“ಏನಿದ್ದರೇನಂತೆ ಈಶಾನ್ಯ ಇಲ್ಲದಿದ್ದೊಡೆ” ಈ ಮಾತು ವಾಸ್ತು ಶಾಸ್ತ್ರದಲ್ಲಿ ಎಷ್ಟು ಸರಿ..?
ವಾಸ್ತು ಶಾಸ್ತ್ರದಲ್ಲಿ ಈಶಾನ್ಯ ದಿಕ್ಕು ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂಬುದನ್ನು ನಾವು ಇಲ್ಲಿ ತಿಳಿದುಕೊಳ್ಳೋಣ, ಈಶಾನ್ಯದ ಅಧಿಪತಿ ಗುರು. ಸಾಮಾನ್ಯವಾಗಿ ಪೂರ್ವಕ್ಕೆ ಹಾಗೂ ಉತ್ತರಕ್ಕೆ ರಸ್ತೆ ಸೇರುವ ಮೂಲೆಯೇ ಈಶಾನ್ಯವಾಗುತ್ತದೆ. ಅಷ್ಟ ದಿಕ್ಕುಗಳಲ್ಲಿ ಈಶಾನ್ಯ ಬಹಳ ಮುಖ್ಯವಾದದ್ದು.
ಈಶಾನ್ಯವು ಪೂರ್ವ ದಿಕ್ಕಿನತ್ತ ಬೆಳೆದಿದ್ದರೆ, ಧನವಂತರಾಗಿ ಕೀರ್ತಿ ಪ್ರತಿಷ್ಠೆಯುಳ್ಳವರಾಗಿ ಧರ್ಮ ಬುದ್ಧಿಯುಳ್ಳವರಾಗಿರುತ್ತಾರೆ. ಈ ಭಾಗ ಉತ್ತರ ದಿಕ್ಕಿನತ್ತ ಬೆಳೆದಿದ್ದರೆ ಧನವಂತರಾಗಿ ಜಿಪುಣರು ಆಗಿರುತ್ತಾರೆ.
ವಾಸ್ತು ಶಾಸ್ತ್ರದಲ್ಲಿ ವಾಸ್ತುವಿನ ವಾಸ್ತವಾಂಶಗಳನ್ನು ನಿಜವಾಗಿ ತಿಳಿಸುವುದೆ ಈಶಾನ್ಯದ ಭಾಗ. ಈ ಭಾಗದಲ್ಲಿ ತಗ್ಗು, ಹಳ್ಳ, ಬಾವಿ, ಕೆರೆ, ನದಿ ಹೀಗೆ ಇಳಿಜಾರು ಇದ್ದರೆ ವಂಶಾಭಿವೃದ್ದಿಯುಂಟಾಗಿ ದೆಶೆಯಲ್ಲಿ ಬದಲಾವಣೆಯಾಗಿ ಅಷ್ಟೈಶ್ವರ್ಯಗಳು ಪ್ರಾಪ್ತವಾಗುತ್ತದೆ.
ಆವರಣಕ್ಕೆ ಆಗಲಿ, ಮನೆಗೆ ಆಗಲಿ, ಈಶಾನ್ಯವಿಲ್ಲದೆ ಇದ್ದರೆ ದರಿದ್ರದ ಜೊತೆಗೆ ಕೆಟ್ಟ ಪರಿಣಾಮಗಳನ್ನು ಗೃಹಸ್ಥರು ಅನುಭವಿಸ ಬೇಕಾಗುತ್ತದೆ. ಅಡುಗೆ ಮನೆ ಈಶಾನ್ಯದಲ್ಲಿ ಇದ್ದರೆ ಕುಟುಂಬ ಕಲಹ, ಹಣ ನಿಲ್ಲದೆ ಖರ್ಚು ಆಗುತ್ತದೆ.
ಪೂರ್ವದ ಕಡೆ ಈಶಾನ್ಯ ಇಲ್ಲವಾದರೇ ಮನೆಯ ಯಜಮಾನನ ಮೇಲೆ, ಹಿರಿಯ ಮಗನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನೆಯ ಮಗ ಮನೆಯಲ್ಲಿ ಇಲ್ಲವಾಗುತ್ತಾನೆ. ಆದ್ದರಿಂದಲೇ “ಏನಿದ್ದರೇನಂತೆ ಈಶಾನ್ಯವಿಲ್ಲದಿದ್ದೊಡೆ ” ಎಂದು ಹೇಳಲಾಗುತ್ತದೆ. ಏನು ಇದ್ದರೇನು ಈಶಾನ್ಯ ಇಲ್ಲವಾದರೇ ಏನು ಪ್ರಯೋಜನ ಎಂದರ್ಥ. ಗುರು ಗ್ರಹದ ದೃಷ್ಟಿ ಇಲ್ಲವಾದರೆ/ಗುರುವಿನ ಬಲವಿಲ್ಲವಾದರೇ ಮಕ್ಕಳೇ ಇರುವುದಿಲ್ಲ. ಈಶಾನ್ಯ ದಿಕ್ಕು ಪೂರ್ವ ಪುಣ್ಯ ಸ್ಥಾನವೆಂದು ಕರೆಯಬಹುದು.
ಶುಭವಾಗಲಿ