ಸೌರಮಾನರೀತ್ಯಾ ಉಡುಪಿಯಲ್ಲಿ ಕೃಷ್ಣಾಷ್ಟಮಿ ಆಚರಣೆ 12-09-2017 ಮತ್ತು 13-09-2017 ರಂದು ನಡೆಯುತ್ತದೆ. ವಸುದೇವನ ಪತ್ನಿ ದೇವಕಿಯ ಗರ್ಭದಲ್ಲಿ ರೋಹಿಣಿ ನಕ್ಷತ್ರದಲ್ಲಿ ಪುತ್ರರತ್ನವಾಗಿ ಸಿದ್ದ ಪುರುಷ ಶ್ರೀ ಕೃಷ್ಣ ಪರಮಾತ್ಮನ ಜನನವಾಯಿತು. ವೃಷಭ ಲಗ್ನದ ಬುಧವಾರ ಜನಿಸಿದ ಕೃಷ್ಣನ ಜಾತಕ ಈ ರೀತಿ ಇದೆ.
ಲಗ್ನಾತ್ ವ್ಯಯಾಧಿಪತಿ ಮಂಗಳ ಉಚ್ಚನಾಗಿ ವ್ಯಯಸ್ಥಾನವನ್ನು ನಾಲ್ಕನೇ ದೃಷ್ಟಿಯಲ್ಲಿ ನೋಡಿರುವುದರಿಂದ ಕಾರಾಗೃಹದಲ್ಲಿ ಜನನ. ತೃತೀಯದ ಗುರು ಉಚ್ಛನಾಗಿರುವುದರಿಂದ ಸೋದರ ಬಲರಾಮ ವೀರಾಗ್ರೇಸರ. ರವಿ ಕುಜನ ವಿಶೇಷ ದೃಷ್ಟಿ ಇದೆ. ಕೃಷ್ಣನ ತಂದೆ ಅನೇಕ ಸಂಕಷ್ಟ ಅನುಭವಿಸಿರುತ್ತಾನೆ. ಅಷ್ಟಮದ ರಾಹು ನೀಚನಾಗಿದ್ದು ಜೀವನದಲ್ಲಿ ಕೃಷ್ಣ ಭಾರೀ ಕಷ್ಟ ಅನುಭವಿಸಿದ್ದಾನೆ. ಲಗ್ನಾಧಿಪತಿ ಶುಕ್ರ 6 ನೇ ಮನೆಯಲ್ಲಿ ಶುಕ್ರ- ಶನಿ ಯೋಗದಲ್ಲಿ ಅನೇಕ ಪತ್ನಿಯರು ಈತನಿಗಿದ್ದು, ಶ್ಯಾಮಲ ವರ್ಣದವನಾಗಿರುತ್ತಾನೆ. ಪಂಚಮದ ಬುಧ ಉಚ್ಛ ದೈವಸ್ವರೂಪಿ, ಅನೇಕ ಅವತಾರ ಎತ್ತಿದವನಾಗಿರುತ್ತಾನೆ. ಕೃಷ್ಣನ ದಶಾಕಾಲವನ್ನು ಮಾನವ ಆಯುಷ್ಯ ಕ್ಕೆ ಇಳಿಸಿ ನೋಡಿದರೆ ಈ ರೀತಿ ಇದೆ. ಮೊದಲಿನ 6 ವರ್ಷ ಚಂದ್ರದಶಾ, ನಂತರದ 7 ವರ್ಷ ಕುಜದಶಾ, ಶಕಟಧೇನುಕ, ಪೂತನಾ ಸಂಹಾರ. ನಂತರದ 18 ವರ್ಷ ರಾಹುದಶಾ, ರಾಹುಭುಕ್ತಿಯಲ್ಲಿ ಕಾಳೀಯ ಮರ್ಧನ ನಂತರ ಶನಿಭುಕ್ತಿಯಲ್ಲಿ ಕಂಸನ ವಧೆ ಇಲ್ಲಿಗೆ 31 ವರ್ಷ ಕಳೆಯುತ್ತದೆ. ನಂತರ ಗುರುದಶಾ ಕಾಲ, ಪಾಂಡವರ ಪಕ್ಷಪಾತಿಯಾಗಿ ಕೌರವರ ನಾಶಕ್ಕೆ ಹೋರಾಟ. 47 ನೇ ವರ್ಷದಲ್ಲಿ ಶನಿದಶಾ ದುರ್ಯೋಗಕಾರಕ. ಇಲ್ಲಿ ತನ್ನ ಕರ್ಮದಲ್ಲಿ ಹಲವಾರು ಬದಲಾವಣೆ . ವೈರಿ ನಾಶವಾದರೂ ಚಿಂತೆ. ನಂತರದ 17 ವರ್ಷ ಬುಧ ದಶಾಕಾಲ, ಪ್ರಾಯ 83ರ ವರೆಗೆ ದೇವನಾಗಿ, ಜಗದ ರಕ್ಷಕನಾಗಿ ದ್ವಾರಕಾವಾಸ. ನಂತರದ 7ನೇ ವರ್ಷದ ವರೆಗೆ ಅಂದರೆ ಕೇತು ದಶಾಕಾಲ. ಬಂಧು ಬಾಂಧವರ ದುರ್ಮರಣ, ದ್ವಾರಕೆಗೆ ಪ್ರಳಯ, ಕೇತುದಶಾ ರಾಹು ಭುಕ್ತಿಯಲ್ಲಿ ಕೃಷ್ಣನ ಮರಣ. ಒಟ್ಟಿನಲ್ಲಿ ಕೃಷ್ಣ 87 ವರ್ಷ ಬದುಕು ಸಾಗಿಸಿರುವುದನ್ನು ಕಾಣಬಹುದು. ಮಾನವರ ದಶಾ ಪದ್ಧತಿ ಈ ರೀತಿಯಾದರೆ, ದೇವಪದ್ಧತಿಯಲ್ಲಿ ಕೃಷ್ಣವತಾರದ ಮಿತಿ 800 ವರ್ಷವಾಗಿರಬಹುದು.
ಅಂತೂ ಜಗದ ರಕ್ಷಕ ಶ್ರೀಕೃಷ್ಣ ಪರಮಾತ್ಮ ಲೋಕೋತ್ತರವಾದ ಭಗವದ್ಗೀತೆಯನ್ನು ಭೋದಿಸಿ ಗೀತಾಚಾರ್ಯನಾದುದು ಸತ್ಯ.
✍🏼 ಜ್ಯೋತಿಷಿ: ಕೆ. ಅನಂತರಾಮ ಬಂಗಾಡಿ