ದೋಸೆಯಂತೆ ಮ್ರದು ಆಗಿರುತ್ತದೆ. ಇದರ ಸೊಪ್ಪನ್ನು ಜಗಿದು ತಿನ್ನಲು ಖುಷಿ ಖುಷಿ ಎನಿಸುತ್ತದೆ. ಜಗಿದಾಗ ಜೇಡನ ನೂಲಿನಂತಹ ಗಟ್ಟಿ ವಸ್ತು ಸಿಗುತ್ತದೆ. ಅದನ್ನು ಉಗಿಯಬೇಕು. ಆಯುರ್ವೇದ ದಲ್ಲಿ ತಾಲಿಯೆ ಬಳ್ಳಿಯ ಗೆಡ್ಡೆಯು ಹಾವು ಕಚ್ಚಿದ ವಿಷವನ್ನು ತಗ್ಗಿಸಲು ಉಪಯೋಗಿಸುತ್ತಿದ್ದರು ಎಂದು ಹಿರಿಯರು ಹೇಳುವರು.
ನಮ್ಮ ಜೇಡನಿಗೂ ತಾಲಿಯೆ ಸೊಪ್ಪಿನ ಬಳ್ಳಿಗೂ ಬಹಳಷ್ಟು ಹೋಲಿಕೆಗಳನ್ನು ಅಂದಿನ ತುಲುವರು ಕಂಡಿದ್ದರು. ಈ ಕಾರಣದಿಂದಲೇ ಪ್ರಕ್ರತಿಯನ್ನು ಆರಾಧಿಸುತ್ತಿದ್ದ ಅಂದಿನ ತುಲುವರು ಈ ಬಳ್ಳಿಯನ್ನು” ತಾಲಿಯೆ ತಪ್ಪು “ಎಂದು ಕರೆದಿದ್ದಾರೆ. ಸುಮ್ಮಸುಮ್ಮನೆ ಕರೆದಿಲ್ಲ.ಈಗಲೂ ಹೆಸರು ಶಾಶ್ವತವಾಗಿ ಉಳಿದಿದೆ.
ತಾಲಿಯೆ ಸೊಪ್ಪಿನ ಒಂದು ಎಲೆಯನ್ನು ತಂದು ಅದರ ಹಿಂಭಾಗವನ್ನು ಕಂಡರೆ ಆಶ್ಚರ್ಯ ಆಗುತ್ತದೆ. ತಾಲಿಯೆ(ಜೇಡನ)ಚಿತ್ರ ಎಲೆಯಲ್ಲಿ ನೋಡಬಹುದು. ಬರೆ ಕಣ್ಣಲ್ಲಿ ಜೇಡನ ಜೆರಾಕ್ಸ್ ಎಲೆಯಲ್ಲಿ ಮೂಡಿರುವುದು ಕಂಡು ಬರುತ್ತದೆ. ಜೇಡನ ಬಲೆ(NET)ಯನ್ನೂ ಕಾಣಬಹುದು. ಜೇಡನ ಎಂಟು ಕಾಲುಗಳು ಎರಡು ಬೇಟೆ ಆಡುವ ದವಡೆ ಅಥವಾ ಕೊಂಡಿಗಳನ್ನು ನೋಡಬಹುದು. ಎಲೆಯ ರೂಪವೂ ಸಾಧಾರಣ ಜೇಡನಂತೆಯೇ ಇರುತ್ತದೆ.
ಜೇಡನ ಹೊರ ಕವಚ ದ್ರಢವಾಗಿ ಗಟ್ಟಿಯಾಗಿದೆ.ತಾಲಿಯೆ ಸೊಪ್ಪಿನ ಹೊರ ಸ್ಪರ್ಶಕ್ಕೆ ಅದೂ ಗಟ್ಟಿಯಾಗಿದೆ.ಆದರೆ ಜೇಡನ ಮ್ರದುವಾದ ಅಂಗಾಂಗ ಅದರ ದ್ರಢವಾದ ಕವಚದೊಳಗೆ ಇದೆ.ಅದರಂತೆಯೇ ತಾಲಿಯೆ ತಪ್ಪು ಇದರ ಒಳಗೆ ಬಹಳಷ್ಟು ಮ್ರದುವಾದ ದಪ್ಪವಾದ ಜ್ಯೂಸ್ ಇದೆ.ಈ ಎಲೆಯಲ್ಲಿ ಅಡಗಿರುವ ಈ ಜ್ಯೂಸ್ ಆವಿ ಆದ ಒಣಗಿದ ಎಲೆಯಲ್ಲಿ ಜೇಡನ ಬಲೆಯಂತಹ ನೆಟ್ ನೋಡಬಹುದು.
ಜೇಡನು ತನ್ನ ಒಡಲ ನೂಲನ್ನು ಹಿಂಭಾಗದಿಂದ ಸ್ರವಿಸಿ ಹಿಂಭಾಗದ ಕಾಲುಗಳಿಂದ ಬಲೆಯನ್ನು ರಚಿಸುತ್ತದೆ. ತಾಲಿಯೆ ಸೊಪ್ಪನ್ನು ಜಜ್ಜಿ ರಸ ತೆಗೆದ ನಂತರ ಜೇಡನ ನೂಲಿನಂತಿರುವ ಗಟ್ಟಿಯಾದ ನೂಲು ಸಿಗುತ್ತದೆ. ಜೇಡನ ರಕ್ತ ನೀಲಿ ಇರುವಂತೆ ತಾಲಿಯೆ ಸೊಪ್ಪಿನ ರಸವೂ ಆರಂಭದಲ್ಲಿ ನೀಲಿ ಆಗಿ ಕಾಣುವುದು. ನಂತರ ಹಸುರು ಬಣ್ಣಕ್ಕೆ ತಿರುಗುತ್ತದೆ. ತಾಲಿಯೆ ಬಳ್ಳಿಯು ಜೇಡನ ನೂಲಿನಂತೆ ಗಿಡದಿಂದ ಗಿಡಕ್ಕೆ ಎಲೆಗಳಿಂದ ಎಲೆಗಳಿಗೆ ಸುತ್ತುವರಿಯುತ್ತದೆ. ಬಹಳಷ್ಟು ದೂರದವರೆಗೆ ಆಕ್ರಮಿಸಿ ಪುಷ್ಟಿಯಾಗಿ ಬೆಳೆಯುತ್ತದೆ.
ಜೇಡನು ಹೆಚ್ಚಿನ ಬಿಸಿಲಿನ ತಾಪಕ್ಕೆ ಬದುಕಲಾರ.ನೆರಳು, ಕತ್ತಲೆ ಪ್ರದೇಶದಲ್ಲಿ ಚೆನ್ನಾಗಿ ಬದುಕತ್ತದೆ.ಅದೇ ರೀತಿ ತಾಲಿಯೆ ತಪ್ಪು ಬಳ್ಳಿಯು ಬಿಸಿಲಿನ ಬೇಗೆಯಲ್ಲಿ ಬೆಳೆಯುದ್ದಿಲ್ಲ. ತಂಪು,ನೆರಳಲ್ಲಿ ಸಮ್ರಧ್ಧಿಯಾಗಿ ಬೆಳೆಯುತ್ತದೆ. ಜೇಡನು ವಿಸರ್ಜನೆ ಮಾಡುವ ಗಟ್ಟಿಯಾದ ನೂಲಿನಂತೆ ತಾಲಿಯೆ ಸೊಪ್ಪಿನ ಬಳ್ಳಿ ಮತ್ತು ಎಲೆಯ ಒಳಗೆ ಅಡಗಿರುವ ನೂಲು ಕೂಡಾ ಗಟ್ಟಿಯಾಗಿರುತ್ತದೆ.
ಜೇಡನ ಮತ್ತು ತಾಲಿಯೆ ತಪ್ಪು ಇವುಗಳ ಹೋಲಿಕೆಗಳು ಪ್ರಕ್ರತಿ ಮಾತೆಯ ಸ್ರಷ್ಟಿ ಆಗಿದೆ. ಹಿಂದಿನ ತುಲುವರು ಪ್ರಕ್ರತಿಯನ್ನೇ ಆರಾಧಿಸುತ್ತಿದ್ದರು. ಆ ಕಾಲದಲ್ಲಿ ಆಲೋಪತಿ, ಹೋಮಿಯೋಪತಿ,ಇತರ ಪತಿಗಳು ಇದ್ದಿರಲಿಲ್ಲ. ಪ್ರಕ್ರತಿ ಕೊಟ್ಟ ಹೂವು, ಸೊಪ್ಪು, ಗೆಡ್ಡೆಗಳನ್ನೇ ಔಷಧಿಯನ್ನಾಗಿ ಸೇವಿಸುತ್ತಿದ್ದರು. ತಾಲಿಯೆ ಸೊಪ್ಪನ್ನು ಕಂಡು ಪರೀಕ್ಷಿಸಿ ಜೇಡನ ಹೋಲಿಕೆ ಕಂಡು ಜೇಡನ ಹೆಸರನ್ನೇ“ತಾಲಿಯೆ ತಪ್ಪು”ಎಂದು ಇಟ್ಟಿದ್ದರು. ಸತ್ಯವಾಗಿಯೂ ಅಂದಿನ ತುಲುವರು ದಡ್ಡರಲ್ಲ. ಜ್ಞಾನಿಗಳಾಗಿದ್ದರು.
✍️ ಇ.ಗೋ.ಭಂಡಾರಿ, ಕಾರ್ಕಳ.