ಮಸಾಲಾಗೆ ಬೇಕಾಗುವ ಸಾಮಾಗ್ರಿಗಳು
*ಕಾಶ್ಮೀರಿ ಉದ್ದ ಮೆಣಸು-15
*ಬೆಳ್ಳುಳ್ಳಿ-12
*ಕೊತ್ತಂಬರಿ ಬೀಜಗಳು–೧ ಚಮಚ
*ಜೀರಿಗೆ– ಕಾಲು ಟೀಸ್ಪೂನ್
*ಕರಿ ಮೆಣಸು–೧೦
*ಬೇವಿನ ಸೊಪ್ಪು-15
*ಅಕ್ಕಿ ಹಿಟ್ಟು– ಎರಡೂವರೆ ಚಮಚ
*ಅರಿಶಿನ-2 ಚಮಚ
*1 ನಿಂಬೆಹಣ್ಣು
*ಹುಣಸೇಹಣ್ಣು– ನಿಂಬೆ ಗಾತ್ರದ್ದು
*ಉಪ್ಪು–ರುಚಿಗೆ ತಕ್ಕಷ್ಟು
*ತೆಂಗಿನ ಎಣ್ಣೆ–೨ ಚಮಚ
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ತೆಗೆದಿಟ್ಟ ಕೆಂಪು ಮೆಣಸನ್ನು ಹಾಕಿ ೧ ಗಂಟೆಗಳ ಕಾಲ ನೆನೆಸಿಡಿ. ಮೀನನ್ನು ಸ್ವಚ್ಛಗೊಳಿಸಿ ತೆಗೆದಿಡಿ. ಒಂದು ಪಾತ್ರೆಯಲ್ಲಿ ಉಪ್ಪು, ನಿಂಬೆರಸ, ೧ ಟೀಸ್ಪೂನ್ ಅರಿಶಿನವನ್ನ ಸೇರಿಸಿ ಕಲಸಿ. ಅದನ್ನು ಸ್ವಚ್ಚಗೊಳಿಸಿಟ್ಟ ಮೀನಿಗೆ ಸವರಿ ಬದಿಗಿಡಿ.
ಈಗ ನೆನೆಸಿಟ್ಟ ಕೆಂಪು ಮೆಣಸು, ಬೆಳ್ಳುಳ್ಳಿ ಎಸಳು, ಕೊತ್ತಂಬರಿ ಬೀಜ, ಜೀರಿಗೆ, ಕರಿ ಮೆಣಸು, ಬೇವಿನ ಸೊಪ್ಪು, ಅರಿಶಿನ, ಹುಣಿಸೇಹಣನ್ನು ಮಿಕ್ಸಿ ಜಾರಿಗೆ ಹಾಕಿ, ಬೇಕಾದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.
ಒಂದು ಪಾತ್ರೆಗೆ ನುಣ್ಣಗೆ ಅರೆದ ಮಸಾಲ, ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ತೆಂಗಿನ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ. ಮಸಾಲ ಹದವಾದ ಬಳಿಕ ಅದನ್ನು ಮೀನಿಗೆ ಸರಿಯಾಗಿ ಸವರಿ ಅರ್ಧ ಗಂಟೆವರೆಗೆ ನೆನೆಸಿಡಿ. ಬಳಿಕ ಅದನ್ನು ಅರ್ಧ ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟುಬಿಡಿ.
೧ ಗಂಟೆಯ ಬಳಿಕ ಮಧ್ಯಮ ಜ್ವಾಲೆಯಲ್ಲಿ ತವಾ ಬಿಸಿ ಮಾಡಿ. ಅದಕ್ಕೆ ಬೇಕಾದಷ್ಟು ಎಣ್ಣೆ ಹಾಕಿ ಮೀನನ್ನು ಹಾಕಿ ಕರಿಯಿರಿ. ನಸುಕಂದು, ಗರಿಗರಿಯಾಗುವವರೆಗೆ ೨ ಬದಿಯನ್ನೂ ಬೇಯಿಸಿರಿ. ತುಂಡರಿಸಿದ ಈರುಳ್ಳಿ ಹಾಗೂ ನಿಂಬೆಹಣ್ಣಿನಿಂದ ಅಲಂಕರಿಸಿ.
(ಉಳಿದ ಮಸಾಲೆಯನ್ನು ಒಂದು ಪಾತ್ರೆಯಲ್ಲಿ ಫ್ರಿಡ್ಜ್ ನಲ್ಲಿ ತೆಗೆದಿಟ್ಟರೆ ೨ ತಿಂಗಳ ಕಾಲ ಬಳಸಬಹುದು.)
✍ ತೃಪ್ತಿ ಭಂಡಾರಿ
Super reciepe
Spicy Indian fish fry😜
Awsme recipe
Good recipe.curry leaves fried in oil and added while making paste of chilly and other gives very good flavor_optional only
Super