November 25, 2024
37

ಅಪ್ಪ ನೆಟ್ಟ ಆಲದ ಮರ ಅಂತಲೋ

ಮಾವಿನ ಮರ ಅಂತಲೋ

ನಾನು ನೇಣು ಹಾಕಿ ಕೊಳ್ಳಲಾರೆ

ಅಂದ ನನ್ನ ಮಗ

ನಾನು ದಂಗಾದೆ

ಟ್ವಿಟ್ಟರ್ ವಾಟ್ಸಪ್ ಫೇಸ್ಬುಕ್

ಅಂತ 24ಗಂಟೆ ಇರಬೇಡ

ಮೊಬೈಲ್ ನಲ್ಲಿ

ಸ್ವಲ್ಪ ಓದು ಅಂದದ್ದಕ್ಕೆ

ನಿಮ್ಮ ಕಾಲದಲ್ಲಿ ಅದೆಲ್ಲಾ

ಇರಲಿಲ್ಲ

ಅದಕ್ಕೆ ಹೊಟ್ಟೆ ಕಿಚ್ಚು ಅಂದ

ನಾನು ದಂಗಾದೆ

ಹಿರಿಯರಾಗಿ ಕಿರಿಯರಿಗೆ

ಬುದ್ದಿ ಹೇಳಿದ್ರೆ

ಅದು ಹೊಟ್ಟೆ ಕಿಚ್ಚೇ

ಸಕ್ಕರೆ ಕಾಯಿಲೆಯವ

ಸಕ್ಕರೆ ತಿನ್ನುವವರ ಕಂಡು

ಜಾಸ್ತಿ ಸಕ್ಕರೆ ತಿನ್ನಬೇಡಿ

ಅಂದರೆ

ಕುಡಿದು ಲಿವರ್ ಕಳಕೊಂಡವ

ಕುಡಿಯುವವರಿಗೆ

ಕುಡಿಯಬೇಡಿ

ಅಂದರೆ

ಓದದೆ ಫೇಲ್ ಆದವ

ಓದದವರಿಗೆ ಓದಿ

ಅಂದರೆ

ಹೊಟ್ಟೆ ಕಿಚ್ಚೇ

ಕೇಳಿದರೆ ಸಾಕು ಅಂತಾನೆ

ಜನರೇಶನ್ ಗ್ಯಾಪ್

ನಮ್ಮಪ್ಪ ನಮ್ಮಮ್ಮ

ಹೇಳಿದ್ದನ್ನು ನಾವು

ಕೇಳಿದ್ದೇವೆ

ಆದರೆ ನಮ್ಮ ಮಕ್ಕಳೇಕೆ

ಕೇಳೋಲ್ಲ

ಸುಮ್ಮನೆ ಇದ್ದೀಯಾ

ನನ್ ಶರ್ಟ್ ಗೆ

ಇಸ್ತ್ರಿ ಮಾಡು

ಮಗ ಅಂದಾಗ ಪೆಚ್ಚಾಗಿ

ನಗು ತಂದುಕೊಂಡು ಎದ್ದೆ

ನನ್ ಅಪ್ಪನ ಬಾರುಕೋಲು

ನೆನಪಾಯಿತು

ಆದರೆ ಏನು ಮಾಡುವುದು

ಫೀಸ್ ಫಿಲ್ಮ್ ಪಾಸ್

ಬಟ್ಟೆ ಬರೆಗೆ

ದುಡ್ಡು ಕೊಡುವುದು

ಮಾತ್ರ ನನ್ನ ಕೆಲಸ

ನಾನು ಹಣ ಇರಲೇ ಬೇಕಾದ

ಎಟಿಎಂ

ಏನ್ ಮಾಡೋದು

ಜನರೇಶನ್ ಗ್ಯಾಪ್

ಸುಧಾಕರ್ ಬನ್ನಂಜೆ

 

Leave a Reply

Your email address will not be published. Required fields are marked *