November 23, 2024
yakshangana

ಯಕ್ಷಗಾನದ ಕಾಲಘಟ್ಟ ಯಾವುದು..?

                      ಕ್ರಿಸ್ತ ಶಕ 12ನೇ ಶತಮಾನದಲ್ಲಿ ಮಲ್ಲಿನಾಥ ಪುರಾಣ, ಚಂದ್ರ ಪ್ರಭಾಪುರಾಣಗಳ ಎಕ್ಕಲಗಾಣ ಎಂಬ ಯಕ್ಷಗಾನ ಪ್ರಸಂಗಗಳು ಇದ್ದವು. ಇದು ಸತ್ಯ ಆದರೂ ಆ ಕಾಲದಲ್ಲಿಯೇ ಯಕ್ಷಗಾನ ಪ್ರಾರಂಭವಾಯಿತೇ..? ಯೋಚನೆ ಮಾಡಬೇಕಾದ ಸಂಗತಿ. ಕುಮಾರವ್ಯಾಸ (ಕ್ರಿಸ್ತ ಶಕ 1450) ರಚಿಸಿರುವ ಭಾರತದ ಪದ್ಯಗಳು, ಲಕ್ಷ್ಮೀಶನ ಜೈಮಿನಿ ಭಾರತದ ಪದ್ಯಗಳನ್ನು ಯಕ್ಷಗಾನ ಪ್ರಸಂಗದಲ್ಲಿ ಹಾಡುತ್ತಿದ್ದರು.

ಸಿದ್ದೇಂದ್ರ ಮತಿ ಎಂಬವನು ಉಡುಪಿಯಿಂದ ಯಕ್ಷಗಾನವನ್ನು ಆಂಧ್ರ ಪ್ರದೇಶದಕ್ಕೆ ತೆಗೆದು ಕೊಂಡು ಹೋದನಂತೆ. ಕ್ರಿಸ್ತ ಶಕ 1750 – 1850 ಅವನ ಕಾಲಘಟ್ಟ ಎಂದು ಹೇಳಲಾಗುತ್ತದೆ. ಕ್ರಿಸ್ತ ಶಕ 1564ನೇ ಇಸವಿಯಲ್ಲಿ ವಿಷ್ಣು ಎಂಬ ಕವಿ “ವಿರಾಟ ಪರ್ವ” ಎಂಬ ಪ್ರಸಂಗ ರಚಿಸಿದ್ದನಂತೆ. ಇದನ್ನು ದಿ।ಡಾ। ಕಾರಂತರು ಬರೆದಿರುವ ಕಾಲ ನಿರ್ಣಯ ದಲ್ಲಿ ಹೇಳಿದ್ದಾರೆ.

16ನೇ ಶತಮಾನದಲ್ಲಿ ಮೇಳಗಳು ಇದ್ದವು ಎಂದು ಹೇಳುವುದಕ್ಕೆ ಕೆಲವು ಆಧಾರಗಳು ಇವೆ. ಕೂಡ್ಲು ಮೇಳ 1920ನೇ ಇಸವಿಯಲ್ಲಿ ಪ್ರಾರಂಭವಾಯಿತು. ಧರ್ಮಸ್ಥಳ ಮೇಳ 1860 ನೇ ಇಸವಿಯಲ್ಲಿ ಪ್ರಾರಂಭವಾಯಿತು. ಮೈಸೂರು ಅರಮನೆಯಲ್ಲಿ ಈ ಮೇಳಗಳ ಯಕ್ಷಗಾನ ಪ್ರದರ್ಶನಗಳು ನಡೆದಿದ್ದವು.

ಇಡಗುಂಜಿ ಮೇಳ 1934ನೇ ಇಸವಿಯಲ್ಲಿ ಪ್ರಾರಂಭವಾಯಿತು. ಕರ್ಕಿ ಮೇಳ ಕ್ರಿಸ್ತ ಶಕ 1800ನೇ ಇಸವಿಯಲ್ಲಿ ಸ್ಥಾಪನೆಗೊಂಡಿತು. ಕಟೀಲು ಮೇಳಕ್ಕೆ 110 ವರ್ಷಗಳ ಇತಿಹಾಸ ಇದೆ.

ಕನ್ನಡ ಅನುವಾದ: ✍🏻 ಎಸ್ ಕೆ ಬಂಗಾಡಿ
ಮೂಲ: ದಿ। ಕೆ ಅನಂತರಾಮ ಬಂಗಾಡಿ ಯವರು ಬರೆದ ” ತುಳು ಯಕ್ಷಗಾನ “ (ತುಳು ಕೃತಿ)

Leave a Reply

Your email address will not be published. Required fields are marked *