ಉಡುಪಿ ತಾಲ್ಲೂಕಿನ ಕೆಮ್ಮಣ್ಣು ನಲ್ಲಿ ರಮೇಶ್ ಭಂಡಾರಿ ಮತ್ತು ಮಾಲತಿ ರಮೇಶ್ ಭಂಡಾರಿ ಯವರ ನವೀಕರಣಗೊಂಡ ಮನೆ “ವಿಘ್ನೇಶ್” ನಿಲಯದ ಗೃಹಪ್ರವೇಶವು 2018 ರ ನವೆಂಬರ್ 20 ಮತ್ತು 21 ರಂದು ಸಂಭ್ರಮದಿಂದ ನೆರವೇರಿತು.
ಅವರ ತಾಯಿ, ಅಣ್ಣ-ಅತ್ತಿಗೆಯವರಾದ ಶ್ರೀ ವಿಟ್ಟಲ್ ಭಂಡಾರಿ-ಸುಮತಿ ವಿಟ್ಟಲ್, ತನ್ಯ ಭಂಡಾರಿ-ಸರೋಜ ತನ್ಯ,ಜಯ ಭಂಡಾರಿ-ಶಾಂತಾ ಜಯ, ಕರುಣಾಕರ ಭಂಡಾರಿ, ಮುರಳೀಧರ ಭಂಡಾರಿ-ಶೋಭಾ ಮುರಳೀಧರ್, ಕೇಶವ್ ಭಂಡಾರಿ-ವಿನೋದ ಕೇಶವ್, ಜ್ಯೋತಿ ಶಿವರಾಮ ಭಂಡಾರಿ, ಮಕ್ಕಳಾದ ರೋಹನ್ ಭಂಡಾರಿ ಮತ್ತು ರಶ್ಮೀತಾ ಮತ್ತು ಅನೇಕ ಕುಟುಂಬಿಕರು, ಸ್ನೇಹಿತರು ಈ ಶುಭ ಸಂದರ್ಭದಲ್ಲಿ ಭಾಗವಹಿಸಿದರು.
ಗೃಹಪ್ರವೇಶ ಸಮಾರಂಭದ ಶುಭ ಸಂದರ್ಭದಲ್ಲಿ ಮನೆ ದೇವರಿಗೆ ಪೂಜಿಸಿ, ಗಣಹೋಮ, ಸತ್ಯನಾರಾಯಣ ಪೂಜೆ ಮಾಡಿಸಿ, ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು. ಬಂದಂತಹ ಎಲ್ಲಾ ಅತಿಥಿ ಮಹೋದಯರಿಗೆ ಭೋಜನ ಕೂಟ ಏರ್ಪಡಿಸಲಾಯಿತು.
ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಧುಗಳು, ಸ್ನೇಹಿತರು, ಆತ್ಮೀಯರು, ಸಹೋದ್ಯೋಗಿಗಳು ದಂಪತಿಗಳಿಗೆ ಶುಭ ಹಾರೈಸಿದರು.
ಪುನರ್ ನವೀಕರಣಗೊಂಡ ವಿಘ್ನೇಶ್ ನಿಲಯದಲ್ಲಿ ನಿಮ್ಮ ಸಕಲ ವಿಘ್ನಗಳೂ ನಿವಾರಣೆಗೊಂಡು, ಸುಖ ಶಾಂತಿ ನೆಮ್ಮದಿಯುತ ಜೀವನ ನಿಮ್ಮದಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”