ಉಡುಪಿ ಕೋಡಂಕೂರಿನ ಮಾಸ್ಟರ್ ನಿಶ್ಚಿತ್.ಎಸ್.ಭಂಡಾರಿಯವರು ಮಂಗಳೂರು ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನವೆಂಬರ್ 3, 2018 ಶನಿವಾರ ಹಮ್ಮಿಕೊಂಡಿದ್ದ 29 ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕವನ್ನು ಗಳಿಸಿದ್ದಾರೆ. ಮತ್ತು ಕಾಟಾ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕಂಚಿನ ಪದಕ ಗಳಿಸಿದ್ದಾರೆ.
ಉಡುಪಿಯ ವಾದಿರಾಜ ರಸ್ತೆಯಲ್ಲಿರುವ ಶ್ರೀ ವಿದ್ಯೋದಯ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಶ್ಚಿತ್, ಉಡುಪಿಯ ಕೋಡಂಕೂರಿನ ಶ್ರೀ ಸಂತೋಷ್ ಭಂಡಾರಿ ಮತ್ತು ಶ್ರೀಮತಿ ದಿವ್ಯಾ ಸಂತೋಷ್ ಭಂಡಾರಿಯವರ ಸುಪುತ್ರ.
ಕರಾಟೆ ಗುರುಗಳಾದ ಶ್ರೀ ಗುರುಪ್ರಸಾದ್ ಗರಡಿಯಲ್ಲಿ ಅಭ್ಯಾಸ ಮಾಡಿ, ಎಳೆವಯಸ್ಸಿನಲ್ಲಿಯೇ ಹಿರಿಯ ಸಾಧನೆ ಮಾಡಿರುವ ಮಾಸ್ಟರ್ ನಿಶ್ಚಿತ್ ಭಂಡಾರಿಯವರು ಕರಾಟೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ. ಭಗವಂತನು ಅವರಿಗೆ ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಹಾರೈಸುತ್ತದೆ.
-ಭಂಡಾರಿವಾರ್ತೆ.