September 20, 2024
ಮಂಗಳೂರು ತಾಲೂಕಿನ ನ ಎಕ್ಕಾರು ಗ್ರಾಮದ ನಡುಮನೆಯ    ಶ್ರೀ ದೇವದಾಸ್ ಭಂಡಾರಿ ಮತ್ತು ಶ್ರೀಮತಿ ದಿವ್ಯಾ ದೇವದಾಸ್ ಭಂಡಾರಿ ದಂಪತಿಗಳ ಪುತ್ರ ದರ್ಶನ್ ರವರು 2018-19ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 85 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಗುರುಗಳ ವಿದ್ಯಾಸಂಸ್ಥೆಯ ಊರಿನ ಮತ್ತು ಷೋಷಕರ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು ಸರ್ಕಾರಿ ಪ್ರೌಢಶಾಲೆ ಎಕ್ಕಾರಿನ ವಿದ್ಯಾರ್ಥಿ.
ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದ್ದು ಇವರ ಸಾಧನೆಯನ್ನು ಶ್ಲಾಘಿಸುತ್ತಾ , ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
 
 
 

Leave a Reply

Your email address will not be published. Required fields are marked *