ಬೆಂಗಳೂರಿನ ದೊಡ್ಡಬಳ್ಳಾಪುರ ದ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ತರಬೇತಿ ಕೇಂದ್ರದಲ್ಲಿ ದಿನಾಂಕ 14-11-2018 ರಿಂದ 20-11-2018ರವರೆಗೆ ನಡೆದ “ರಾಜ್ಯಮಟ್ಟದ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿ ಶಿಬಿರ” ದಲ್ಲಿ ಬುಲ್ ಬುಲ್ ಫ್ಲಾಕ್ ವಿಭಾಗದಲ್ಲಿ ದಕ್ಷಿಣಕನ್ನಡ ಜಿಲ್ಲೆಯಿಂದ ಸೂರಿಂಜೆಯ ಕು. ಸುಪ್ರೀತ ಭಂಡಾರಿಯವರು ಆಯ್ಕೆಯಾಗಿ ಯಶಸ್ವಿಯಾಗಿ ತರಬೇತಿ ಮುಗಿಸಿ ಹಿಮಾಲಯ ವುಡ್ ಬ್ಯಾಡ್ಜ್ ಗೆ ಅರ್ಹತೆ ಪಡೆದಿದ್ದಾರೆ.
“ಹಿಮಾಲಯ ವುಡ್ ಬ್ಯಾಡ್ಜ್” ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ನ ಉನ್ನತ ಅರ್ಹತಾ ತರಬೇತಿಗಳಲ್ಲಿ ಒಂದಾಗಿದ್ದು , ಈ ತರಬೇತಿ ಮುಗಿಸಿದವರು ಸ್ಕೌಟ್ಸ್ ಮತ್ತು ಗೈಡ್ಸ್ ನ ವತಿಯಿಂದ ನೀಡಲಾಗುವ ರಾಜ್ಯಪುರಸ್ಕಾರ, ರಾಷ್ಟ್ರಪತಿ ಪುರಸ್ಕಾರಕ್ಕೆ ಜಿಲ್ಲಾ ಕೇಂದ್ರದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅರ್ಹತೆಯನ್ನು ಪಡೆಯುತ್ತಾರೆ. ಜೊತೆಗೆ ಫ್ಲಾಕ್ ಲೀಡರ್ ತರಬೇತಿ ಪಡೆಯುವ ಶಿಕ್ಷಕರಿಗೆ ಪ್ರಾಥಮಿಕ ಮತ್ತು ಪ್ರೌಢ ಹಂತದ ತರಬೇತಿಯನ್ನು ನೀಡುವ ಅರ್ಹತೆ ಪಡೆಯುತ್ತಾರೆ.
ಇವರು ಪ್ರಸ್ತುತ ಸುರತ್ಕಲ್ ಕಾಟಿಪಳ್ಳದ ನೂರುಲ್ ಹುದಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಮತ್ತು ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಬುಲ್ ಬುಲ್ ಫ್ಲಾಕ್ ವಿಭಾಗದ ತರಬೇತಿದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸುರತ್ಕಲ್ ಸೂರಿಂಜೆ ಗ್ರಾಮದ ಶ್ರೀ ವಾಮನ ಭಂಡಾರಿ ಮತ್ತು ಶ್ರೀಮತಿ ಪುಷ್ಪಾ ದಂಪತಿಗಳ ಪುತ್ರಿ .
-ಭಂಡಾರಿ ವಾರ್ತೆ
Congrts chuppi….
Thnx dr