ಭಂಡಾರಿ ಸಮಾಜದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ವಿಶ್ವನಾಥ್ ಶಾಸ್ತ್ರಿ ತಾರೀಕು ಮೇ 25 , 2019 ರ ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ ಸುಮಾರು 67 ವರ್ಷ ವಯಸ್ಸಾಗಿತ್ತು.
ವಿಶ್ವನಾಥ್ ಶಾಸ್ತ್ರಿಯವರು ಪತ್ನಿ ಶ್ರೀಮತಿ ಸರಸ್ವತಿ , ಮಗ ಕಾರ್ತಿಕ್ ಶಾಸ್ತ್ರಿ, ಸೊಸೆ ಸ್ಮಿತಾ ,ಮಗಳು ಕವಿತಾ ಅಳಿಯ ನಾಗರಾಜ್ , ಕುಟುಂಬವರ್ಗ ಹಾಗೂ ಹಲವು ಬಂಧುಮಿತ್ರರನ್ನು ಅಗಲಿದ್ದಾರೆ.
ದಿವಂಗತರು ಬಾರಕೂರಿನಲ್ಲಿ ವಿಶ್ವಾಸ್ ಎಂಬ ಫೋಟೋ ಸ್ಟುಡಿಯೋ ಹೊಂದಿದ್ದರು.
ವಿಶ್ವನಾಥ್ ಶಾಸ್ತ್ರಿಯ ತಂದೆ ದಿವಂಗತ ಶ್ರೀ ರಾಮಚಂದ್ರ ಶಾಸ್ತ್ರಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನವು ಭಂಡಾರಿ ಸಮಾಜಕ್ಕೆ ದೊರಕುವ ಮೊದಲು ದೇವಸ್ಥಾನದ ಆಡಳಿತ ಮತ್ತು ಪೂಜೆಯನ್ನು ತಮ್ಮ ಕುಟುಂಬದ ಸಹಕಾರದೊಂದಿಗೆ ಉಸ್ತುವಾರಿ ವಹಿಸಿದ್ದರು .
1988 ರಲ್ಲಿ ದೇವಸ್ಥಾನವು ಸಮಾಜದ ಆಡಳಿತಕ್ಕೆ ದೊರಕಿ ಜೀರ್ಣೋದ್ಧಾರವಾದ ನಂತರ ವಿಶ್ವನಾಥ್ ಶಾಸ್ತ್ರಿಯವರನ್ನು ದೇವಸ್ಥಾನದ ಪ್ರಧಾನ ಅರ್ಚಕರನ್ನಾಗಿ ನೇಮಿಸಲಾಯಿತು. ಕಚ್ಹೂರು ಶ್ರೀ ಕ್ಷೇತ್ರದ ಈಗಿನ ಅಭಿವೃದ್ಧಿಗೆ ಶಾಸ್ತ್ರಿಗಳ ಮತ್ತು ಅವರ ಕುಟುಂಬದ ಪರಿಶ್ರಮವೂ ಅಪಾರವಾಗಿದೆ .ಅವರು ದೇವಸ್ಥಾನದ ಬೆನ್ನೆಲುಬಾಗಿದ್ದರು ಎಂದರೂ ತಪ್ಪಾಗಲಾರದು. ದೇವಸ್ಥಾನದ ಜೀರ್ಣೋದ್ದಾರದ ಸಂದರ್ಭದಲ್ಲಿ ಬರುತ್ತಿದ್ದ ಭಕ್ತ ರಿಗೆ ಅಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಕರಿಗೆ ಶಾಸ್ತ್ರಿಯವರ ಮನೆಯಲ್ಲೇ ಮಧ್ಯಾಹದ ಊಟದ ವ್ಯವಸ್ಥೆಯನ್ನುಮಾಡುತ್ತಿದ್ದರು. ಹಾಗೂ ಅದರ ಪೂರ್ಣ ಜವಾಬ್ದಾರಿಯನ್ನು ಪತ್ನಿಯಿಂದೊಡಗೂಡಿ ಇಡೀ ಕುಟುಂಬ ತುಂಬಾ ಸಂತೋಷದಿಂದ ವಹಿಸುತ್ತಿದ್ದರು. ದೇವಸ್ಥಾನಕ್ಕೆ ಸ್ವಂತ ಅಡುಗೆ ಮನೆ ವ್ಯವಸ್ಥೆ ಆಗುವವರೆಗೆ ಮಧ್ಯಾಹದ ಊಟ ಶಾಸ್ತ್ರಿಯವರ ಮನೆಯಲ್ಲೇ ಇರುತ್ತಿತ್ತು.
ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ,ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಶ್ರೀ ನಾಗೇಶ್ವರನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಭಂಡಾರಿ ವಾರ್ತೆ ಬೇಡಿಕೂಳ್ಳುತ್ತಿದೆ.
ಭಂಡಾರಿ ವಾರ್ತೆ