September 20, 2024

ವರ್ಷಾಂಪ್ರತಿ ಜರಗುವ ಭಂಡಾರಿ ಸಮಾಜದ ಆರಾಧ್ಯ ದೇವರಾದ ಕಚ್ಹೂರು ನಾಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವವು ಮೇ 8 ರ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಪದ್ಧತಿಯಂತೆ ಪ್ರಾತ:ಕಾಲ ದಲ್ಲಿ ನಾಗೇಶ್ವರ ದೇವರಿಗೆ  ಎಳನೀರು (ನಾರೀಕೇಳ) ಅಭಿಷೇಕದೊಂದಿಗೆ ಉತ್ಸವ ಆರಂಭವಾಯಿತು. ಈ ಸಂದರ್ಭದಲ್ಲಿ ಎರಡು ಹನಿ ಮಳೆಯೊಂದಿಗೆ ವರುಣ ಉತ್ಸವಕ್ಕೆ ಶುಭ ಸಂಕೇತ ಕೊಟ್ಟನು .ತದ ನಂತರ ಮಂಗಳಾರತಿ, ವಿಶೇಷ ಅಲಂಕಾರ, ಮಹಾ ಮಂಗಳಾರತಿಗಳೊಂದಿಗೆ ಆರಾಧ್ಯ ದೈವ ನಾಗೇಶ್ವರನನ್ನು ಕಣ್ತುಂಬಿಕೊಳ್ಳುವ ಭಾಗ್ಯ ನೆರೆದ ಭಕ್ತರಿಗೆ ಒದಗಿತ್ತು.

ಆಗಮಿಸಿದ ಭಕ್ತರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆಯಿತ್ತು. ವಾಹನ ನಿಲುಗಡೆಯ ವ್ಯವಸ್ಥೆಯೂ ಸೂಕ್ತ ಸ್ಥಳದಲ್ಲಿ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಬೆಳಿಗ್ಗೆ ಸುಮಾರು 10.30 ರಿಂದ  12.00 ಗಂಟೆಯವರೆಗೆ  ಸಭಾಂಗಣದಲ್ಲಿ ಸಮಾಜದ ಹಿರಿಯರು ಮತ್ತು  ಬಾಲ ಕಲಾವಿದರು  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಈ ನಡುವೆ ಶ್ರೀ ನಾಗೇಶ್ವರ ಮತ್ತುಇತರ ದೇವರುಗಳಿಗೆ ವಿವಿಧ ಪೂಜಾ ಸೇವೆಗಳು ನಡೆದವು.
ವಧು-ವರ ಅನ್ವೇಷಣಾ ಕೇಂದ್ರ, ನೆರೆದ ಭಕ್ತರಿಗೆ ಅನ್ನಸಂತರ್ಪಣೆ ,ಸಾಂಸ್ಕೃತಿಕ ಕಾರ್ಯಕ್ರಮಗಳು, ನಮ್ಮ ಸಮಾಜದ  ಕಲಾವಿದರಾದ  ಪ್ರಕಾಶ್ ಕೆ  ತೂಮಿನಾಡ್ ರವರ ಎರಡು ಹಾಸ್ಯಭರಿತ ನಾಟಕ ಹಾಗೂ ಭಜನಾ ತಂಡದಿಂದ  ಭಜನೆಗಳು, ರಂಗಪೂಜೆ ಯೊಂದಿಗೆ ಈ ವರ್ಷದ ಕಚ್ಚೂರು ನಾಗೇಶ್ವರನ ಉತ್ಸವ ಸಮಾರೋಪವಾಯಿತು .

ಈ ವರ್ಷದ ಉತ್ಸವವು ವಿಜೃಂಭಣೆಯಿಂದ ನಡೆಯಲು ಮಂಗಳೂರು, ಬಂಟ್ವಾಳ , ಕಾಸರಗೋಡು , ವಿಟ್ಲಾ, ಉಳ್ಳಾಲ , ಕೈಕಂಬ , ಕಿನ್ನಿಗೋಳಿ , ಸುರತ್ಕಲ್ ಮತ್ತು ಮುಲ್ಕಿ ಭಂಡಾರಿ ಸಮಾಜ ಸಂಘಗಳನ್ನೊಳಗೊಂಡ ವಲಯ ಉತ್ಸವ ಸಮಿತಿಯ ಉಸ್ತುವಾರಿಯೊಂದಿಗೆ ,ವಲಯದ ಹಲವಾರು ಸ್ವಯಂ ಸೇವಕರ ಆಹೋರಾತ್ರಿ ಶ್ರಮದಿಂದ ಸಾಧ್ಯವಾಯಿತು . ಅವರೆಲ್ಲರನ್ನೂ ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಅಭಿನಂದಿಸುತ್ತಿದೆ .

ವರದಿ : ರಾಜಶೇಖರ್ ಭಂಡಾರಿ ಬೆಂಗಳೂರು

Leave a Reply

Your email address will not be published. Required fields are marked *